ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ

ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ ಭರತಮಾತೆ ಕರೆಯುತಿಹಳು ಓಗೊಡುತ ಬಾರಾ ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ? ತಾಯ ಬಂಧ ಬಿಡಿಸುವಂದು ತೋರಿದಂಥ ಧೈರ್ಯ? || ಪ || ಚಲಿಸಲಿಲ್ಲ ಹಿಮದಗಿರಿಯ ಅಚಲ ನಿಂತ ನಿಲುವು ನಿಲ್ಲಲಿಲ್ಲ ಕಡಲ ಮೊರೆತ, ಕ್ಷಣವು ಇಲ್ಲ ಬಿಡುವು ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನ ನೀಡಿ ನಿನ್ನ ಮನವದೇಕೆ ಬದಲು – ಯಾರ ಮಂತ್ರ ಮೋಡಿ? || 1 || ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ ದರ್ಪ […]

Read More

ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ

ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ ಧೈರ್ಯ ಶೌರ್ಯ ಮೂಡಿಬರಲಿ, ಹರಸಿ ಕಳುಹು ತಾಯಿಯೇ || ಪ || ಅಡಿಯ ಮುಂದೆ ಇಡಲು ಸ್ವರ್ಗ, ಹಿಂದೆ ಘೋರ ನರಕವು ಹೆತ್ತ ಒಡಲ ಋಣವ ಸಲಿಸಲಿಂದು ಬಂದ ಭಾಗ್ಯವು ಹಾಡು ಸಮರಗೀತೆಯ ನೆನೆಯೊ ವೀರಗಾಥೆಯ ಭಾರತಿಗೆ ಜೈ, ಭಾರತಿಗೆ ಆರತಿಯು ಜೈ ಜೈ ಜೈ         || 1 || ದೇಶಭಕ್ತಿ ಉಕ್ಕಿ ಹರಿದು ರಕ್ತ ಬೆಚ್ಚಗಾಗಲಿ ಕೊರೆವ ಹಿಮದ ರಾಶಿಯಲ್ಲು ಮೈಯ ಛಳಿಯು […]

Read More

ಆರತಿ ಬೆಳಗಲು ಬಾರೋ ಗೆಳೆಯ

ಆರತಿ ಬೆಳಗಲು ಬಾರೋ ಗೆಳೆಯ ಭಾರತಿ ಎನ್ನಲು ನಲಿಯಲಿ ಹೃದಯ ಮಮತೆಯ ಮೂರುತಿ ಮಾತೆಯ ಕೀರುತಿ ಅನುದಿನ ಹಾಡಲು ಬಾ ಬಾ ಸದಯ || ಪ || ಕೋಟಿ ಕೋಟಿ ಜನರೆದೆಯನು ಮೀಟುತ ಪುಲಕಿತಗೊಳಿಸುತ ಮನ ಅರಳಿಸುತ ಮಾತೃಪ್ರೇಮದಾ ಅಮೃತ ನೀಡುವ ಈ ಶುಭಮಂಗಳೆಗಿದೊ ಪೊಡಮಡುವ || 1 || ಲಕ್ಷಲಕ್ಷ ನರಜನ್ಮವನೆತ್ತಿ ಸಾವಿರ ಸಲ ಭೂಮಂಡಲ ಸುತ್ತಿ ಬಂದರೆ ಸಿಗುವುದೆ ಇಂತಹ ನೆಲವು ? ಪುಣ್ಯ ಪ್ರಸಾದವು – ಈ ತಾಯೊಲವು || 2 || […]

Read More

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ?

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆ ಘಳಿಗೆ    || ಪ || ಬರಿ ಕಚ್ಚಾಟದಿ ಕರೆಸುವುದುಂಟೇ ಆ ಘಜನೀ ಘೋರಿ ? ಪಾವನ ನೆಲದಲಿ ಬಾಳುವುದುಂಟೇ ಅಭಿಮಾನವ ಮಾರಿ ?     || 1 || ನೆನೆಯುವ ಹಿಂದಿನ ವೈಭವ, ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ   || 2 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ […]

Read More

ಹಾರದಿರು ಮನ ಕಡಲಾಚೆ

ಹಾರದಿರು ಮನ ಕಡಲಾಚೆ ಯೋಚಿಸದಿರು ನೀ ತೊಡು ಭಾಷೆ ಮಮತೆಯ ಹೆತ್ತ ಒಡಲಲ್ಲಿರಲು ಏತಕೆ ಪರತಾಯಿಯ ಮಡಿಲು? || ಪ || ಹಾರದಿರು ಮನ ಹಾರದಿರು ಹಾರದಿರು ಮನ ಕಡಲಾಚೆ || ಅ.ಪ.|| ಈ ತಾಯಿಯ ಮನೆ, ಮನ ಬಂಗಾರ ಮೆರೆಯುವ ಗಿರಿ ವನ ಸಿರಿ ಸಿಂಗಾರ ಗಂಗೆಯ ತುಂಗೆಯ ಸಂಗೀತದಲಿ ಅರಳದೆ ಮನ ನೆಲೆ ನಿಲ್ಲದೆ ಇಲ್ಲಿ? || 1 || ಭಕ್ತಿಯು ಬರದೆ ವಿರಕ್ತಿಯದೇಕೆ ? ಹೊಣೆಯರಿಯದೆ ಹೊರ ಜಾರುವುದೇಕೆ? ವೀರರ ಸಂತ ಮಹಾತ್ಮರ […]

Read More

ಹಚ್ವುವೆವು ದೀಪ

ಹಚ್ಚುವೆವು ದೀಪ, ಹಚ್ಚುವೆವು ದೀಪ ಎಚ್ಚೆತ್ತ ಹಿಂದುಗಳ ಭಾವೈಕ್ಯ ರೂಪ ವಾದಗಳ ಭೇದಗಳ ಎಲ್ಲ ಬದಿಗಿಟ್ಟು ದೇಶಸೇವೆಗೆ ಬದ್ಧಕಂಕಣವ ತೊಟ್ಟು || ಪ || ನಮ್ಮದೇ ನೆಲವೆಂದು, ಜಲವೆಂದು, ಫಲವೆಂದು ಛಲದಿಂದ ಬೆಳೆಸಿ ಭುವಿ ಬಂಗಾರ ಬಂಧು ಹೊಟ್ಟೆ ತುಂಬಾ ಅನ್ನ ಬಟ್ಟೆ ಬರೆ ಗಿರೆ ಬನ್ನ ಯಾವ ಆಮಿಷಕಿಲ್ಲ ಇನ್ನು ಬಲಿಯಿಂದು || 1 || ಧರ್ಮಕಲೆ ಸಂಸ್ಕೃತಿಯ ಜಾಗೃತಿಯಗೊಳಿಸುವೆವು ನಮ್ಮ ಗತ ಇತಿಹಾಸ ಮರಳಿ ಬರಲಿಹುದು ‘ಐಕ್ಯವೊಂದೇ ಮಂತ್ರ ಐಕ್ಯದಿಂದಲೇ ಸ್ವತಂತ್ರ’ ಒಕ್ಕೊರಲ ಉದ್ಘೋಷ […]

Read More

ಜನನಿ ಓ ಜನನೀ

ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]

Read More

ಧೀರ ಪಥವನೆ ಹಿಡಿದು ವಿಜಯ ನಿಶ್ಚಿತವೆಂದು

ಧೀರ ಪಥವನೆ ಹಿಡಿದು ವಿಜಯ ನಿಶ್ಚಿತವೆಂದು ಅಸುರ ಸಂತಾನವನು ಅಳಿಸಲೆಂದು ಹೊರಟೆವು ರಣಾಂಗಣಕೆ ಕಾದಲೆಂದು ಕೀರ್ತಿಕಳಶವ ತಾಯ್ಗೆ ತೊಡಿಸಲೆಂದು || ಪ || ರಣಭೇರಿ ಗರ್ಜನೆಯು ಸಿಡಿಲ ಕರತಾಡನವು ಸಾಹಸದ ಪಡೆ ನಮದು ಅಮರವಂಶ ಮೃತ್ಯುಂಜಯರು ನಾವು ಈಶ್ವರಾಂಶ || 1 || ವೀರವ್ರತಿಗಳು ನಾವು ಸಾವಿರದ ಸಂತತಿಯು ಭರತಮಾತೆಯ ಅಭಯ ಖಡ್ಗಹಸ್ತ ಸಮರ ಭೂಮಿಯು ನಮಗೆ ತೀರ್ಥಕ್ಷೇತ್ರ || 2 || ಭರತಕುಲದಭಿಮಾನ ತರುಣಗಣದುತ್ಥಾನ ಮನುಕುಲಕೆ ಹಿಂದುತ್ವದಭಯದಾನ ಮೊಳಗಲಿದೆ ಭಾರತಿಯ ವಿಜಯಗಾನ || 3 ||

Read More

ಮುಂದೆ ಬರಲಿ ತರುಣ ಶಕ್ತಿ

ಮುಂದೆ ಬರಲಿ ತರುಣ ಶಕ್ತಿ ಮನವನೊಂದುಗೂಡಿಸಿ ‘ವಂದೇಮಾತರಂ’ ಎಂಬ ಪರಮಮಂತ್ರ ಘೋಷಿಸಿ || ಪ || ದೇಶಕಾಗಿ ಪ್ರಾಣತೆತ್ತ ದಿವ್ಯ ಆತ್ಮವೆಲ್ಲವೂ ಕೇಳುತಿಹವು ತಮ್ಮ ಶೌರ್ಯ ತ್ಯಾಗವೆಲ್ಲಿ ಹೋದವು ಏಳಿ ಮೇಲಕೇಳಿ ಕಾಲ ಕಳೆವ ಸಮಯವಲ್ಲವು ಹಿಂದೆ ಸಾಗಲೆಮ್ಮ ತುಳಿವ ಧೂರ್ತ ಶಕ್ತಿಯೆಲ್ಲವು || 1 || ಗುರಿಯ ತೋರಿ ಗುರುವೆ ಇದ್ದ ಬೆನ್ನ ಹಿಂದೆ ರಕ್ಷೆಗೆ ಕುರಿಯ ತೆರೆದಿ ಕೈಯ್ಯ ಚಾಚುತಿಹರು ಇಂದು ಭಿಕ್ಷೆಗೆ ಕರೆದು ಅನ್ನ ನೀಡಬಲ್ಲ ಬಲವು ಇಲ್ಲಿ ತುಂಬಿದೆ ಜರಿದು ಕೀಳುಗೈವಿರೇಕೆ […]

Read More

ಮಾಧವನ ಚಿತ್ತದಲಿ ಅರಳಿರುವ ಚಿತ್ರಗಳೇ

ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ || ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸ ಬನ್ನಿ || 1 || ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ ಸಂಘ ಮುರಿವ ತಂತ್ರಗಳಿಗೆ ಹಿಡಿದ […]

Read More