ವಿಶ್ವ ವಂದ್ಯೆ ಜಗಜ್ಜನನಿ ನಮನ ತಾಯಿ ಭಾರತಿ ದಿವ್ಯ ಪ್ರಭೆಯ ಜ್ಞಾನ ಸುಧೆಯ ಚಿರನವೀನ ಸಾರಥಿ || ಪ || ರಜತಗಿರಿಯ ಮುಕುಟದಲ್ಲಿ ತೋರುತಿಹುದು ನಿನ್ನ ಸೊಬಗು ಪಾದಕಮಲ ತೊಳೆಯುತಿರುವ ಜಲಧಿಗುಂಟು ದಿವ್ಯಮೆರುಗು ತುಂಬಿ ತೊನೆವ ಪೈರು ಪಚ್ಚೆ ಹಸಿರುಡುಗೆಯ ಚೆಲ್ವ ಬೆಡಗು ಗಂಗೆ ತುಂಗೆ ಸಿಂಧು ಕಪಿಲೆ ಸುರನದಿಗಳ ತುಂಬು ಬಳುಕು || 1 || ಚೆಲುವಿನ ಖನಿ ಮಾತೆಗಂತೆ ಸ್ವಾಭಿಮಾನಿ ಪುತ್ರರು ಬಂಧ ಮುಕ್ತಿಗಾಗಿ ತಮ್ಮ ಉಸಿರುಸಿರನು ಕೊಟ್ಟರು ಅಪಮಾನವ ಸಹಿಸದಂಥ ಅಭಿಮಾನಿ ವೀರರು […]
ವಿಘ್ನ ವಿರೋಧದ ಹೆಡೆಯನು ಮೆಟ್ಟಿ ನಾಡನು ಕಟ್ಟಲು ಬನ್ನಿ ಕಲ್ಲು ಮುಳ್ಳುಗಳ ಪಥದಲಿ ಚಲಿಸಿ ಗುರಿಯನು ಮುಟ್ಟಲು ಬನ್ನಿ || ಪ || ಗತ ಇತಿಹಾಸದ ಪುಟ ಪುಟಗಳಲಿ ಅಡಗಿದೆ ನೀತಿಯ ಪಾಠ ಶತ ಶತಮಾನದ ಸೋಲುಗೆಲುವುಗಳ ಏಳು-ಬೀಳುಗಳ ಆಟ ಮನದಲಿ ಮನೆಮಾಡಿದ ಭಯ ಆಂಜಿಕೆ ದೂರಕೆ ಅಟ್ಟಲು ಬನ್ನಿ || 1 || ಮೈ ಮರೆವಿನ ಫಲ ಘೋರ ಭೀಕರ ರಾಷ್ಟ್ರ ವಿನಾಶಕೆ ದಾರಿ ಏಕತೆಯೊಂದೆ ತಾರಕ ಮಂತ್ರ ಎಂಬುದನೆಲ್ಲೆಡೆ ಸಾರಿ ಭೇದದ ಭಿತ್ತಿಯ ಉರುಳಿಸಿ […]
ವಾದಗಳ ಸೆರೆ ಬಿಡಿಸಿ, ಭೇದಗಳ ತೆರೆ ಸರಿಸಿ ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ || ಪ || ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ ಜೀವನದಿಯಾದಾಳು, ಭಾವಜಲವೆರೆದಾಗ ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು ಆದಾರು ಬೆಳೆದಾರು ಧ್ಯೇಯಜಲವೆರೆದಾಗ || 1 || ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ ಇರುಳಕೋಟೆಯು ಕರಗಿ ಮೂಡುವನು ವಿಜಯರವಿ ಹಾಡುವನು ಜಯಗಾನ ಚಿರವಿಹಾರಿ ಸಮೀರ || 2 || ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು […]
ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ || ಪ || ಕೋಟಿಕೋಟಿಯ ತರುಣ ಧಮನಿಯು ರಾಷ್ಟ್ರಪ್ರೇಮದ ಸ್ರೋತದಿ ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಾಗಿದೆ || 1 || ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳುಹುತ ಬೆದರದೆ ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರುಷ ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ […]
ರಾಷ್ಟ್ರದ ಪುನರುಜ್ಜೀವನ ಕಾರ್ಯಕೆ, ಆತ್ಮಾಹುತಿಯಾಗಲಿ ಇಂದೇ ತನು ಮನ ಬುದ್ಧಿ ಸ್ವಭಾವವ ತಿದ್ದುತ, ಬದುಕುವ ರಾಷ್ಟ್ರದ ಹಿತಕೆಂದೇ || ಪ || ಹೃದಯ ಹೃದಯಕೆ ಹೊತ್ತಿಸಿ ಜ್ಞಾನದ ಜ್ಯೋತಿಯ ಬೆಳಗುವ ಎಂದೇ ಜನಜಾಗೃತಿಯನು ಗೈಯ್ಯುವ […]
ರಣಮಂತ್ರದುಚ್ಚಾರ ಘನಶೌರ್ಯದೋಂಕಾರ ಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ || ಪ || ಪುನರುದಿತವಾಗುತಿದೆ ಮಾನಹತ ಪಾಣಿಪತ ವಿಜಗೀಷು ಭಾರತಕೆ ಜಯದೊಲವ ತರಲು ಚಾರಣರ ರಣಗಾನದನುರಣನದಾಹ್ವಾನ ನವಚೇತನವನಿತಿಹಾಸಕೆರೆಯುತಿರಲು || 1 || ನೆಲದೆದೆಯು ಬೇಗುದಿಯ ರುಧಿರನರ್ತನಕೆಂದು ಕುದಿವಗ್ನಿಪರ್ವತವೆ ಬಾಯ್ದೆರೆದು ಇಂದು ಬಾಗದ ಮನೋಬಲವೆ ಭಾರತದ ಭುಜಬಲವೆ ಕೊಡು ಸಾಕ್ಷಿ ಜಗದಕ್ಷಿ ನಿಜವರಿಯಲೆಂದು […]
ರಕ್ಷಾಬಂಧನ ರಕ್ಷೆಯ ದ್ಯೋತಕ ನಮ್ಮ ನಾಡಿನಾಗ ತನುಮನಧನದಿ ರಕ್ಷಣೆಯಾಗಲಿ ಹಿಂದು ಭೂಮಿ ಈಗ || ಪ || ಹಿಂದು ಭೂಮಿಯ ಮಕ್ಕಳೆಲ್ಲರು ಸೇರಿ ಸಂಘದಾಗ ರಕ್ಷೆಯ ನೂಲನು ಕಟ್ಟುತ ನಲಿವರು ಸ್ನೇಹ ಜೇನಿನ್ಹಾಂಗ ಒಂದೇ ನಾಡಿನ ಮಕ್ಕಳು ನಾವು ಭಾವನೆ ಮನದಾಗ || 1 || ಹಿಂದು ಭೂಮಿಯ ರಕ್ಷಣೆಗೈಯುವ ಶಪಥ ಹೃದಯದಾಗ ತ್ಯಾಗ ಪ್ರೇಮಗಳ ಸ್ಫೂರ್ತಿಯ ಸೆಲೆಯಿದು ಬಂಧು ಬಳಗದಾಗ ಅಣ್ಣ ತಂಗಿಯರ ಪ್ರೇಮದ ಸ್ಪಂದನ ನೂಲಿನ ಎಳೆಯಾಗ || 2 || ಅಣ್ಣನ ಬರುವಿಕೆ […]
ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ ಸ್ವರಾಷ್ಟ್ರದಾಕಾಶದಲ್ಲಿ ಸುಪ್ರಭಾತ ಸೃಜಿಸುತ || ಪ || ಏಳಿ ಏಳಿ ಬಯಲಗಾಳಿ ಸುಖಾಗಮನ ಹೇಳಿದೆ ಹೆಜ್ಜೆ ಹೆಜ್ಜೆಗೂ ಸ್ವದೇಶ ತನ್ನ ಮಹಿಮೆ ತಿಳಿಸಿದೆ ಯಜ್ಞಭೂಮಿ ಯಾಗಭೂಮಿ ತ್ಯಾಗಭೂಮಿ ಭಾರತ || 1 || ನದಿಸಮೂಹ ಮಂತ್ರ ಹಾಡಿ ನಿತ್ಯ ಸ್ಪೂರ್ತಿ ನೀಡಿದೆ ಜನರ ಮನವ ನೆಲದ ಕಣವ ಅತಿ ಪವಿತ್ರ ಮಾಡಿದೆ ಮಾತೃಭೂಮಿ ಪಿತೃಭೂಮಿ ಗುರುಸ್ವರೂಪಿ ಭಾರತ || 2 || ಅನಾದಿಯಿಂದ […]
ಯುವಜನಾಂಗ ಹೋ ಹೋ ಯುವಜನಾಂಗ ಹೋ ಯುವಜನಾಂಗವೇಳುತಿಹುದು ರಣದ ಭೇರಿ ಕಹಳೆಗೆ ಯಶೋಗಾನ ಕೇಳುತಿಹುದು ಸ್ಫೂರ್ತಿ ಎರೆದು ಬಾಳಿಗೆ || ಪ || ಹಚ್ಚಿ ಉರಿ ಪರಾನುಕರಣೆ ಹೀನ ತತ್ವ ಭ್ರಾಂತಿಗೆ ಧ್ಯೇಯ ಹಿಡಿದು ದಾರಿ ನಡೆದು ತುಷ್ಟಿಪುಷ್ಟಿ ಶಾಂತಿಗೆ || 1 || ಸ್ಮರಣೆಯರಳಿ ಕೆರಳುತಿಹುದು ದಗ್ಧ ಚಿತೆಯ ಚೇತನ ಮಥಿಸುತಿಹುದು ಕಥಿಸುತಿಹುದು ನೆನಪು ಚಿರ ಪುರಾತನ || 2 || ಬಾರಿ ಬಾರಿ ನಡೆಯಲಿಹುದು ವೈರಿ ಕುಲದ ಮರ್ದನ ದೈವ ಬಲದ ಕೈಗೆ ಜಯವು […]
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ || ಪ || ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋ ತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋ ಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ || 1 || ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋ ಉಷೆಯು ಉದಿಸಿ ಬಂದ ಹಾಗೆ ಎಲ್ಲಿ […]