ಜಯ ಜಯ ಭಾರತ ಜನನಿ ನಮೋ
ಭಾರತ ಜನನಿ ನಮೋ ನಮೋ || ಪ ||
ಆರ್ಯ ಭೂಮಿ ಋಷಿಯತಿಗಳ ನಾಡು
ದೇವ ವಾಣಿ ಧರೆಗಳಿದಿಹ ಬೀಡು
ಸರಸಜಲದ ಮನಮೋಹಕ ಕಾಡು
ಧವಲ ಹಿಮಾಲಯ ಪುಣ್ಯ ಮಯೀ || 1 ||
ಸಕಲ ಧರ್ಮಗಳಿಗಾಶ್ರಯದಾತೆ
ಆದ್ಯ ಸನಾತನ ಸಂಸ್ಕೃತಿ ಜಾತೆ
ವೇದ ಘೋಷ ಓಂಕಾರ ಪುನೀತೆ
ತವನಿಧಿ ಭಾರತ ಹೇ ಜನನೀ || 2 ||
ಕೋಟಿ ಕೋಟಿ ಭಾರತ ಜನಸ್ಫೂರ್ತಿ
ಜನಮನ ಬೆಳಗುವ ಮಂಗಳಮೂರ್ತಿ
ಸರ್ವತ್ಯಾಗವಿದು ಬೆಳಗಲು ಕೀರ್ತಿ
ಪ್ರಾಣದಾರತಿಯು ಹೇ ಜನನಿ || 3 ||