ಮುಂದೆ ಬರಲಿ ತರುಣ ಶಕ್ತಿ

ಮುಂದೆ ಬರಲಿ ತರುಣ ಶಕ್ತಿ ಮನವನೊಂದುಗೂಡಿಸಿ
‘ವಂದೇಮಾತರಂ’ ಎಂಬ ಪರಮಮಂತ್ರ ಘೋಷಿಸಿ || ಪ ||

ದೇಶಕಾಗಿ ಪ್ರಾಣತೆತ್ತ ದಿವ್ಯ ಆತ್ಮವೆಲ್ಲವೂ
ಕೇಳುತಿಹವು ತಮ್ಮ ಶೌರ್ಯ ತ್ಯಾಗವೆಲ್ಲಿ ಹೋದವು
ಏಳಿ ಮೇಲಕೇಳಿ ಕಾಲ ಕಳೆವ ಸಮಯವಲ್ಲವು
ಹಿಂದೆ ಸಾಗಲೆಮ್ಮ ತುಳಿವ ಧೂರ್ತ ಶಕ್ತಿಯೆಲ್ಲವು || 1 ||

ಗುರಿಯ ತೋರಿ ಗುರುವೆ ಇದ್ದ ಬೆನ್ನ ಹಿಂದೆ ರಕ್ಷೆಗೆ
ಕುರಿಯ ತೆರೆದಿ ಕೈಯ್ಯ ಚಾಚುತಿಹರು ಇಂದು ಭಿಕ್ಷೆಗೆ
ಕರೆದು ಅನ್ನ ನೀಡಬಲ್ಲ ಬಲವು ಇಲ್ಲಿ ತುಂಬಿದೆ
ಜರಿದು ಕೀಳುಗೈವಿರೇಕೆ ಒಲವ ತೋರಬಾರದೆ || 2 ||

ಹೊನ್ನ ಬೆಳೆವ ಮಣ್ಣಿನಲ್ಲಿ ಅನ್ನ ಬೆಳೆಯಲಾರದೆ
ಖಿನ್ನರಾಗಿ ಕಾಯುತಿಹರು ದುಡಿವ ದಾರಿ ಹುಡುಕದೆ
ಕಣ್ಣು ಮುಚ್ಚಿ ಕುಳಿತಿರೇಕೆ ನಿಜವನರಿಯಬಾರದೆ
ಭಿನ್ನತೆಯನು ತೊರೆದು ಏಕತೆಯನು ತೋರಬಾರದೆ || 3 ||

Leave a Reply

Your email address will not be published. Required fields are marked *

*

code