ಜಲಧಿಗಿಂತ ಆಳವು, ಗಗನಕಿಂತ ಉನ್ನತ

ಜಲಧಿಗಿಂತ ಆಳವು, ಗಗನಕಿಂತ ಉನ್ನತ |
ನಮ್ಮ ರಾಷ್ಟ್ರಭಕ್ತಿಯು, ನಮ್ಮ ನಾಡು ಭಾರತ || ಪ ||

ಜಗದ ಜನರು ಮಲಗಿರೆ ಕಣ್‍ತೆರೆದ ನಾಡಿದು |
ಮನುಜಕುಲಕೆ ದಿವ್ಯಪಥವ ತೋರಿದಂಥ ಬೀಡಿದು ||
ಭಾರತಾಂಬೆಯುದರದಲ್ಲಿ ಬರಲಿ ಜನ್ಮ ಸಾಸಿರ |
ಅದುವೆ ಆನಂದವೆಮಗೆ ಇಲ್ಲವಿನಿತು ಬೇಸರ || 1 ||

ಅನ್ನವಸನ ಶಯನಮಾತ್ರ ಬಾಳಗುರಿಯು ಅಲ್ಲವು |
ನಾಡಿಗಾಗಿ ಅರ್ಪಿಸೋಣ ತನುಮನ ಧನವೆಲ್ಲವು |
ನಮ್ಮದೆಂಬುದೇನು ಸಕಲ ರಾಷ್ಟ್ರ ನಮ್ಮದಾಗಿರೆ ?
ನಾಡಹಿತವ ಕಾಯಲಿಂದು ಮುಂದೆ ಬನ್ನಿ ವೀರರೆ || 2 ||

ವಿಶ್ವವೆಲ್ಲ ಒಂದುಗೂಡಿ ನಮ್ಮ ಎದುರು ನಿಂತರೂ |
ತಲೆಯ ಬಾಗೆವೆಂದೂ ನಾವು ಸ್ವಾಭಿಮಾನಭರಿತರು |
ಬಗ್ಗುಬಡಿದು ಶತ್ರುಗಳನು ನುಗ್ಗಿ ಮುಂದೆ ಮುಂದಕೆ |
ಕೋಟಿವೀರಪುತ್ರರಿರಲು ಮಾತೆಗೇಕೆ ಅಂಜಿಕೆ ? || 3 ||

Leave a Reply

Your email address will not be published. Required fields are marked *

*

code