ಸಾಸಿರ ಸಾಸಿರ ಕಂಠಗಳಿಂದ

ಸಾಸಿರ ಸಾಸಿರ ಕಂಠಗಳಿಂದ ಹೊಮ್ಮುತಿಹ ಸ್ವರ ಒಂದೇ |
ಭಾರತಭೂಮಿಯ ವೀರಸುಪುತ್ರರ ಧ್ಯೇಯಾದರ್ಶವು ಒಂದೇ |
ಜಗದ ಜನನಿಯ ಜಯಜಯಗಾನ… ಹಿಂದೂರಾಷ್ಟ್ರದ ಪುನರುತ್ಥಾನ || ಪ ||

ಗಿರಿಪರ್ವತಗಳ ಶೃಂಗಗಳಿಂದ
ಗುಡಿಗೋಪುರಗಳ ಶಿಖರಗಳಿಂದ
ಶತವಾಹಿನಿಯರ ಲಹರಿಗಳಿಂದ
ಮಾರ್ದನಿಸುತಲಿದೆ ಜಯಘೋಷ… ನವಚೈತನ್ಯದ ಸಂದೇಶ || 1 ||

ಸಾಸಿರ ಲಕ್ಷದ ಲಕ್ಷ್ಯವ ದಾಟಿ
ಕೋಟಿ ಹೃದಯಗಳ ತಂತಿಯ ಮೀಟಿ
ಲಂಘಿಸಿ ಕ್ಷಿತಿಜದ ದುರ್ಗಮ ಗಡಿಯ
ಸ್ಥಾಪಿಸಿ ನೂತನ ವಿಕ್ರಮವ… ಸಾಧಿಸಿ ಗೆಲುವಿನ ಸಂಭ್ರಮವ || 2 ||

ಸುತ್ತಲು ಕಾದಿಹ ಶತ್ರು ಸಮೂಹಕೆ
ಹೆಡೆ ಎತ್ತಿಹ ವಿಧ್ವಂಸಕ ದ್ರೋಹಕೆ
ಸತ್ತಾರೂಢರ ಭ್ರಷ್ಟಾಚಾರಕೆ
ತಕ್ಕ ಉತ್ತರವ ನೀಡುವೆವು… ನಾಡಿನ ಹಿತ ಕಾಪಾಡುವೆವು || 3 ||

Leave a Reply

Your email address will not be published. Required fields are marked *

*

code