ನಮೋ ಜ್ಞಾನದಾನಿ ಜಗದ್ಗುರುವಿಗೆ

ನಮೋ ಜ್ಞಾನದಾನಿ ಜಗದ್ಗುರುವಿಗೆ ಹೃದಯಸೌಧ ಶಿಖರವಾಸಿ ಭಗವೆಗೆ                               || ಪ || ಅಗ್ನಿಮುಖದಿ ಸಿಂಧುತಟದಿ ವೇದಪಠನ ನಡೆಸುತ ಕ್ಷಾತ್ರ ಹೃದಯದಗ್ನಿ ಉರಿಸಿ ಗಡಿಯ ರಕ್ಷೆಗೈಯುತ ವಿಜಯಸ್ಥಂಭವೇರುತಿಹುದು ಗಗನ ಸೇರಿ ಮೆರೆಯುತ ಬೆಳಕು ಬೀರಿ ಜಗಕೆ ದಾರಿ ತೋರಿದಾರ್ಯ ಸಮರ್ಪಿತ || 1 || ಭೀಷ್ಮ ದ್ರೋಣ ಪಾಂಡು ಸುತರಿಗಾಯ್ತು ವರ್ಗ ದ್ವಾಪರ ಗೀತೆಯೊರೆದ ಕೃಷ್ಣನಲ್ತೆ ಶಿಷ್ಯರೊಳಗಗ್ರೇಸರ ಸೂರ್ಯಚಂದ್ರ […]

Read More

ನನ್ನ ನಾಡ ಚಿನ್ನ ನಾಡ ಬನ್ನಬಡುತ

ನನ್ನ ನಾಡ ಚೆನ್ನ ನಾಡ ಬನ್ನಬಡುತ ಪೊರೆಯುವಾ ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವಾ             || ಪ || ರಾಮಕೃಷ್ಣ ವಿದ್ಯಾರಣ್ಯ ವ್ಯಾಸರನ್ನು ಸ್ಮರಿಸುವಾ ಬುದ್ಧ ಬಸವ ಶಂಕರಾದಿ ಗುರುಗಳನ್ನು ನಮಿಸುವಾ ಶಿವ ಪ್ರತಾಪ ಹರಿಹರಾದಿ ಭೂಪರನ್ನು ಸ್ಮರಿಸುವಾ ಚಂದ್ರಗುಪ್ತ ಪುಲಿಕೇಶಿ ವೀರರನ್ನು ನಮಿಸುವಾ ನಾಡಮೇಲ್ಮೆಗಾಗಿ ದುಡಿದ ಇವರ ಸ್ಮರಣೆ ಮಾಡುವಾ ನಾಡಮೇಲ್ಮೆಯಲ್ಲಿ ನಮ್ಮ ಮೇಲ್ಮೆಯನ್ನು ಕಾಣುವಾ               || 1 || […]

Read More

ನದನದಿಗಳ ಗಿರಿವನಗಳ

ನದನದಿಗಳ ಗಿರಿವನಗಳ ತಾಯೆ ಭಾರತ ಮಾತೆ ಓಂಕಾರದ ಝೇಂಕಾರದಿ ನಿನಗಿದೊ ಶುಭಗೀತೆ || ಪ || ಹಿಮಚುಂಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು ಬಿರುಗಾಳಿಯ ಭಿತ್ತಿಯಿಂದ ನೀನೆಮ್ಮನು ಹರಸು | ಗಂಗೆ ಯಮುನೆ ಸಂಗಮದಲಿ ನಿನ್ನ ವೇದಘೋಷ ದೇವದಾರು ವನಗಳಲ್ಲಿ ನಿನ್ನ ಮಂದಹಾಸ || 1 || ವಿಂಧ್ಯಾಚಲದೀಚೆಗಿಲ್ಲಿ ಸಂಧ್ಯಾರುಣ ಛಾಯೆ ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೇ | ಪರ್ವತಗಳ ಶಿಖರದಿಂದ ಕಡಲಂಚಿನ ತನಕ ತಾಯೆ ನಿನ್ನ ಮುಕುಟದಿಂದ ಹೊಳೆಯಲಿ ಮಣಿಕನಕ || 2 ||

Read More

ನಡೆ ಮುಂದೆ ನಡೆ ಮುಂದೆ ನುಗ್ಗಿ

ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ || ಪ || ಬೆಚ್ಚಬಿಡು ನೆಚ್ಚನೆಡು ಕೆಚ್ಚಿದೆಯ ಗುಡಿಯಲ್ಲಿ ಸೆರೆಯ ಹರಿ, ಅರಿಯನಿರಿ, ಹುಟ್ಟಳಿಸು ಹುಡಿಯಲ್ಲಿ ನಾನಳಿವೆ ನೀನಳಿವೆ ನಮ್ಮೆಲುವುಗಳ ಮೇಲೆ ಮೂಡುವುದು ಮೂಡುವುದು ನವಭಾರತದ ಲೀಲೆ || 1 || ನೊಂದ ದನಿ ಕಣ್ಣಪನಿ ಬರಿದೆಯೆಂದೊರೆಯದಿರು ತೆತ್ತ ಹಣ ಸತ್ತ ಹೆಣ ಹೋಯ್ತೆಂದು ಮೊರೆಯದಿರು ಪೊಡವಿಯೊಳಗಡಗಿರುವ ತಳಹದಿಯ ತೆಗಳುವರೆ ? ಮೆರೆಯುತಿರುವರಮನೆಯ ಸಿರಿಯೊಂದ ಹೊಗಳುವರೆ ? || 2 […]

Read More

ನಡೆದು ಬಾ ಸಾಧಕನೆ ನಡೆದು ಬಾ

ನಡೆದು ಬಾ ಸಾಧಕನೆ ನಡೆದು ಬಾ ನಡೆದು ಬಾ ಸಾಧಕನೆ ಮುನ್ನಡೆದು ಬಾ || ಪ || ನೆತ್ತರಿನ ಕಣಕಣದ ಸಂಘರ್ಷ ಪ್ರೇರಣೆಯು ದಹಿಸುತಿರೆ ಸಹಿಸುವುದು ನಿನಗಾಗದು ಸಾಹಸವು ಬಾಯ್ದೆರೆದು ಪೌರುಷವು ಹಸಿದಿರಲು ಸ್ಪರ್ಧೆ ಆಹಾರವಾಗಿಹುದು ಇಹುದು || 1 || ಧ್ಯಾನದಲಿ ಮುಳುಗಿಹವು ಧವಳಗಿರಿ ಶಿಖರಗಳು ಪ್ರಹರಿಗಳು ಮೇಲೇರಿ ನಿಲ್ಲಲೆಂದು ಸ್ವಾತಂತ್ರ್ಯ ಯೋಧರಿಗೆ ಸ್ವಾಗತದ ಸಂಗೀತ ಕೇಳುತಿದೆ – ಬರುವಿರಾ ಗೆಲ್ಲಲೆಂದು || 2 || ಮಾತೆಯದೆ ಮಡಿಲಿನೊಳು ಕುಟುಕುತಿಹ ವೃಶ್ಚಿಕದ ವಿಷವ ನುಂಗುವ ಹಸಿದ […]

Read More

ನಂದಾದೀಪವಿದು ಎಂದಿಗೂ ನಂದದ

ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು | ಎಂದೆಂದಿಗೂ ಸೂರ್ಯ ಚಂದ್ರರಿರುವ ತನಕ ಮಂದಿರದೊಳು ಬೆಳಕೀಯುವುದು || ಪ || ಘನತಮವನು ಹರಿಸೀ | ಪ್ರತಿಕ್ಷಣ, ತನುವನುರಿಸಿ ಜ್ವಲಿಸೀ | ತನುವಿದು ನಶ್ವರವೆನುತರಿಯುತ, ಜೀವನ ಸಾರ್ಥಕಗೈದು || 1 || ಮುಕ್ತಿಯನಿಚ್ಛಿಸದು | ದಣಿದು ವಿರಕ್ತಿಯ ತಳೆಯದದು | ಭಕ್ತಿಗೆ ಮಾತೆಯ ವ್ಯಕ್ತ ಸ್ವರೂಪವ ವ್ಯಕ್ತೀಕರಿಸುವುದು || 2 || ಬೆಳಗುವುದೀ ಜ್ಯೋತಿ | ಇತರರ ಬೆಳಗಿಸುವುದು ಜ್ಯೋತಿ | ಬೆಳಗಿಸಿ ದಶದಿಶೆಗಳ ಧ್ಯೇಯದ ಪಥದೊಳು ಮುಂದರಿಯುವುದು || […]

Read More

ಧ್ಯೇಯನಾದ ನಿನಾದವಾಗಿದೆ

ಧ್ಯೇಯನಾದ ನಿನಾದವಾಗಿದೆ ತರುಣ ಧಮನಿ ಧಮನಿಗಳಲಿ ಅಮೃತತ್ವದ ಅಮರ ಚಿಂತನೆ ಸ್ಫುರಿತಗೊಂಡಿದೆ ಕಣ್ಣಲಿ               || ಪ || ಮಾತೃ ಮಣ್ಣಿನ ಯಜ್ಞ ಜ್ವಾಲೆಗೆ | ಸ್ವಾರ್ಥ ದಹಿಸಿದೆ ಸ್ಫೂರ್ತಿ ಮೂಡಿದೆ ಮೋಹ ದೇಹಗಳೊಟ್ಟಿ ಕಟ್ಟಿಗೆ | ಭಸ್ಮವಾಗಿದೆ ಭುಮಿಯ ಬೆಸುಗೆಗೆ      || 1 || ಸವಾಲು ಸಾಸಿರ ಸಾಲುಗಟ್ಟಲಿ | ಕೋಟಿ ಕಂಠಗಳೆದ್ದು ನಿಂತಿವೆ ಕಷ್ಟ ಬೆಟ್ಟಗಳೆಲ್ಲ ಸಹಿಸುವ | ಮೊನಚು ಮೂಡಿದೆ ಎದೆಯಲಿ    […]

Read More

ಧ್ಯೇಯ ಮಹಾದೇವನೆ ವಂದನೆ

ಧ್ಯೇಯ ಮಹಾದೇವನೆ ವಂದನೆ ನೀ ಹರಸುತಲಿರು ಸ್ವೀಕರಿಸುತಲಿರು ವಿಕಸಿತ ಜೀವನವಿರಿಸುತ ತಲೆ ಬಾಗುವೆನು || ಪ || ನಿನ್ನ ಹಿಮಾಲಯದುನ್ನತ ನೆಲೆಗೆ, ಹಬ್ಬಲು ಹೊರಟಿಹ ಬಾಳಿನ ಲತೆಗೆ ಎಲೆಗೊಂದೊಂದರಳಿಸು ಗುಣ ಮಲ್ಲಿಗೆ, ನಾ ಪೂರ್ಣ ಸಮರ್ಪಿತನು || 1 || ಕರಗಿಸು ಮೋಹದ ಮಂಜಿನ ಮಾಯೆ, ಕಳಚಿ ಬಿಡುವೆ ಭಯಭೀತಿಯ ಛಾಯೆ ವಾಮನನು ತ್ರಿವಿಕ್ರಮನಾಗೇಳುವೆ, ಅಳೆಯುವೆ ನೆಲಗಗನವನು || 2 || ಮೆರೆದಾಡುವ ಜನ ಕಂಟಕ ಬಲಿಯ, ಮದವೇರಿದ ಅಧಿಕಾರದ ತಲೆಯ ಮೆಟ್ಟಲು ಬಿಡದರಸುವೆ ಪದವೆತ್ತುತ, ಕಾಣಿಸೆ […]

Read More

ಧ್ಯೇಯಪಥದಿ ದಿಟ್ಟತನದಿ ಹರುಷದಿಂದ

ಧ್ಯೇಯಪಥದಿ ದಿಟ್ಟತನದಿ ಹರುಷದಿಂದ ಸಾಗುವಾ ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ || ಪ || ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವಾ ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವಾ ವಿಶುದ್ಧ ರಾಷ್ಟ್ರಪ್ರೇಮದಿಂದ ಕಾರ್ಯರಂಗಕಿಳಿಯುವಾ || 1 || ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ || 2 || ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವಾ ಪ್ರೇಮ ಪಾಶದಿಂದ ಎಲ್ಲ ಬಂಧುಗಳನು […]

Read More

ಧ್ಯೇಯಧಾರೀ ಸಾಗು ಸಂತತ

ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ || ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 || ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ ಅರ […]

Read More