ಹೊಸ ನಾಡನು ಕಟ್ಟುವಾ
ಹೊಸ ಜಾಡನು ಮೆಟ್ಟುವಾ
ಹೊಸ ದಿಗಂತಗಳನು ದಾಟಿ ಭರದಿ ಗುರಿಯ ಮುಟ್ಟುವಾ || ಪ ||
ಹೊಸ ಹರೆಯದ ಕ್ಷಣಕ್ಷಣ
ಬಿಸಿ ನೆತ್ತರ ಕಣ ಕಣ
ಮುಡಿಪಾಗಲಿ ಗೈಯಲು ನಾಡಿನ ಹಿತರಕ್ಷಣ || 1 ||
ಸುತ್ತಲಿರುವ ಬಡತನ
ಜಡತೆ ಮೌಢ್ಯ ಹಗೆತನ
ಕಿತ್ತೊಗೆಯಲು ಟೊಂಕ ಕಟ್ಟಿ ಸುಮುಹೂರ್ತವು ಈ ದಿನ || 2 ||
ಹಿಂದು ಹಿತವೆ ನಾಡ ಹಿತ
ಮರೆತರೆ ಅನಾಹುತ
ಪೊಳ್ಳು ಜಾತ್ಯತೀತತೆ ಕಿತ್ತೊಗೆಯಲಿ ಭಾರತ || 3 ||
ಶತ್ರುಕುಲದ ಸಂಚನು
ಬಹುರಾಷ್ಟ್ರದ ಹೊಂಚನು
ಸುಟ್ಟುರಿಸಲು ಅಪ್ಪಳಿಸಿರಿ ಭಕ್ತಿಶಕ್ತಿ ಮಿಂಚನು || 4 ||