ಆರತಿ ಬೆಳಗಲು ಬಾರೋ ಗೆಳೆಯ

ಆರತಿ ಬೆಳಗಲು ಬಾರೋ ಗೆಳೆಯ
ಭಾರತಿ ಎನ್ನಲು ನಲಿಯಲಿ ಹೃದಯ
ಮಮತೆಯ ಮೂರುತಿ ಮಾತೆಯ ಕೀರುತಿ
ಅನುದಿನ ಹಾಡಲು ಬಾ ಬಾ ಸದಯ || ಪ ||

ಕೋಟಿ ಕೋಟಿ ಜನರೆದೆಯನು ಮೀಟುತ
ಪುಲಕಿತಗೊಳಿಸುತ ಮನ ಅರಳಿಸುತ
ಮಾತೃಪ್ರೇಮದಾ ಅಮೃತ ನೀಡುವ
ಈ ಶುಭಮಂಗಳೆಗಿದೊ ಪೊಡಮಡುವ || 1 ||

ಲಕ್ಷಲಕ್ಷ ನರಜನ್ಮವನೆತ್ತಿ
ಸಾವಿರ ಸಲ ಭೂಮಂಡಲ ಸುತ್ತಿ
ಬಂದರೆ ಸಿಗುವುದೆ ಇಂತಹ ನೆಲವು ?
ಪುಣ್ಯ ಪ್ರಸಾದವು – ಈ ತಾಯೊಲವು || 2 ||

ದೇವರ ದೇವನ ಅವತಾರದ ನೆಲ
ಸಾಧಕ ಋಷಿಗಳ ತಪ ರಂಗಸ್ಥಳ
ಧರ್ಮಕೆ, ಕರ್ಮಕೆ, ಸತ್ಯಕೆ, ತತ್ವಕೆ
ನೆಲೆಯೀ ತಾಯ್ನೆಲ – ಸೌಭಾಗ್ಯದ ಫಲ || 3 ||

Leave a Reply

Your email address will not be published. Required fields are marked *

*

code