ನಡೆದು ಬಾ ಸಾಧಕನೆ ನಡೆದು ಬಾ

ನಡೆದು ಬಾ ಸಾಧಕನೆ ನಡೆದು ಬಾ
ನಡೆದು ಬಾ ಸಾಧಕನೆ ಮುನ್ನಡೆದು ಬಾ || ಪ ||

ನೆತ್ತರಿನ ಕಣಕಣದ ಸಂಘರ್ಷ ಪ್ರೇರಣೆಯು
ದಹಿಸುತಿರೆ ಸಹಿಸುವುದು ನಿನಗಾಗದು
ಸಾಹಸವು ಬಾಯ್ದೆರೆದು ಪೌರುಷವು ಹಸಿದಿರಲು
ಸ್ಪರ್ಧೆ ಆಹಾರವಾಗಿಹುದು ಇಹುದು || 1 ||

ಧ್ಯಾನದಲಿ ಮುಳುಗಿಹವು ಧವಳಗಿರಿ ಶಿಖರಗಳು
ಪ್ರಹರಿಗಳು ಮೇಲೇರಿ ನಿಲ್ಲಲೆಂದು
ಸ್ವಾತಂತ್ರ್ಯ ಯೋಧರಿಗೆ ಸ್ವಾಗತದ ಸಂಗೀತ
ಕೇಳುತಿದೆ – ಬರುವಿರಾ ಗೆಲ್ಲಲೆಂದು || 2 ||

ಮಾತೆಯದೆ ಮಡಿಲಿನೊಳು ಕುಟುಕುತಿಹ ವೃಶ್ಚಿಕದ
ವಿಷವ ನುಂಗುವ ಹಸಿದ ಶಿವನದಾರು ?
ಜಲಧಿಯೊಡೆತನ ಗಳಿಸಿ ಗಿರಿಶಿಖರಗಳನುಳಿಸಿ
ಭಾರತಿಯ ಬದುಕಿಸುವ ಸುತನದಾರು ? || 3 ||

ಉತ್ತುಂಗ ಜೀವನಕೆ ಪ್ರಖರ ದಾವಾನಲಕೆ
ಸಾಹಸಕೆ ತೆರೆಯುತಿದೆ ದ್ವಾರ ದ್ವಾರ
ಕ್ಷಾರಸಾಗರ ಕುಡಿದು ಕ್ಷೀರಸಾಗರ ತರುವ
ಸಾಧನೆಗೆ ಕರೆಯುತಿದೆ ದೂರತೀರ || 4 ||

Leave a Reply

Your email address will not be published. Required fields are marked *

*

code