ಸಾಗರ ಹಿಮಗಿರಿ ಶೋಭಿತ ಧರೆಯ (ಘೋಷ್ : ಕೇದಾರ್)

ಸಾಗರ ಹಿಮಗಿರಿ ಶೋಭಿತ ಧರೆಯ ಬಾಳಿಸೆ ಬೆಳಗಿಸೆ ಸಜ್ಜಾಗಿ || ಪ || ದೇಶದ ಹಿರಿಮೆಯ ಗರಿಮೆಯ ಹಾಡನು ಘೋಷದ ನಡೆಯಲಿ ನುಡಿಸುವೆವು || 1 || ಕರಕರ ಹಿಡಿದರೆ ಪರಿಪರಿಕರಣವನು ಮೊರೆಯಲಿ ಭರದಲಿ ವಾದ್ಯದ ಸ್ವರವು || 2 ||

Read More

ಸಮರತೂರ್ಯವು ಮೊಳಗಿ

ಸಮರತೂರ್ಯವು ಮೊಳಗಿ ವಿಜಯಭೇರಿಯು ಗುಡುಗಿ ಹೇಡಿಗಳ ವೀರರಾಗಿಸುವ ಹೊತ್ತು ವಿಸ್ಮೃತಿಯ ಗುಹೆಯಿಂದ ಕೇಸರಿಯೆ ಹೊರಹೊರಡು ವಿಶ್ವವನೆ ಗೆಲ್ಲುವಾಕಾಂಕ್ಷೆ ಹೊತ್ತು || ಪ || ಸಮರಾಂಗಣದ ನಡುವೆ ಸಾವಿರಲಿ ನೋವಿರಲಿ ನೋಡದಿರು ಓಡದಿರು ಸರಿದು ಹಿಂದೆ ಕಲ್ಲೆದೆಯ ಕಡುಗಲಿಯೆ ಸಾಗು ರಣಕೇಸರಿಯೆ ಜಯಪರಂಪರೆಯ ಸಾಧಿಸುತ ಮುಂದೆ || 1 || ಅಂಜುವುದು ಅಳುಕುವುದು ಹಿಂಜರಿದು ಕೂರುವುದು ಗಂಡೆದೆಗೆ ತರವಲ್ಲ ಸಮರವೀರ ಬಾಳಿನುದ್ದಕು ಹೆಜ್ಜೆ ಹೆಜ್ಜೆಗೂ ಹೋರಾಟ ನಡೆಸಿ ವಿಶ್ವವನೆ ಬದಲಿಸುವ ಬಾರ || 2 || ಉಂಡುಟ್ಟು ಅದಕೆಂದೆ […]

Read More

ಸತ್ಪಥ ದೃಢವ್ರತಗಳ ಪೋಷಣೆಗೆ

ಸತ್ಪಥ ದೃಢವ್ರತಗಳ ಪೋಷಣೆಗೆ ಜೀವನ ಬೆಳಗುವ ಪರಿವರ್ತನೆ ಸಕಾಲವೀ ಸಂಕ್ರಾಂತಿಯ ಘಳಿಗೆ || ಪ || ಚೇತನಹೀನತೆ ಆಶಾಶೂನ್ಯತೆ ಸೀಳಿ ಬೀಸಿದೆ ಶುಭಕ್ರಾಂತಿಯ ಸವಿಗಾಳಿ ರವಿಸಂಚಾರದಿ ಬೆಳೆಯುವ ಬೆಳಕಿನ ಹರಕೆ ಪಾವನವೀ ಸಂಕ್ರಾಂತಿಯ ದಿನಕೆ || 1 || ಕುಗ್ಗುವ ಅಜ್ಞಾನದ ತಿಮಿರದ ಹೆಗ್ಗಡಲು ಚದುರೋಡುವ ಕೆಡುಕಿನ ಕಾರ್ಮುಗಿಲು ಸಗ್ಗದ ಪಥ ಉತ್ತರಾಯನವು ತೆರೆದವೊಲು ಹಿರಿಹಿಗ್ಗಿದೆ ಸುಜ್ಞಾನದ ಹಗಲು || 2 || ಜಡತೆಯನಾಂತಿಹ ಸೃಷ್ಟಿಗೆ ದೃಷ್ಟಿಯ ನೀಡಿ ಯಶಪ್ರಾಪ್ತಿಗೆ ಹೊಸ ದಾರಿಯ ಮಾಡಿ ತಿಮಿರವಿನಾಶದ ಋಜುವಿಜಯದ […]

Read More

ಶಸ್ತ್ರಪಾಣಿ ತೇಜಸ್ವಿನಿ

ಶಸ್ತ್ರಪಾಣಿ ತೇಜಸ್ವಿನಿ ನಮೋ ಸ್ಪೂರ್ತಿಸಿಂಹಿಣಿ || ಪ || ಕಡುದಾಸ್ಯದ ಕಗ್ಗತ್ತಲ ಕಾರೊಡಲಲಿ ಮೊಳಮೊಳಗಿದ ಸ್ವಾತಂತ್ರದ ಯುಗವಾಣಿ ಹೋರಾಟದ ರಣಹಾದಿಯ ಖಡ್ಗದ ಮಿಂಚಲಿ ಬೆಳಗಿದ ಕಡುಗಲಿ ಝಾನ್ಸೀರಾಣಿ || 1 || ಬಿಡಲೊಲ್ಲೆನು ಅಂಗುಲ ನೆಲ ಕೊಡಬಲ್ಲೆನು ಪ್ರಾಣವನೇ ಎಂದು ಗರ್ಜಿಸಿದೆ ಸೆಣಸಿ ಅರ್ಪಿಸುತಲಿ ತನುಮನಧನ ಸ್ವದೇಶರಕ್ಷೆಗೆ ಜೀವನ ಹಿರಿಯಾದರ್ಶನ ನಿಲಿಸಿ || 2 || ಇತಿಹಾಸದಿ ಅಜರಾಮರ ಶತಮಾನದ ಸ್ವರ್ಣಾಕ್ಷರ ಝಾನ್ಸಿಯ ದ್ವಾರದ ಸಮರ ಉನ್ನತ ಅಶ್ವಾರೋಹಿಣಿ ನಾಡಿನ ಮಹೋಪಕಾರಿಣಿ ಧವಳಕೀರ್ತಿರೂಪಿಣಿ || 3 ||

Read More

ವಿನಮ್ರ ಭಾವದಿ ವಂದನೆ ಸಲಿಸುತ

ವಿನಮ್ರ ಭಾವದಿ ವಂದನೆ ಸಲಿಸುತ ಗೈಯುವ ಈ ದಿನ ಶ್ರೀಗುರುಪೂಜನ || ಪ || ಉಜ್ವಲವೆಮ್ಮದು ಆರ್ಯಸಂಸ್ಕೃತಿ ಸಾರುತಲಿದೆ ಧ್ವಜ ಅದರದೆ ಕೀರ್ತಿ ಭಗವಾಧ್ವಜವಿದು ಗುರುಭಾರತಿ ಭಾರತಸಂತಾನಕೆ ಶುಭಭೂಷಣ || 1 || ತ್ಯಾಗ ತಪಸ್ಯಾ ವೈಭವ ಶೋಭಿತ ವಿಜಯ ಪರಾಕ್ರಮಗಳ ಸಂಕೇತ ಕ್ರಾಂತಿಯ ಶಾಂತಿಯ ಕೂಡಿಸಿದಂತಿದೆ ಧ್ವಜದಲಿ ಭಗವಾವರ್ಣದ ಮಿಲನ || 2 || ರಾಷ್ಟ್ರದ ಸೇವೆಗೆ ತ್ಯಾಗವ ಗೈಯುವ ವೈಭವ ಶಿಖರಕೆ ರಾಷ್ಟ್ರವನೊಯ್ಯುವ ಹಾರುತ ಮೆರೆಯಲಿ ಧ್ವಜವಿದು ಭಗವಾ ನೀಡುತ ಲೋಕಕೆ ಮಹಾನ ಬೋಧನ […]

Read More

ವಿಜಯದಶಮಿಗಳೆನಿತೊ ಕಳೆದರು

ವಿಜಯದಶಮಿಗಳೆನಿತೊ ಕಳೆದರು ತೀರದಿದೆ ದಿಗ್ವಿಜಯದಾಹ ಹೃದಯ ಹೃದಯದಿ ವಿಜಯಗಳಿಸುವ ದೇಶಪ್ರೇಮದ ದಿವ್ಯ ಮೋಹ || ಪ || ಹಿಂದುಭೂಮಿಯ ಬಸಿರಿನಾಳದ ಎನಿತೊ ದಿನಗಳ ಕನಸಿನಾಸೆ ಭಗವೆಯಾರಾಧಕರ ರೂಪವ ಧರಿಸಿ ಬಂದಿದೆ ವಿಜಯ ಗಳಿಸೆ || 1 || ಅಂದು ಜನಿಸಿದ ನಿತ್ಯಯಜ್ಞದ ಊಧ್ರ್ವಜ್ವಾಲೆಗೆ ಆಜ್ಯವೆರೆದು ಸಂದುಹೋದನು ಜನ್ಮದಾತನು ಸಂಘಜ್ಯೋತಿಯ ಅಮರ ಗೈದು || 2 || ಘೋರ ಹಾಲಾಹಲವ ಕುಡಿದರು ಬಾಳುತಿರುವುದು ಬೆಳೆಯುತಿಹುದು ಭಂಗವಿಲ್ಲವು ಸಂಘಶಕ್ತಿಗೆ ವಿಜಯರಥವನು ಸೆಳೆಯುತಿಹುದು || 3 ||

Read More

ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ

ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ ಸ್ವದೇಶ ಸ್ವಧರ್ಮಗಳನುರಾಗಿ                       || ಪ || ಸೀತಾಬರ್ಡಿಯ ಕಿಲ್ಲೆಯ ಮೇಲೆ ದಾಸ್ಯದ ಧ್ವಜ ಹಾರಾಡುತಲಿರಲು ಕೊಠಡಿಯ ನೆಲದಿಂ ಕೋಟೆಯ ಒಳಕೆ ಅಗೆದು ಸುರಂಗವ ಅದ ಕಿತ್ತೆಸೆಯುವ ಸಾಹಸ ಸ್ಪುರಿಸಿತು ಹಸುಳೆಯ ಮನದಿ        || 1 || ಆಂಗ್ಲ ಗುಲಾಮಿಯ ವೀಕ್ಷಕನೋರ್ವ ಶಾಲೆಯ ದ್ವಾರದಿ ಕಾಲನ್ನಿಡಲು ಸಿಡಿಯಿತದೋs ‘ವಂದೇ ಮಾತರಂ’ ಸಾವಿರ ಕಂಠದ ಸಿಡಿಲಿನ ಘೋಷ […]

Read More

ಮೊದಲನೆಯ ನಮಸ್ಕಾರ

ಮೊದಲನೆಯ ನಮಸ್ಕಾರ…. ಉದಯೋನ್ಮುಖ ಭಾಸ್ಕರಗೆ ತೇಜೋರಾಶಿಯ ದೊರೆಗೆ || 1 || ಎರಡನೆಯ ನಮಸ್ಕಾರ…. ಗೈವೆವು ಯಜ್ಞೇಶ್ವರಗೆ ಪ್ರಭುಸೇವಕ ಪಾವಕಗೆ || 2 || ಮೂರನೆಯ ನಮಸ್ಕಾರ…. ಜಲದೇವತೆ ವರುಣನಿಗೆ ಜೀವನರಸದಾತನಿಗೆ || 3 || ನಾಲ್ಕನೆಯ ನಮಸ್ಕಾರ…. ಸನ್ಮಾತೆ ವಸುಂಧರೆಗೆ ಆಶ್ರಯದಾತೆಗೆ ಧರೆಗೆ || 4 || ಐದನೆಯ ನಮಸ್ಕಾರ…. ಗೈವೆವು ಶ್ರೀ ಭಾರತಿಗೆ ಸನ್ಮಾನದ ಮೂರುತಿಗೆ || 5 || ಆರನೆಯ ನಮಸ್ಕಾರ…. ಜನನೀಜನಕರ ಅಡಿಗೆ ವಾತ್ಸಲ್ಯದ ವಾರಿಧಿಗೆ || 6 || ಏಳನೆಯ […]

Read More

ಮಾತೃಮಂದಿರದೊಳಗಿದೋ ಬಾ

ಮಾತೃಮಂದಿರದೊಳಗಿದೋ ಬಾ ಬೆಳಗಿಸಲು ಶುಭ ಆರತಿ || ಪ || ಅಳಿದಿರಲು ಹಿಂದಿನದು ಗರಿಮೆ ಬಂಧನದೊಳಿರೆ ಮಾತೆ ಪ್ರತಿಮೆ ವಿಭವ ಸಂಪದಹೀನ ಪ್ರತಿಮೆಯ ನಗ್ನತೆಯೆ ತಾ ಕರೆಯುತಿಹುದು || 1 || ಇಂದು ನಡೆಯಲಿ ಮಾತೃವಂದನ ಕಡಿದು ಬೀಳಲಿ ತಾಯ ಬಂಧನ ಕೋಟಿ ಕಂಠದಿ ಗರ್ಜಿಸಲಿ ರಣವಾದ್ಯ ತಾ ತಾಯ್ನೆಲದ ಜಯಕೆ || 2 || ತೂರ್ಯಘೋಷವು ಮೊಳಗುತಿರಲು ದೀಪಜ್ಯೋತಿಯು ಬೆಳಗುತಿರಲು ಕರುಣೆಯಿಂದೆದೆ ತುಂಬಿ ವೀಣೆಯು ತಾನೆ ತಾ ಝೇಂಕರಿಸುತಿರಲು || 3 ||

Read More

ಭಾರತದಾಲಯ ಬಿರಿಯುತಿದೆ

ಭಾರತದಾಲಯ ಬಿರಿಯುತಿದೆ ಗೃಹದೊಡತಿಯ ಕಣ್ಣುರಿಯುತಿದೆ || ಪ || ವಾಯವ್ಯದ ದ್ವಾರದ ಹಿಮಪಂಕ್ತಿಯ ರಂಗೋಲೆ ವನರಾಜಿಯ ತೋರಣದುಯ್ಯಾಲೆ ವೈರಿಯ ಪದಘಾತಕೆ ಕರಸೆಳೆತಕೆ ಸಿಲುಕುತಲೆ ಹುಡಿಯಾಗುರುಳಿದೆ ಮಣ್ಣಿನ ಮೇಲೆ ! || 1 || ನಂಬಿಕೆ ನಿದ್ದೆಯ ದ್ರೋಹದ ದಾಳಿಯು ಕಡಿವ ಪರಿ ಕೈದಿಯದೋ ಹಿಮಶಿಖರದ ಪ್ರಹರಿ; ಬುಟ್ಟಿಯೊಳೇಳುವ ನಾಗರ ನಿಟ್ಟುಸಿರನು ಮೀರಿ ಏರಿಳಿಯುತಲಿದೆ ಸಿಂಧೂಲಹರಿ ! || 2 || ಚಿತ್ರಾಂಗದೆ ಚರಿಸಿದ ರವಿಯುದಯದ ಸೀಮೆಯಲಿ ಧರ್ಮಜನನುಜಗೆ ಧಿಕ್ಕಾರದುಲಿ ! ಕ್ರಾಂತಿಯ ನೆಲೆ ಗಂಗಾ ತೀರದ ಬಂಗಾಲದಲಿ […]

Read More