ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು ! ದೂರದಡವಿಯೊಳೆಲ್ಲಿ ಲೌಕಿಕ ವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೋ, – ಮೇಣ್ ಎಲ್ಲಿ ಜೀವವು ತಿಳಿಯದೋ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿಯರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ, ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ […]
ಹಿಂದುತ್ವದರಮನೆಯ ತೋರಣ ಬಂಧುತ್ವದೆದೆದನಿಯ ಶ್ರವಣಾ ಶ್ರಾವಣದ ಪೂರ್ಣಿಮೆಯ ದಿನದ ರಕ್ಷಾಬಂಧನ || ಪ || ಸಂಸ್ಕೃತಿಯ ಸೌಧದಲಿ ಗೈದು ವೀರವ್ರತ ಸತ್ಕೃತಿಯ ಶಪಥ ಭಕ್ತಿಯಲಿ ಮುನ್ನಡೆದು ಬುವಿ ಬಾನ್ಗೆ ಕೈಮುಗಿದು ಹರಕೆ ಪಡೆದು ಪೌರುಷವನುರೆ ಮೆರೆಸಿ ತಾಯ್ನೆಲದ ಕಣಕಣದ ಋಣವ ಹರಿಸಿ ಮನುಜತೆಗೆ ದಿವ್ಯತೆಯ ತರಲಿದುವೆ ತೊಡಿರೈ ಅಮರ ಸೂತ್ರ || 1 || ಹಿಂದುಹಿಂದುವಿನೆದೆಯ ಒಂದುಗೂಡಿಸುವ ಈ ಸ್ನೇಹಸೂತ್ರ ಜನ್ಮಭೂಮಿಯ ಜನರ ರಕ್ಷಣಾಕವಚ ಕಾವಲಿನ ಶಸ್ತ್ರ ಅರಿಗೆಲ್ಲಿ ಇನ್ನುಳಿವು ಪಟುಭಟರೆ ನೀಡಿರೈ ಖಡ್ಗ ಹಸ್ತ ನೆಲದೊಲವನಿದೊ […]
ಹಿಂದುತ್ವಕಾವರಿಸಿದೆಲ್ಲ ಕಿಲ್ಬಿಷ ಸುಟ್ಟು ಸ್ವತ್ವ, ಸಿಂಹತ್ವ ಮೆರೆಯಿಸಲು ಬನ್ನಿ ಸ್ವಾರ್ಥ ಜಡತೆಯ ತೊರೆದು ಸ್ವಾಭಿಮಾನವ ತಳೆದು ಮರೆತ ಬಂಧುತ್ವ ಗುರುತಿಸಲು ಬನ್ನಿ || ಪ || ಹೋಳುಹೋಳಾಗಿಸಿದ ಕೀಳರಿಮೆಗೀಳುಗಳ ಸಾಕಿದ್ದು ಸಾಕಿನ್ನು ಭೇದಭಾವ ಎಲ್ಲರದು ಕೈಹಿಡಿದು ಒಲ್ಲದರ ಕಾಲ್ವಿಡಿದು ದುಡಿದುಡಿದು ಬೆಸೆಯೋಣ ನಾಡ ಜೀವ || 1 || ನವ ಪ್ರಾಣದಾಯಿನಿಯೆ ಚೈತನ್ಯವಾಹಿನಿಯೆ ಧ್ಯೇಯಭಾಗೀರಥಿಯೆ ಬಾರ ಬಾರ ಚಕ್ರಗಳ ಸಂಚಾರ ವಕ್ರಗಳ ಸಂಹಾರ ಉದ್ಘಾಟಿಸಲಿ ನಿನ್ನ ಹೊನಲುದಾರ || 2 || ಬೆಳೆಬೆಳೆಯಲಿಂದಿಲ್ಲಿ ಜನಮನದ ಹೊಲದಲ್ಲಿ ಧರ್ಮದನುರಾಗ […]
ಹೊಕ್ಕವರುಂಟು ಸಿಂಹದ ಗುಹೆಯ ಬಂದವರೆಷ್ಟು ಹೇಳೋ ಗೆಳೆಯ? || ಪ || ಹೇಳುವೆ ಕೇಳು ಧೈರ್ಯವ ತಾಳು ಅಂಥಾ ಧೀರನ ಕಥೆಯ ಹೊಕ್ಕು ಗುಹೆಯೊಳು ಹಿಡಿದು ದಾಡಿಯ ಎಳೆದಾಡಿದಂಥ ವಿಷಯ || 1 || ಭಾರತ ಪುತ್ರ ಯುವಜನಮಿತ್ರ ಕ್ರಾಂತಿಯ ಕಡುಗಲಿ ನೇತ ಶಸ್ತ್ರಸಮರಕೆ ಕಟ್ಟಿ ಸಂಸ್ಥೆಯ ಹೆಣೆದನು ಹಿಡಿದನು ಸೂತ್ರ || 2 || ಬಾಲ್ಯದಿ ಗೈದ ವೀರ ಪ್ರತಿಜ್ಞೆ ಮರೆಯದೆ ಜೀವನ ಪೂರ್ತಿ ಕಾಲ ದೇಶದ ಎಲ್ಲೆಯಾಚೆಗು ಹಬ್ಬಿ ಹೋದಂಥ ಕೀರ್ತಿ || 3 […]
ಹುಟ್ಟಿದವರೆಷ್ಟೋ ಯುಗಾದಿಯ ದಿನ ಹೊಸ ಯುಗಾದಿ ಸೃಷ್ಟಿಸಿದವರೆಷ್ಟು ಜನ? || ಪ || ಹಾಗೂ ಒಬ್ಬರು ಅವರೂ ಅವರನ್ನೂ ಹಡೆದದ್ದು ಯುಗಾದಿ ಹಿಡಿದದ್ದು ಹೊಸ ಹಾದಿ ಪಡೆದದ್ದು ಮುಳ್ಳಿನ ಗಾದಿ ನುಡಿದದ್ದು ನಡೆದದ್ದು ದುಡಿದದ್ದು ದೇಶಕ್ಕೆ ಭದ್ರ ಬುನಾದಿ ಹರಿಸಿದ್ದು ಜೀವನದ ಜೀವನದಿ ಸೇರಿದ್ದು ಯುವಮನದ ನಿಸ್ಸೀಮ ಜಲಧಿ || 1 || ತುರ್ತಿನ ವರ್ತುಲ ಸುತ್ತಿಸುವ ಕಡಲುಗಳ್ಳರ ಬೀಸುಗತ್ತಿಗೆ ಹೆದ್ದೆರೆ ಸಾಯುವುದಿಲ್ಲ ಅವರನ್ನಳಿಸಲು ಕಾಯುವುದಿಲ್ಲ ಅಳಿಸಿ ತಳಕಿಳಿಸಲು ನೋಯುವುದಿಲ್ಲ || 2 || ದಡದಲ್ಲಿ ದೃಢವಾಗಿ […]
ಹಿಮಗಿರಿಯಿಂದಿಳಿಯುತಲಿದೆ ಪಶುಚೀನದ ವಿಷಧಾರೆ ಹಿಂಗಿಸೆ ಶಂಕರರಾಗುತ ಏಳಿರಿ ಭಾರತ ಸುತರೆ || ಪ || ಕಳೆದಿದೆ – ಒಣ ಹೆಮ್ಮೆಯ ತಳೆಯುತ ಮೂಲೆಯಲೊರಗುತ ಕನವರಿಸುವ ಕಾಲ ಕಳೆದಿದೆ ಸರಕಾರದಿ ವಿಶ್ವಾಸವನಿರಿಸುವ ಕಾಲ ! || 1 || ಇತಿಹಾಸದ ಪುಟಪುಟದಲಿ ಪುಟಿಯುವ ರಕ್ತಾಕ್ಷರಗಳ ಕೆಳಗೆ ಹೊಸ ಹಸ್ತಾಕ್ಷರಗಳ ಅಂಕಿತಗೊಳಿಸಲು ಸ್ಥಳ ಕಾದಿದೆ ನಿಮಗೆ ! || 2 ||
ಹಿಮಗಿರಿಗು ಹಿಂದುಸಾಗರಕು ನಡುವೆ ಭಾರತದ ಶತಕಗಳ ಸುಖದುಃಖ ಪದರಗಳು ಮೈಮುರಿದು ದಾಸ್ಯ ದೌರ್ಬಲ್ಯ, ನೈರಾಶ್ಯಗಳ ಪರದೆಗಳ ಹರಿದು ದಿಕ್ಕುದಿಕ್ಕಿನ ಹೊಡೆತ ಒತ್ತಡಕೆ ಉಬ್ಬುತಲಿ ಮೊಳೆತು ಮೇಲೆದ್ದು ಬೆಳೆಯಿತು ದಿಬ್ಬ ಮಹೋನ್ನತ ಪರ್ವತವೆ ಕಡೆಗಾಯ್ತು, ಅಬ್ಬ ! || ಪ || ಸುತ್ತೆಲ್ಲ ಹಸುರು ವನ ಪಸರಿಸುತ ಹತ್ತಿ ನೆತ್ತಿಯನೇರಿ ನಿಲ್ಲಲಾಶಿಸಿದಾಗ ನಸುನಕ್ಕು ಮೈ ಝಾಡಿಸಿತು ನಗದೇಹ. ಒಳಗೆಲ್ಲ ನೂರು ಸಮರದ ನೋವು ಕೊತಕೊತನೆ ಕುದಿವೆದೆಯ ಯಾತನೆಯ ಕಾವು ಹಬೆಯ ಬೇಗೆಗೆ ಸಿಲುಕಿ ಅಪಜಯದ ಬೇರುಗಳ ಸಾವು ! […]
ಹಗಲಿರುಳಿನಾಗಸದ ಹಿಮಗಿರಿಯ ಕಂದರದ ವಿಸ್ತಾರ ಸಾಗರದ ಸಾಮ್ರಾಜ್ಞಿ ತಾಯೆ || ಪ || ಭವ್ಯ ಚೇತನದಿರವು ದಿವ್ಯ ದರ್ಶನದರಿವು ದೊರೆವಂತೆ ಹರಸೆಮ್ಮ ಓ ಮಾತೃಹೃದಯೆ ! || 1 || ಹೃದಯಶ್ರುತಿ ತೀವ್ರತೆಗೆ ಆವುದೋ ನಾದಸುಧೆ ಬಂದೆಮ್ಮ ಕಿವಿಗಳಿಗೆ ಕೇಳಿಸಿದ ಹಾಗೆ || 2 || ಇಂದ್ರಧನುವನೆ ತಂದು ತಿಂದು ನೋಡಿದ ಹಾಗೆ ಅವ್ಯಕ್ತ ಆನಂದ ನಿನ್ನಡಿಯಲೆಮಗೆ ! || 3 ||
ಸಿಂಧುಸಾಗರದಿಂದ ಮಾರುತ ಬಂದು ಬಯಸುತ ಸ್ವಾಗತ ಹಿಂದುಹಿಂದುವು ಬನ್ನಿರಿಲ್ಲಿಗೆ ದೇವಸನ್ನಿಧಿಗೆನ್ನುತ || ಪ || ಪೂರ್ವದಿಕ್ಕಿನ ದ್ವಾರದ್ವಾರಕು ಹಸುರು ಘಟ್ಟದ ತೋರಣ ಕೆಳಗೆ ಪಶ್ಚಿಮ ತೀರದುದ್ದಕು ನೀಲವಾರಿಧಿಯಂಗಣ ನಡುವೆ ಅರಳಿದ ಬಾಳಸಂಪದವಿಲ್ಲಿ ಬಂಧುರ ಸುಂದರ ತಲೆಯ ತೂಗುವ ತಂಪನೆರೆಯುವ ತೆಂಗುಕಂಗಿನ ಹಂದರ || 1 || ವರುಷವೈದರ ಹಿಂದೆ ಶ್ರಾವಣ ಬಹುಳ ಅಷ್ಟಮಿ ಹಬ್ಬದ ದಿನವೆ ಜನಿಸಿತು ಭರದಿ ಬೆಳೆಯಿತು ವಿಶ್ವಹಿಂದೂಪರಿಷದ ತೀರ್ಥರಾಜ ಪ್ರಯಾಗ ಕ್ಷೇತ್ರದಿ ಕುಂಭಪರ್ವದಿ ಕಲೆಯುತ ವಿಶ್ವದಗಲಕು ಕುಡಿಯ ಚಾಚಿತು ಕುಡಿದು ತಾ ಧರ್ಮಾಮೃತ […]
ಸುರನದಿಯ ತೀರದಲಿ ಬೆಳ್ಳಿಗುಪ್ಪೆಗಳ ನಡುವೆ ಹಸಿರು ಶಾಂತಿಯ ತಂಪು ಹರಡಿದಾಗ ಎಷ್ಟರದು ಮೋಕ್ಷವದು ? ಕಾಲಡಿಯೆ ಸಿದ್ಧವಿದೆ ಕೊರಲೆತ್ತಿ ಕರೆದಾಗ ಆತ್ಮರಾಗ ! || ಪ || ಆದರಿಲ್ಲಿಯ ಕಥೆಯ ಕೋಟಿಕೋಟಿಯ ವ್ಯಥೆಯ ಹೇಳಿಕೇಳುವ ಭ್ರಾತೃ ಹೋಗಲಾಗದು ಹಾಗೆ ; ಓರ್ವಗೆತ್ತಣ ಮೋಕ್ಷ ? ಕ್ಷುದ್ರವದು ಬಲು ಕ್ಷುದ್ರ ರಾಷ್ಟ್ರಮುಕ್ತಿಯ ದೀಕ್ಷೆ ಕೈಗೊಂಡು ನಿಂತವಗೆ ! || 1 || ತಾಯ್ನೆಲದ ಧೂಳಿನೆಲೆ ತ್ಯಾಗಮಯ ಬಾಳಿನಲೆ ಸವೆಯುತಿಹ ದಿವ್ಯಾತ್ಮದಾವರಣವಿದು ದೇಹ ; ಕರ್ತೃತ್ವದೌನ್ನತ್ಯಕೇರೇರ್ದು ಕರಕರಗಿ ಭಾರತವ ಬೆಸೆಯುತಿಹ […]