ಹಚ್ಚುವೆವು ದೀಪ, ಹಚ್ಚುವೆವು ದೀಪ
ಎಚ್ಚೆತ್ತ ಹಿಂದುಗಳ ಭಾವೈಕ್ಯ ರೂಪ
ವಾದಗಳ ಭೇದಗಳ ಎಲ್ಲ ಬದಿಗಿಟ್ಟು
ದೇಶಸೇವೆಗೆ ಬದ್ಧಕಂಕಣವ ತೊಟ್ಟು || ಪ ||
ನಮ್ಮದೇ ನೆಲವೆಂದು, ಜಲವೆಂದು, ಫಲವೆಂದು
ಛಲದಿಂದ ಬೆಳೆಸಿ ಭುವಿ ಬಂಗಾರ ಬಂಧು
ಹೊಟ್ಟೆ ತುಂಬಾ ಅನ್ನ ಬಟ್ಟೆ ಬರೆ ಗಿರೆ ಬನ್ನ
ಯಾವ ಆಮಿಷಕಿಲ್ಲ ಇನ್ನು ಬಲಿಯಿಂದು || 1 ||
ಧರ್ಮಕಲೆ ಸಂಸ್ಕೃತಿಯ ಜಾಗೃತಿಯಗೊಳಿಸುವೆವು
ನಮ್ಮ ಗತ ಇತಿಹಾಸ ಮರಳಿ ಬರಲಿಹುದು
‘ಐಕ್ಯವೊಂದೇ ಮಂತ್ರ ಐಕ್ಯದಿಂದಲೇ ಸ್ವತಂತ್ರ’
ಒಕ್ಕೊರಲ ಉದ್ಘೋಷ ಕೇಳಿ ಬರುತಿಹುದು || 2 ||
ನಿಲ್ಲುವೆವು ನೇರ ಶಿರಬಾಗದಿದು ಅನ್ಯರಿಗೆ
ಕೆಚ್ಚಿನಲಿ ಇಚ್ಛೆಯಲಿ ಬಾಳುವೆವು ಇಲ್ಲಿ
ರಕ್ತ ಕಣಕಣದಲ್ಲಿ ಹರಿಯುವುದು ಹಿಂದುತ್ವ
ಮಣಿಯುವುದು ಭಾರತಿಯ ಪಾದತಳದಲ್ಲಿ || 3 ||