ವೇದಕಾಲದಾಳದಿಂದ ಪುರಾಣಗಳ ಪೂರ್ವದಿಂದ

ವೇದಕಾಲದಾಳದಿಂದ ಪುರಾಣಗಳ ಪೂರ್ವದಿಂದ
ತತ್ತ್ವಕಾವ್ಯ ವಿಸ್ತಾರಕೆ ನಡೆ ನಿರಂತರ
ರಾಮಭರತರೊಡನೆ ಬೆರೆತು ಕೃಷ್ಣಾರ್ಜುನರೊಡನೆ ಕಲೆತು
ಬಾಹುಬಲಿಯ ಎತ್ತರಕ್ಕೆ ನಡೆ ನಿರಂತರ || ಪ ||

ಜಾತಿಮತದ ಪೊರೆಯ ಹರಿದು
ಮೌಢ್ಯ ಮೋಹದೆದೆಯ ಬಿರಿದು
ನಿಂದೆ ಸ್ತುತಿಯನೆಲ್ಲ ಗೆಲುತ ನಡೆ ನಿರಂತರ
ನೂರು ಬಗೆಯ ನೋವನುಂಗಿ | ಚಾರುಮಂದಹಾಸ ಬೆಳಗಿ
ನಾಡಿನೆಲ್ಲ ನಗಿಸಿ ನಗುತ – ನಡೆ ನಿರಂತರ || 1 ||

ಸ್ವಾಭಿಮಾನದುಸಿರ ಹಿಡಿದು ದಾಸ್ಯಮತಿಯ ನೆನಪ ತೊರೆದು
ಸಂಘದ ಸುಮಗಂಧ ಸೂಸಿ ನಡೆ ನಿರಂತರ
ಶ್ರದ್ಧೆ ಶ್ರಮವನಾರಧಿಸಿ ಧ್ಯೇಯವ್ರತವ ಪರಿಪಾಲಿಸಿ
ಚರೈವೇತಿ ಮಂತ್ರಪಠಿಸಿ – ನಡೆ ನಿರಂತರ || 2 ||

ನಡೆ ನಿರಂತರ – ನಡೆ ನಿರಂತರ
ನಿಲ್ಲದೆ ನಡೆ ನಿರಂತರ ಉತ್ತರೋತ್ತರ
ಲೋಕ ಲೋಕಕೊದಗಲಿದೆ ಹಿಂದು ಮನ್ವಂತರ
ಏಕ ಮನದಿ ಧೀರ ಪಥದಿ ನಡೆ ನಿರಂತರ || 3 ||

Leave a Reply

Your email address will not be published. Required fields are marked *

*

code