ಹೊಕ್ಕವರುಂಟು ಸಿಂಹದ ಗುಹೆಯ

ಹೊಕ್ಕವರುಂಟು ಸಿಂಹದ ಗುಹೆಯ
ಬಂದವರೆಷ್ಟು ಹೇಳೋ ಗೆಳೆಯ? || ಪ ||

ಹೇಳುವೆ ಕೇಳು ಧೈರ್ಯವ ತಾಳು
ಅಂಥಾ ಧೀರನ ಕಥೆಯ
ಹೊಕ್ಕು ಗುಹೆಯೊಳು ಹಿಡಿದು ದಾಡಿಯ
ಎಳೆದಾಡಿದಂಥ ವಿಷಯ || 1 ||

ಭಾರತ ಪುತ್ರ ಯುವಜನಮಿತ್ರ
ಕ್ರಾಂತಿಯ ಕಡುಗಲಿ ನೇತ
ಶಸ್ತ್ರಸಮರಕೆ ಕಟ್ಟಿ ಸಂಸ್ಥೆಯ
ಹೆಣೆದನು ಹಿಡಿದನು ಸೂತ್ರ || 2 ||

ಬಾಲ್ಯದಿ ಗೈದ ವೀರ ಪ್ರತಿಜ್ಞೆ
ಮರೆಯದೆ ಜೀವನ ಪೂರ್ತಿ
ಕಾಲ ದೇಶದ ಎಲ್ಲೆಯಾಚೆಗು
ಹಬ್ಬಿ ಹೋದಂಥ ಕೀರ್ತಿ || 3 ||

ಸಾಗರ ದಾಟಿ ಲಂಡನ್ ಮುಟ್ಟಿ
ಸೆಳೆದನು ದೇಶ ವಿದೇಶ
ಆಂಗ್ಲ ಸಿಂಹಾಸನದ ಅಡಿಯಲಿ
ಬಾಂಬಿನಂತಾದ ಪುರುಷ || 4 ||

ಸಿಂಹದ ಗುಹೆಗೆ ಹೊಕ್ಕನು ತಾನೆ
ಇಣುಕಿದ ಸಿಂಹದ ಬಾಯ್ಗೆ
ದಂತವೆಣಿಸುತ ಒಳಹೊರಗರಿತ
ಕೊಟ್ಟನು ಮಾರ್ಮಿಕ ಹೊಡೆತ || 5 ||

ಹಡಗನು ಹಾರಿ ದಡವನು ಸೇರಿ
ಸಾಹಸ ಮೆರೆದುದದೇನು !
ಅಂಡಮಾನಿನ ಉದ್ದಂಡರನು
ದಂಡಿಸಿ ಗೆದ್ದುದದೇನು ! || 6 ||

ಕನಸು ಮನಸಲಿ ಬಾಳಿನುದ್ದಕು
ಹಿಂದೂ ರಾಷ್ಟ್ರವೆ ಉಸಿರು
ಕಡಲ ತೆರೆತೆರೆ ಗಗನ ತುಂಬುವ
ಶ್ರೀ ಸಾವರಕರ್ ಹೆಸರು || 7 ||

Leave a Reply

Your email address will not be published. Required fields are marked *

*

code