ಹಿಂದುತ್ವಕಾವರಿಸಿದೆಲ್ಲ ಕಿಲ್ಬಿಷ ಸುಟ್ಟು

ಹಿಂದುತ್ವಕಾವರಿಸಿದೆಲ್ಲ ಕಿಲ್ಬಿಷ ಸುಟ್ಟು
ಸ್ವತ್ವ, ಸಿಂಹತ್ವ ಮೆರೆಯಿಸಲು ಬನ್ನಿ
ಸ್ವಾರ್ಥ ಜಡತೆಯ ತೊರೆದು ಸ್ವಾಭಿಮಾನವ ತಳೆದು
ಮರೆತ ಬಂಧುತ್ವ ಗುರುತಿಸಲು ಬನ್ನಿ || ಪ ||

ಹೋಳುಹೋಳಾಗಿಸಿದ ಕೀಳರಿಮೆಗೀಳುಗಳ
ಸಾಕಿದ್ದು ಸಾಕಿನ್ನು ಭೇದಭಾವ
ಎಲ್ಲರದು ಕೈಹಿಡಿದು ಒಲ್ಲದರ ಕಾಲ್ವಿಡಿದು
ದುಡಿದುಡಿದು ಬೆಸೆಯೋಣ ನಾಡ ಜೀವ || 1 ||

ನವ ಪ್ರಾಣದಾಯಿನಿಯೆ ಚೈತನ್ಯವಾಹಿನಿಯೆ
ಧ್ಯೇಯಭಾಗೀರಥಿಯೆ ಬಾರ ಬಾರ
ಚಕ್ರಗಳ ಸಂಚಾರ ವಕ್ರಗಳ ಸಂಹಾರ
ಉದ್ಘಾಟಿಸಲಿ ನಿನ್ನ ಹೊನಲುದಾರ || 2 ||

ಬೆಳೆಬೆಳೆಯಲಿಂದಿಲ್ಲಿ ಜನಮನದ ಹೊಲದಲ್ಲಿ
ಧರ್ಮದನುರಾಗ ಸಂಸ್ಕೃತಿಯ ಪ್ರೇಮ
ಬೆಳಬೆಳಗೆ ಮನದೊಳಗೆ ವಿದ್ಯುದುಸಿರನು ಪಡೆದು
ಸುಗುಣಸೌರಭದ ಸೌಂದರ್ಯಧಾಮ || 3 ||

Leave a Reply

Your email address will not be published. Required fields are marked *

*

code