ಶಸ್ತ್ರಪಾಣಿ ತೇಜಸ್ವಿನಿ

ಶಸ್ತ್ರಪಾಣಿ ತೇಜಸ್ವಿನಿ
ನಮೋ ಸ್ಪೂರ್ತಿಸಿಂಹಿಣಿ || ಪ ||

ಕಡುದಾಸ್ಯದ ಕಗ್ಗತ್ತಲ
ಕಾರೊಡಲಲಿ ಮೊಳಮೊಳಗಿದ
ಸ್ವಾತಂತ್ರದ ಯುಗವಾಣಿ
ಹೋರಾಟದ ರಣಹಾದಿಯ
ಖಡ್ಗದ ಮಿಂಚಲಿ ಬೆಳಗಿದ
ಕಡುಗಲಿ ಝಾನ್ಸೀರಾಣಿ || 1 ||

ಬಿಡಲೊಲ್ಲೆನು ಅಂಗುಲ ನೆಲ
ಕೊಡಬಲ್ಲೆನು ಪ್ರಾಣವನೇ
ಎಂದು ಗರ್ಜಿಸಿದೆ ಸೆಣಸಿ
ಅರ್ಪಿಸುತಲಿ ತನುಮನಧನ
ಸ್ವದೇಶರಕ್ಷೆಗೆ ಜೀವನ
ಹಿರಿಯಾದರ್ಶನ ನಿಲಿಸಿ || 2 ||

ಇತಿಹಾಸದಿ ಅಜರಾಮರ
ಶತಮಾನದ ಸ್ವರ್ಣಾಕ್ಷರ
ಝಾನ್ಸಿಯ ದ್ವಾರದ ಸಮರ
ಉನ್ನತ ಅಶ್ವಾರೋಹಿಣಿ
ನಾಡಿನ ಮಹೋಪಕಾರಿಣಿ
ಧವಳಕೀರ್ತಿರೂಪಿಣಿ || 3 ||

Leave a Reply

Your email address will not be published. Required fields are marked *

*

code