ಆಗಸದೆತ್ತರ ಮೇಲೆದ್ದಿಹುದು

ಆಗಸದೆತ್ತರ ಮೇಲೆದ್ದಿಹುದು ನೆಲದೆದೆಯಾಳದ ಭುಗಿಲು |
ಜಾಗೃತ ಜನಶಕ್ತಿಯ ಪ್ರಖರತೆಗೆ ಕರಗಿದೆ ಕೇಡಿನ ಕಾರ್ಮುಗಿಲು ||
ಜೈಜೈ ಭಾರತಮಾತೆ… ಇದು ನಿನ್ನಯ ಜಯಗೀತೆ || ಪ ||

ಗಿರಿಪರ್ವತಗಳು ಗರ್ಜನೆಗೈದಿವೆ, ತತ್ತರಿಸಿಹುದರಿಪಡೆಯು |
ಸಾಸಿರ ನದಿಗಳ ಪ್ರಬಲ ಪ್ರವಾಹಕೆ ಇನ್ನೇತರ ಅಡೆತಡೆಯು ?
ಹಿಂದೂಸಾಗರ ಅಬ್ಬರದಿಂದಲಿ ಭೋರ್ಗರೆಯುತಲಿರಲು,
ಜಾಗೃತ… || 1 ||

ಶಾಂತಿಯ ಮಂತ್ರವ ಜಪಿಸುವ ನಾಡಲಿ ಮೊಳಗಿದೆ ರಣಸಂಗೀತ !
ನಯವಂಚಕರಗಣಿತ ಷಡ್ಯಂತ್ರಕೆ ಕಾದಿದೆ ಮರ್ಮಾಘಾತ |
ಅಂತಿಮ ವಿಜಯದ ಭೀಕರ ಸಮರದ ಕರೆ ಮೊರೆಯುತಲಿರಲು,
ಜಾಗೃತ… || 2 ||

ಸಾಗದು ಇನ್ನು ಮತಾಂತರದಾಟ, ಉಗ್ರಗಾಮಿಗಳ ಕಾಟ |
ಅರಿವಿನ ಅರುಣೋದಯ ಕಾಲವಿದು, ಚರಿತೆಯು ಕಲಿಸಿದೆ ಪಾಠ |
ಜಡತೆಯ ಮೈಮರೆವಿನ ಮೈಕೊಡವಿ ನಾಡಿದು ಮೆರೆಯುತಲಿರಲು,
ಜಾಗೃತ… || 3 ||

ಬದಲಿಸಲಾಗದು ಯುವಜನಶಕ್ತಿಯ ಒಕ್ಕೊರಲಿನ ನಿರ್ಧಾರ |
ನವನಿರ್ಮಾಣದ ಪಾವನಕಾರ್ಯಕೆ ಹಿಂದುತ್ವವೆ ಆಧಾರ |
ಹಿಂದೂರಾಷ್ಟ್ರದ ಪುನರುತ್ಥಾನದ ಸುಮುಹೂರ್ತವು ಬಂದಿರಲು,
ಜಾಗೃತ… || 4 ||

Leave a Reply

Your email address will not be published. Required fields are marked *

*

code