ನಮನ ನಮನ ನಮನ ನಮನ ನಮನ ನಮನ
ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ
ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿಗಿದೋ ನಮನ
ಭಾರತ ಮಾತೆಗಿದೋ ನಮನ ಸುತ್ತಲು ಸಾಗರ ವಸ್ತ್ರವ
ಧರಿಸಿದ ಮಾತೆಗಿದೋ ನಮನ ನಮನ ಮಾತೆಗಿದೋ ನಮನ || ಪ ||
ಕೋಟಿ ಕೋಟಿ ಕಣ್ ಕೋಟಿ ಕೋಟಿ ಕೈ ತಾಳಿ ನಿಂತರೇನು?
ಸಾಟಿಯಿಲ್ಲದ ಏಕರೂಪದ ತಾಯಿಗಿದೋ ನಮನ
ಮರಗಿಡ ಆಡಿ ತೂಗುವ ಗಾಳಿಯ ಪರಿಮಳ ನಿನ್ನುಸಿರು
ನೀ ಧರಿಸಿರುವ ಪೀತಾಂಬರಗಳು ಶಾಲಿ ವನದ ಹಸಿರು
ಹಗಲಲಿ ಸೂರ್ಯ ಇರುಳಲಿ ಚಂದ್ರ ನಿನ್ನ ಹಣೆಯ ತಿಲಕ
ಎಂಥ ಶ್ರೀಮಂತ ರೂಪ ನಿನ್ನನು ನೋಡಿ ನಮಗೆ ಪುಳಕ
ಪುಳಕ ನೋಡಿ ನಮಗೆ ಪುಳಕ ಶಕ್ತಿಗಿದೋ ನಮನ
ಭಾರತ ಮಾತೆಗಿದೋ ನಮನ || 1 ||
ಕೈ ಕೈ ಸೇರಿಸಿ ನಗುತ ನಿಲ್ಲೋಣ ತಾಯ ಸುತ್ತ ನಾವೂ
ಅವಳ ಪಾಲನೆ ರಕ್ಷಣೆಗಾಗಿ ಎದುರಿಸೋಣ ನೋವು
ಎಲ್ಲ ದೇವರಿಗೂ ಹಿರಿಯ ದೇವಿ ಈ ತಾಯಿಯ ವೈಭವಕೆ
ಎಲ್ಲ ಭೇದಗಳ ಚೆಲ್ಲಿ ಬಾಳೋಣ ಬೇರೆ ಪೂಜೆಯಾಕೆ? ಯಾಕೆ?
ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿಗಿದೋ ನಮನ
ಭಾರತ ಮಾತೆಗಿದೋ ನಮನ || 2 ||