ಹಿಂದುತ್ವದರಮನೆಯ ತೋರಣ

ಹಿಂದುತ್ವದರಮನೆಯ ತೋರಣ
ಬಂಧುತ್ವದೆದೆದನಿಯ ಶ್ರವಣಾ
ಶ್ರಾವಣದ ಪೂರ್ಣಿಮೆಯ ದಿನದ ರಕ್ಷಾಬಂಧನ || ಪ ||

ಸಂಸ್ಕೃತಿಯ ಸೌಧದಲಿ ಗೈದು ವೀರವ್ರತ ಸತ್ಕೃತಿಯ ಶಪಥ
ಭಕ್ತಿಯಲಿ ಮುನ್ನಡೆದು ಬುವಿ ಬಾನ್ಗೆ ಕೈಮುಗಿದು ಹರಕೆ ಪಡೆದು
ಪೌರುಷವನುರೆ ಮೆರೆಸಿ ತಾಯ್ನೆಲದ ಕಣಕಣದ ಋಣವ ಹರಿಸಿ
ಮನುಜತೆಗೆ ದಿವ್ಯತೆಯ ತರಲಿದುವೆ ತೊಡಿರೈ ಅಮರ ಸೂತ್ರ || 1 ||

ಹಿಂದುಹಿಂದುವಿನೆದೆಯ ಒಂದುಗೂಡಿಸುವ ಈ ಸ್ನೇಹಸೂತ್ರ
ಜನ್ಮಭೂಮಿಯ ಜನರ ರಕ್ಷಣಾಕವಚ ಕಾವಲಿನ ಶಸ್ತ್ರ
ಅರಿಗೆಲ್ಲಿ ಇನ್ನುಳಿವು ಪಟುಭಟರೆ ನೀಡಿರೈ ಖಡ್ಗ ಹಸ್ತ
ನೆಲದೊಲವನಿದೊ ಕೊಳ್ಳಿ ವೈರಿಬಲವನು ಗೊಳಿಸಿರೈ ಪರಾಸ್ತ || 2 ||

Leave a Reply

Your email address will not be published. Required fields are marked *

*

code