ಮಾತೃಭೂಮಿಯ ಸ್ಥಾನಮಾನ

ಮಾತೃಭೂಮಿಯ ಸ್ಥಾನಮಾನ ಸಂರಕ್ಷಣೆಗೆ
ಕಟಿಬದ್ಧರಾಗಿ ಬನ್ನಿ
ಶತ್ರುಪಡೆಯೊಡ್ಡಿರುವ ಸಾಸಿರ ಸವಾಲುಗಳ
ಎದುರಿಸಲು ಭರದಿ ಬನ್ನಿ… ಸಂಘಟಿತರಾಗಿ ಬನ್ನಿ || ಪ ||

ಹಿಂದುತ್ವದ್ಹೆಮ್ಮರದ ಬೇರುಗಳು ಒಣಗುತಿವೆ
ನೀರುಣಿಸಬೇಕು ನಾವೇ
ಭಾರತಾಂಬೆಯ ಒಡಲ ಬೇಗುದಿಯ ನೀಗಿಸುತ
ತಂಪುಣಿಸಬೇಕು ನಾವೇ || 1 ||

ಚರಿತೆ ದಾಖಲಿಸಿರುವ ಅಪಜಯದ ಸಾಲುಗಳ
ಗೆಲುವಾಗಿ ಬದಲಿಸೋಣ |
ಧ್ಯೇಯ ಮಾರ್ಗದೊಳಿರುವ ವಿಘ್ನ ಹೆಬ್ಬಂಡೆಗಳ
ಒಗ್ಗೂಡಿ ಕದಲಿಸೋಣ || 2 ||

ವಾಮಮಾರ್ಗವ ಪಿಡಿದ ಸಾಮ್ಯವಾದದ ಕುಟಿಲ
ಜಾಲವನು ಬಯಲುಗೊಳಿಸಿ |
ಮುಗ್ಧತೆಯ ಮುಸುಕಿರುವ ಉಗ್ರತೆಯ ಘನಘೋರ
ಸಂಚುಗಳ ವಿಫಲಗೊಳಿಸಿ || 3 ||

ಕೋಮುವಾದಿಗಳೆಂಬ ಹಣೆಪಟ್ಟಿ ಕಿತ್ತೊಗೆದು
ನಿಜರೂಪ ತೋರಬನ್ನಿ
ಹಿಂದುತ್ವ ಭಾಸ್ಕರನ ಕಾಂತಿಯುತ ಕಿರಣಗಳ
ಜಗದಗಲ ಬೀರಬನ್ನಿ || 4 ||

Leave a Reply

Your email address will not be published. Required fields are marked *

*

code