ಸಾಸಿರ ಸಾಸಿರ ಕಂಠಗಳಿಂದ ಹೊಮ್ಮುತಿಹ ಸ್ವರ ಒಂದೇ | ಭಾರತಭೂಮಿಯ ವೀರಸುಪುತ್ರರ ಧ್ಯೇಯಾದರ್ಶವು ಒಂದೇ | ಜಗದ ಜನನಿಯ ಜಯಜಯಗಾನ… ಹಿಂದೂರಾಷ್ಟ್ರದ ಪುನರುತ್ಥಾನ || ಪ || ಗಿರಿಪರ್ವತಗಳ ಶೃಂಗಗಳಿಂದ ಗುಡಿಗೋಪುರಗಳ ಶಿಖರಗಳಿಂದ ಶತವಾಹಿನಿಯರ ಲಹರಿಗಳಿಂದ ಮಾರ್ದನಿಸುತಲಿದೆ ಜಯಘೋಷ… ನವಚೈತನ್ಯದ ಸಂದೇಶ || 1 || ಸಾಸಿರ ಲಕ್ಷದ ಲಕ್ಷ್ಯವ ದಾಟಿ ಕೋಟಿ ಹೃದಯಗಳ ತಂತಿಯ ಮೀಟಿ ಲಂಘಿಸಿ ಕ್ಷಿತಿಜದ ದುರ್ಗಮ ಗಡಿಯ ಸ್ಥಾಪಿಸಿ ನೂತನ ವಿಕ್ರಮವ… ಸಾಧಿಸಿ ಗೆಲುವಿನ ಸಂಭ್ರಮವ || 2 || ಸುತ್ತಲು […]
ಆಗಸದೆತ್ತರ ಮೇಲೆದ್ದಿಹುದು ನೆಲದೆದೆಯಾಳದ ಭುಗಿಲು | ಜಾಗೃತ ಜನಶಕ್ತಿಯ ಪ್ರಖರತೆಗೆ ಕರಗಿದೆ ಕೇಡಿನ ಕಾರ್ಮುಗಿಲು || ಜೈಜೈ ಭಾರತಮಾತೆ… ಇದು ನಿನ್ನಯ ಜಯಗೀತೆ || ಪ || ಗಿರಿಪರ್ವತಗಳು ಗರ್ಜನೆಗೈದಿವೆ, ತತ್ತರಿಸಿಹುದರಿಪಡೆಯು | ಸಾಸಿರ ನದಿಗಳ ಪ್ರಬಲ ಪ್ರವಾಹಕೆ ಇನ್ನೇತರ ಅಡೆತಡೆಯು ? ಹಿಂದೂಸಾಗರ ಅಬ್ಬರದಿಂದಲಿ ಭೋರ್ಗರೆಯುತಲಿರಲು, ಜಾಗೃತ… || 1 || ಶಾಂತಿಯ ಮಂತ್ರವ ಜಪಿಸುವ ನಾಡಲಿ ಮೊಳಗಿದೆ ರಣಸಂಗೀತ ! ನಯವಂಚಕರಗಣಿತ ಷಡ್ಯಂತ್ರಕೆ ಕಾದಿದೆ ಮರ್ಮಾಘಾತ | ಅಂತಿಮ ವಿಜಯದ ಭೀಕರ ಸಮರದ ಕರೆ […]
ಭಾರತದ ಬಲವರ್ಧನೆಯೇ ಎಮ್ಮಯ ಬಾಳಿನ ಆದರ್ಶ ಧೈರ್ಯದಿ ನಾವ್ ಮುನ್ನಡೆಯುವೆವು ಸದೃಢ ರಾಷ್ಟ್ರವ ಕಟ್ಟುವೆವು ಭಾರತಿ ಜೈ ಭಾರತಿ ಭಾರತಿ ಜೈ ಜೈ || ಪ || ಛತ್ರಪತಿಯ ಮೇಲ್ಪಂಕ್ತಿಯಿರೆ ಭುಜದೊಳು ಅಕ್ಷಯ ಶಕ್ತಿಯಿರೆ ಶತ್ರು ಪಡೆಯ ಪುಡಿಗಟ್ಟುವೆವು ಸದೃಢ ರಾಷ್ಟ್ರವ ಕಟ್ಟುವೆವು || 1 || ಜಾತಿಪಂಥಗಳ ಭಿನ್ನತೆಯ ಸುಟ್ಟುರಿಸುವೆವು ಖಿನ್ನತೆಯ ಹಿಗ್ಗುತ ನಾವ್ ಮುನ್ನುಗ್ಗುವೆವು ಸದೃಢ ರಾಷ್ಟ್ರವ ಕಟ್ಟುವೆವು || 2 || ಎದುರಿಸಿ ನೂರು ಸವಾಲುಗಳ ಕಷ್ಟ ನಷ್ಟಗಳ ಸಾಲುಗಳ ಶೀಘ್ರದಿ ಗುರಿಯನು […]
ಭಾರತವೆಮ್ಮಯ ಮಾತೃಭೂಮಿ | ಪುಣ್ಯಭೂಮಿ ವೀರಭೂಮಿ || ಪ || ಎತ್ತರ ಹಿಮಗಿರಿ ಮೆರೆಯುವ ಭೂಮಿ ಸುತ್ತಲು ಸಾಗರ ಮೊರೆಯುವ ಭೂಮಿ ಸಾಸಿರ ನದಿಗಳು ಹರಿಯುವ ಭೂಮಿ ಹಸಿರಿನ ಉಡುಗೆಯ ಧರಿಸಿಹ ಭೂಮಿ || 1 || ರಾಮಕೃಷ್ಣರು ಜನಿಸಿದ ಭೂಮಿ ಚತುರ್ವೇದಗಳು ಧ್ವನಿಸಿದ ಭೂಮಿ ಸಾಧಕರಿಗೆ ಪಥದರ್ಶಕ ಭೂಮಿ ಸಾಹಸಿಗಳ ಸಮರಾಂಗಣ ಭೂಮಿ || 2 || ಭಾಷೆ ವೇಷಗಳ ವೈವಿಧ್ಯತೆಯು ದ್ವೇಷವನಳಿಸುವ ಭಾವೈಕ್ಯತೆಯು ಸರ್ವ ಸಮಾನತೆ ನಮ್ಮಯ ರೀತಿ ಏಕತೆ ಎಮ್ಮಯ ಬಾಳಿನ ನೀತಿ […]
ಗೀತಾ ಗಂಗಾ ಗೋಮಾತಾ | ಜೈಜೈಜೈ ಭಾರತಮಾತಾ || ಪ || ಉತ್ತರದಲ್ಲಿಹ ಹಿಮವಂತ ನಾಡನು ಕಾಯುವ ಬಲವಂತ ಕವಿಸಾಧಕರಿಗೆ ಅನುದಿನವೂ ಅಕ್ಷಯಸ್ಫೂರ್ತಿಯ ಕೊಡುವಾಂತ || 1 || ಸಾಸಿರನದಿಗಳ ಪುಣ್ಯಜಲ ಹರಿದಿದೆ ನಾಡಿನ ಉದ್ದಗಲ | ಸಮೃದ್ಧಿಯ ಸುಧೆಯನು ಉಣಿಸಿ ಈ ನೆಲವನು ಪಾವನಗೊಳಿಸಿ || 2 || ಮನುಜತ್ವದ ಘನಸಾಧನೆಗೆ ಅಮರತ್ವದ ಆರಾಧನೆಗೆ | ಟೊಂಕವ ಕಟ್ಟಿರಿ ಬಂಧುಗಳೆ ಗತವೈಭವ ಮರುಸ್ಥಾಪನೆಗೆ || 3 ||
ಜಲಧಿಗಿಂತ ಆಳವು, ಗಗನಕಿಂತ ಉನ್ನತ | ನಮ್ಮ ರಾಷ್ಟ್ರಭಕ್ತಿಯು, ನಮ್ಮ ನಾಡು ಭಾರತ || ಪ || ಜಗದ ಜನರು ಮಲಗಿರೆ ಕಣ್‍ತೆರೆದ ನಾಡಿದು | ಮನುಜಕುಲಕೆ ದಿವ್ಯಪಥವ ತೋರಿದಂಥ ಬೀಡಿದು || ಭಾರತಾಂಬೆಯುದರದಲ್ಲಿ ಬರಲಿ ಜನ್ಮ ಸಾಸಿರ | ಅದುವೆ ಆನಂದವೆಮಗೆ ಇಲ್ಲವಿನಿತು ಬೇಸರ || 1 || ಅನ್ನವಸನ ಶಯನಮಾತ್ರ ಬಾಳಗುರಿಯು ಅಲ್ಲವು | ನಾಡಿಗಾಗಿ ಅರ್ಪಿಸೋಣ ತನುಮನ ಧನವೆಲ್ಲವು | ನಮ್ಮದೆಂಬುದೇನು ಸಕಲ ರಾಷ್ಟ್ರ ನಮ್ಮದಾಗಿರೆ ? ನಾಡಹಿತವ ಕಾಯಲಿಂದು ಮುಂದೆ ಬನ್ನಿ […]
ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ ಧನ್ಯತೆಯ ಮೂಲವದು ಹಿಂದುಜನಕೆ | ದೈನ್ಯದುಃಖ ಹತಾಶೆ ಸಂಕಟದ ಸಮಯದೊಳು ಧೈರ್ಯವನು ತುಂಬಿಹುದು ನೊಂದಮನಕೆ || ಪ || ಜಗದ ಹೃದಯವ ಗೆದ್ದು ಮೆರೆಯುತಿಹ ಹಿಮರಾಜ ತಲೆಎತ್ತಿ ನಿಂದಿಹನು ಎತ್ತರದಲಿ | ವಜ್ರಮುಕುಟ ಹಿಮಾದ್ರಿ ಪ್ರಲಯರುದ್ರಾಲಯವು ಭದ್ರಸೀಮೆಯು ನಮಗೆ ಉತ್ತರದಲಿ || 1 || ಸಗರಕುಲಜನ ಛಲಕೆ ಒಲಿದ ಸುರನದಿ ಗಂಗೆ ನಾಕದಮೃತವನ್ನು ಉಣಿಸುತಿಹಳು | ಬರದಿ ಬೆಂದಿಹ ನೆಲಕೆ ಜಲಧಾರೆ ಹರಿಸುತಲಿ ಭುವಿಯ ಬಾಯಾರಿಕೆಯ ತಣಿಸುತಿಹಳು || 2 || […]
ಸರಿಗಮ ಸ್ವರಗಳ ಏರಿಳಿತ ಅದುವೇ ಸುಮಧುರ ಸಂಗೀತ ಸಮರಸತೆಯ ಸ್ಪಂದನ ಮಿಡಿತ ನಾಡಿನ ಐಕ್ಯದ ಸಂಕೇತ || ಪ || ಅಳಿಸಲೇಬೇಕು ನಾವಿಂದು ಮೇಲುಕೀಳುಗಳ ಅಂತರವ ರಚಿಸಲೇಬೇಕು ಸುಂದರ ಸದೃಢ ಭಾರತಮಾತೆಯ ಮಂದಿರವ || 1 || ಜಾತಿಮತಗಳ ಗೋಡೆಯ ಕೆಡವಿ ರಾಷ್ಟ್ರೀಯತೆಯು ಪ್ರವಹಿಸಲಿ ಹಿಂದುತ್ವದ ಶ್ರೀಗಂಧದ ಪರಿಮಳ ದಶದಿಶೆಗಳಿಗೂ ಪಸರಿಸಲಿ || 2 || ವಿಶ್ವಶಾಂತಿಯ ಗುರಿಸಾಧನೆಗೆ ವಿಶ್ವಾಸವೆ ಮೂಲಾಧಾರ ಭಾರತೀಯರೇ ನೀಡಲು ಬಲ್ಲೆವು ಯುಗಗಳ ಕನಸಿಗೆ ಆಕಾರ || 3 ||
ಭಾರತಮಾತೆಯ ಮಕ್ಕಳು ನಾವು ಎಂಬುವುದೆಮಗೆ ಅಭಿಮಾನ ಆಸೇತು ಹಿಮಾಚಲ ಪರ್ಯಂತ ಮೊಳಗಲಿ ತಾಯಿಯ ಜಯಗಾನ || ಪ || ಒಂದೇ ನಾಡಲಿ ಜನಿಸಿದ ಬಳಿಕ ಮೇಲುಕೀಳು ಅಂತರವೇಕೆ ? ಏಳುಬೀಳುಗಳ ಬಾಳಹಾದಿಯಲಿ ಗುರಿಯನು ಮರೆಯದಿರಿ ಜೋಕೆ || 1 || ರಾಮಕೃಷ್ಣರ ಪಾವನಭೂಮಿ ದಿವ್ಯಶಕ್ತಿಯ ಭಂಡಾರ ಶಂಕರ ಬಸವರ ಬುದ್ಧ ವಿವೇಕರ ತತ್ವಾದರ್ಶದ ಆಧಾರ || 2 || ಜನನ ಮರಣಗಳ ನಡುವಿನ ಜೀವನ ಸಾಗಲಿ ಸನ್ಮಾರ್ಗದಿ ನೇರ ಸ್ವಾರ್ಥವ ದಹಿಸಿ ಕೀರ್ತಿಯ ಗಳಿಸಿ ಗೈಯುವ ನಾಡಿನ […]
ಧರೆಯಲಿ ಸುಂದರ ಸ್ವರ್ಗವ ಸೃಜಿಸಲು ಸಮರಸಭರಿತ ಸಮಾಜವ ರಚಿಸಲು ಎಲ್ಲರು ಒಂದಾಗಿ… ಬನ್ನಿ, ಸೇವೆಗೆ ಮುಂದಾಗಿ || ಪ || ತರತಮ ಭೇದಗಳೆಲ್ಲವನಳಿಸಿ ಸರಿಸಮ ಭಾವವನೆಲ್ಲೆಡೆ ಬೆಳೆಸಿ ಹಿರಿಯರು ತೋರಿರುವ ಮೇಲ್ಪಂಕ್ತಿ ಗುರಿಸಾಧನೆಗೆ ಅದುವೇ ಶಕ್ತಿ || 1 || ದೀನದುಃಖಿಗಳ ಕಂಬನಿಯೊರೆಸಿ ಮಾನವೀಯತೆಯ ಕಂಪು ಪಸರಿಸಿ ವಂಚಿತರಿಗೂ ಅವಕಾಶವ ನೀಡಿ ಮೌನಕ್ರಾಂತಿಗೆ ನಾಂದಿಯ ಹಾಡಿ || 2 || ಮನೆಮನೆಯಾಗಲಿ ಕಾರ್ಯಾಗಾರ ಕಣಕಣವೂ ಶಕ್ತಿಯ ಭಂಡಾರ ಜನಮನದಲಿ ಮೂಡಿಸಿ ಜಾಗೃತಿಯ ಕನಸಿಗೆ ನೀಡಿರಿ ಕೃತಿಯಾಕೃತಿಯ || […]