ಭಾರತವೆಮ್ಮಯ ಮಾತೃಭೂಮಿ

ಭಾರತವೆಮ್ಮಯ ಮಾತೃಭೂಮಿ |
ಪುಣ್ಯಭೂಮಿ ವೀರಭೂಮಿ || ಪ ||

ಎತ್ತರ ಹಿಮಗಿರಿ ಮೆರೆಯುವ ಭೂಮಿ
ಸುತ್ತಲು ಸಾಗರ ಮೊರೆಯುವ ಭೂಮಿ
ಸಾಸಿರ ನದಿಗಳು ಹರಿಯುವ ಭೂಮಿ
ಹಸಿರಿನ ಉಡುಗೆಯ ಧರಿಸಿಹ ಭೂಮಿ || 1 ||

ರಾಮಕೃಷ್ಣರು ಜನಿಸಿದ ಭೂಮಿ
ಚತುರ್ವೇದಗಳು ಧ್ವನಿಸಿದ ಭೂಮಿ
ಸಾಧಕರಿಗೆ ಪಥದರ್ಶಕ ಭೂಮಿ
ಸಾಹಸಿಗಳ ಸಮರಾಂಗಣ ಭೂಮಿ || 2 ||

ಭಾಷೆ ವೇಷಗಳ ವೈವಿಧ್ಯತೆಯು
ದ್ವೇಷವನಳಿಸುವ ಭಾವೈಕ್ಯತೆಯು
ಸರ್ವ ಸಮಾನತೆ ನಮ್ಮಯ ರೀತಿ
ಏಕತೆ ಎಮ್ಮಯ ಬಾಳಿನ ನೀತಿ || 3 ||

Leave a Reply

Your email address will not be published. Required fields are marked *

*

code