ಮಾಧವನ ಚಿತ್ತದಲಿ ಅರಳಿರುವ ಚಿತ್ರಗಳೇ

ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ
ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ ||

ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ
ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ
ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸ ಬನ್ನಿ || 1 ||

ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ
ಸಂಘ ಮುರಿವ ತಂತ್ರಗಳಿಗೆ ಹಿಡಿದ ಗುರಾಣಿ ಹಲಗೆ ಕಟುವುಂಡ ನೀಲಕಂಠ
ಅವನ ಮಣ್ಣಿನ ಮಮತೆ ನೋವ ನುಂಗುವ ಕ್ಷಮತೆ ನನ್ನಲ್ಲೂ ನೆಲೆಸ ಬನ್ನಿ || 2 ||

ಹಿಂದು ಭಾವವ ಬಸಿದು ಒಡೆದ ಮನೆಯನು ಬೆಸೆದು ಏಕತೆಯ ಕೋಟೆ ಕಟ್ಟಿ
ಮೇಲು ಕೀಳನು ತೊಳೆದು ನೈಜ ಧರ್ಮವು ಹೊಳೆದು ಶ್ರೇಷ್ಠತೆಯ ಶಿಖರ ಮುಟ್ಟಿ
ಅವನ ಸಮರಸ ಭಾವ ಜಗವ ಗೆಲ್ಲುವ ಸ್ನೇಹ ನನ್ನಲ್ಲೂ ನೆಲೆಸ ಬನ್ನಿ || 3 ||

One thought on “ಮಾಧವನ ಚಿತ್ತದಲಿ ಅರಳಿರುವ ಚಿತ್ರಗಳೇ

  1. ಆಡಿಯೋ ಇದರೆ ಒಳೆಯದು ಇತ್ತು

    • Phone No: 7899203489

Leave a Reply

Your email address will not be published. Required fields are marked *

*

code