ವಂದಿಸುವೆ ಭಗವಾ ಗುಡಿ

ವಂದಿಸುವೆ ಭಗವಾ ಗುಡಿ
ಬ್ರಹ್ಮ ಕ್ಷಾತ್ರವ ಜಗದಿ ಮೆರೆಸಿದ ಹಿಂದು ತೇಜದ ಪ್ರತಿನಿಧಿ || ಪ ||

ಅರುಣ ಕಾಂತಿಯ ವಿಹಗದಂತೆ ನೀಲಗಗನದಿ ನಿನ್ನ ಲಾಸ್ಯ
ಅಗ್ನಿಶಿಖೆಯೊಲು ನಿನ್ನ ರೂಪವು ಯಜ್ಞಮಯ ಸಂಸ್ಕೃತಿಯ ಭಾಷ್ಯ
ದೇಶಧರ್ಮದ ಭಕ್ತಿ ದೀಕ್ಷೆಯು, ನಿನ್ನ ಛಾಯೆಯ ಸನ್ನಿಧಿ || 1 ||

ಏರು ಹೃದಯದ ಪೀಠದಲಿ ನಿಲಿಸಿರುವ ದೃಢಸಂಕಲ್ಪ ಸ್ತಂಭ
ಬೀರು ಸಾಹಸ ಶೀಲ ಜ್ಞಾನವ ತ್ಯಾಗ ಭಾವನೆ ಮನದಿ ತುಂಬ
ಹಾರು ವಿಶ್ವವಿಜೇತ ಕೇತನ ದಾಟಿ ನಾಡಿನ ಗಡಿಗಡಿ || 2 ||

ಭ್ರಾಂತ ತರತಮ ಕೃತಕ ಭೇದದಿ, ಕವಲುಗೊಂಡಿಹ ಹಿಂದುಸ್ರೋತ
ಒಂದುಗೂಡಿಸಿ ಐಕ್ಯಬೆಸೆಯುತ ಬಂಧುಭಾವದಿ ಓತಪ್ರೋತ
ಪ್ರಣವದಂಕಿತ ನಿನ್ನ ದರುಶನ, ಹಿಂದು ಹೆದ್ದೆರೆ ಗಾರುಡಿ || 3 ||

ನಿನ್ನ ಪೂಜೆಗೆ ತಂದಿರುವೆ ನಾ ಬಾಳಸುಮ ಸಾಧಾರಣ
ಬಣ್ಣ ಬಂಡು ಸುಗಂಧ ಅಂದಗಳೆಲ್ಲ ಸಹಿತ ಸಮರ್ಪಣ
ಅನ್ಯ ಮೋಕ್ಷವ ಮನವು ಬಯಸದು ಪೂಜ್ಯ ಗುರು ಭಗವಾಗುಡಿ || 4 ||

2 thoughts on “ವಂದಿಸುವೆ ಭಗವಾ ಗುಡಿ

    1. ಧ್ವನಿ ಸುರುಳಿಗಳನ್ನು ಹಾಕುವ ಪ್ರಯತ್ನಗಳು ಜಾರಿಯಲ್ಲಿವೆ.

    Leave a Reply

    Your email address will not be published. Required fields are marked *

    *

    code