ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ
ಭರತಮಾತೆ ಕರೆಯುತಿಹಳು ಓಗೊಡುತ ಬಾರಾ
ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ?
ತಾಯ ಬಂಧ ಬಿಡಿಸುವಂದು ತೋರಿದಂಥ ಧೈರ್ಯ? || ಪ ||
ಚಲಿಸಲಿಲ್ಲ ಹಿಮದಗಿರಿಯ ಅಚಲ ನಿಂತ ನಿಲುವು
ನಿಲ್ಲಲಿಲ್ಲ ಕಡಲ ಮೊರೆತ, ಕ್ಷಣವು ಇಲ್ಲ ಬಿಡುವು
ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನ ನೀಡಿ
ನಿನ್ನ ಮನವದೇಕೆ ಬದಲು – ಯಾರ ಮಂತ್ರ ಮೋಡಿ? || 1 ||
ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ
ದರ್ಪ ದಮನವಿರ್ಪ, ಮತಾಂತರದ ವಿಕಟಲೀಲೆ
ಎಚ್ಚರಾಗಿ ಬಾರೊ ಮರೆತು ತುಚ್ಛವಾದ ಭೇದ
ಎಲ್ಲೆ ಮೀರಿ ಮೊಳಗಿ ಬರಲಿ ಐಕ್ಯ ಶಂಖನಾದ || 2 ||
ಬೆಳಗು ಧರ್ಮ ಸಂಸ್ಕೃತಿಯನು ಮೆರೆಯಬೇಡ ಎಂದೂ
ಮಾನಧನನು ನೀನು, ನಿನ್ನೊಳಿರುವ ರಕ್ತ ಹಿಂದು
ಒರೆಸು ಬಾರೊ ತಾಯ ಮೊಗದ ಕಣ್ಣೀರ ಧಾರೆ
ಸಾರು ಬಳಿಗೆ ಕರೆಯುತಿಹುದು ನಾಡ ಭಾಗ್ಯತಾರೆ || 3 ||