ಮರೆವಿನ ಅರಿವೆಯ ಪರದೆಯ ಸರಿಸುತ ಅರಿವಿನ ಪ್ರಣತಿಯ ಉರಿಸೋಣ ಹಿರಿಯರ ಚರಣದ ಗುರುತಿನ ನೆರವಲಿ ಕ್ರಮಿಸುತ ಗುರಿಯನು ಸೇರೋಣ || ಪ || ಭರತ ಭಗೀರಥರಾಳಿದ ಭಾರತ ಪರಶುಧರನ ಧುರ ಸ್ಮರಿಸೋಣ ಶಸ್ತ್ರದಿ ಶಾಸ್ತ್ರದಿ ಪ್ರೌಢಿಮೆ ಮೆರೆಯುತ ವೀರ ಧರಿತ್ರಿಯ ಉಳಿಸೋಣ || 1 || ರಾಮಾಯಣ, ಗುರು ವ್ಯಾಸರ ಭಾರತ ಸಾರಿದ ಸೂತ್ರವ ಅರಿಯೋಣ ಧರ್ಮದ ನೆಲೆಯಲಿ ಜೀವನ ನಡೆಸುತ ಜನ್ಮವ ಸಾರ್ಥಕಗೊಳಿಸೋಣ || 2 || ನರಳುತ ನೆರಳನು ಅರಸುತಲಿರುವರ ಗುರುತಿಸಿ ನೆರವನು ಈಯೋಣ […]
ಅವಧಪುರಿ ಮೇ ಫಿರ ಸೇ ಮಂದಿರ ಜಯ ಜಯ ಜಯ ಶ್ರೀರಾಮ್ ತನುಮನಧನ ಸರ್ವಸ್ವ ಸಮರ್ಪಿತ ಬನೇ ರಾಮ ಕಾ ಧಾಮ್ ಭವ್ಯ ರಾಮ ಕಾ ಧಾಮ್ ಜಯ ಜಯ ಜಯ ಶ್ರೀರಾಮ್ ॥ ಪ ॥ ಶ್ರೇಷ್ಠ ಮಾನ ಮರ್ಯಾದಾ ಅಪನೇ ಜೀವನಸೇ ಪ್ರಕಟಾಯೇಂಗೇ ಬೇಧಭಾವ ಸಬ ದೂರ ಹಠಾಕರ್ ಸ್ನೇಹಾಮೃತ ಛಲಕಾಯೇಂಗೇ ಹರ ಆಂಗನ ಮೇ ಜ್ಞಾನ ಕಾ ದೀಪಕ ಹೋಂಗೇ ಪೂರಣ ಕಾಮ್ ॥ 1 ॥ ಇಸ ಯುಗ ಮೇ ಶುಭ […]
ನೋಡಿದೆಯಾ ಭರತಸುತ ಭಾರತದ ಬಾನಿನಲಿ ಭಾಗ್ಯರವಿ ತಾನುದಿಸಿ ಬರುತಲಿಹುದ ವರುಷ ಸಾಸಿರದಿಂದ ಬಂದಿರುವ ಭಿನ್ನತೆಯ ಕಲುಷಗಳ ಕಾರ್ಮುಗಿಲ ಕಳೆದು ಬೆಳಗುತಲಿ || ಪ || ಹೃದಯದಲಿ ಕುದಿರಕ್ತ ಮನಕೇಕೆ ಮುದಿತನವು ಹದಗೊಳಿಸು ಮೈಮನವ ಕದನದಂಕಣಕೆ ನಾಯಕನು ನೀನಾಗು ಸಾಯಕಂಗಳ ಧರಿಸು ಕಾಯವನು ಕಾಯಕಕೆ ಅಣಿಗೊಳಿಸು ಎನುತ || 1 || ಸ್ಫುರಣಗೊಳ್ಳಲಿ ಧೈರ್ಯ ಸ್ಥೈರ್ಯ ಬಲತೇಜಗಳು ಮರಣ ಮುಖನಂತಿರುವ ತರುಣ ನಿನ್ನೊಳಗೆ ಹರನಗೆಲಿದಿಹ ನರನ ವಾರಸಿಕೆ ನಿನಗಿಹುದು ಸ್ಮರಣೆಗೊಳ್ಳುತ ಕುವರ ಎದ್ದು ನಿಲ್ಲೆನುತ || 2 || […]
ಭಾರತದ ಯುವಜನತೆ ಸಿಡಿದೆದ್ದು ನಿಂತಿಹುದು ದೇವದುರ್ಲಭವೆನಿಪ ಸಂಘಶಕ್ತಿ || ಪ || ಧ್ಯೇಯ ಜಲಸಿಂಚನಕೆ ಕನಸೊಡೆದು ಮೇಲೆದ್ದು ಮೈ ಮರೆವಿನ ಪದರ ಕಿತ್ತುಬಿಸುಟು ಮುದುರಿರುವ ಗರಿಬಿಚ್ಚಿ ಗಗನಾಂಗಣಕೆ ಜಗದಗಲ ಸಂಚರಿಪ ಗರುಡನಂದದಲಿ || 1 || ತರತಮದ ಭೇದಗಳು ಅಳಿಸುತಲಿ ಜಸನದಲಿ ಬೆಸಯುತಲಿ ಮನಮನಕೆ ಭಾವಸಂಪರ್ಕ ಭಿನ್ನತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸ ಧಾರೆಯಲಿ ಕಾಯಕಲ್ಪ || 2 || ಅಕ್ಷಯದ ಬತ್ತಳಿಕೆ ಶಿಶು ಬಾಲ ತರುಣ ಗಣ ಹೆದೆಯೇರ್ದ ಗಾಂಢಿವ ಪ್ರಾಢಗಢಣ ಗೋವು ಗ್ರಾಮದ ರಕ್ಷೆ […]
ತವಪದಕೆ ಕೋಟಿ ನಮನ ಉದಿಸಿ ಬಾರೋ ಮಾಧವ || ಪ || ಶುದ್ಧ ಹೃದಯ ಮುಗ್ಧ ಮನದ ಓ ಪ್ರಭುದ್ಧ ಮಾನವ ಭರತಸುತರ ಜಡತೆ ನೀಗಲುದಿಸಿ ಬಂದ ಮಾಧವ ದುಗ್ಧ ಧವಳ ಹಿಮದಗಿರಿಯ ಉನ್ನತಿಯನು ಮೆರೆದವ ದಗ್ಧ ಮನಕೆ ತಂಪನೆರಚಿ ಧ್ಯೇಯ ಧಾರೆ ಎರೆದವ || 1 || ಮೇರುಗಿರಿಯ ಮಾರ್ಗವೆಂದು ಕಂಟಕಮಯ ದುರ್ಗಮ ಅವನು ತೋರ್ದ ಪಥದಿ ನಡೆಯೆ ಸಾಧ್ಯವಿಹುದು ವಿಕ್ರಮ ಧ್ಯೇಯನಿಷ್ಠೆ ವೀರವ್ರತಕೆ ಜ್ಞಾನಗಂಗೆ ಸಂಗಮ ಶಕ್ತಿಶೀಲ ಜತೆಗೆ ಸೇರೆ ಮೂಡಿಬಂತು ಸಂಭ್ರಮ || […]
ದಶದಿಶೆಯೊಳು ಆವರಿಸಿದೆ ನಿಶೆಯಿದು ಉಷೆಯುದಿಸುತಲೇ ನಶಿಸುತಿದೆ ದೇಶದ ದೆಸೆಯನು ಬದಲಾಯಿಸುವ ಕೇಶವನಾಸೆಯು ಫಲಿಸುತಿದೆ || ಪ || ಯೋಗದ ಯಾಗದ ಪ್ರಯೋಗಗಳಲಿ ಜಗದ ಜನತೆಗೂ ಸಹ ಯೋಗ ಯುಗಸಂಕ್ರಮಣದ ಶುಭ ಸಂಧಿಯಲಿ ಸಂಘದ ಗಂಗೆಯ ವಿನಿಯೋಗ || 1 || ಪರಮಾರ್ಥದ ಪರಮಾಣುವ ಶೋಧನೆ ಭಾರತವಿಂದು ಅಗ್ರಣಿಯು ತತ್ವದ ಸತ್ವದ ಸತ್ಯಾನ್ವೇಷಣೆ ಬೆಳಗಿದ ಭಾರತ ದಿನಮಣಿಯು || 2 || ಅಭ್ಯುದಯದ ಜತೆ ನಿಃಶ್ರೇಯಸ್ಸಿನ ಸಾಧನೆ ಭಾರತದಾಶಯವು ಜಗದ ಜನರ ಜತೆಗೆ ಮೃಗ ಖಗ ಸಂಕುಲ ಸಕಲರ […]
ವಿಸ್ಮೃತಿಯ ಕಾರಿರುಳು ಭಾರತವ ಮುಸುಕಿರಲು ಅಲ್ಲಿ ಮೂಡಿತು ಒಂದು ಬೆಳ್ಳಿ ಕಿರಣ || ಪ || ನಂಬಿಕೆಯ ಚಿತ್ತಾರ ಗಗನಂಗಣದಿ ಬಿಡಿಸಿ ತುಂಬಿಸಿತು ಹೊಂಬೆಳಕು ಅರುಣ ವರ್ಣ || 1 || ಸಂಘ ಸೂರ್ಯನು ಉದಿಸೆ ಸಂಘಟಿಸೆ ಸಮರಸತೆ ಹಿಂದು ಮನದಂಗಳದಿ ರಂಗವಲ್ಲಿ || 2 || ಅಸಮತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸಧಾರೆಯಲ್ಲಿ ಕಾಯಕಲ್ಪ || 3 ||
ಸಂಗೀತ ಸಾಮ್ರಾಜ್ಯದರಸುತನ ಕಿತ್ತೆಸೆದು ರಾಷ್ಟ್ರಸೇವೆಗೆ ನಿಂತ ಶ್ರೀ ಯಾದವ ಕೇಶವನ ಸಾನಿಧ್ಯ ಮಾಧವನ ಸಾಮೀಪ್ಯ ಸ್ವರ್ಣಮಂದಾರದಲಿ ಸುಮ ಸೌರಭ || ಪ || ಭಾರತಿಯ ಚರಣದಲಿ ಗಾಯನದ ನೈವೇದ್ಯ ಕೀರ್ತಿಮೋಹವ ಮರೆತ ಬಾಳಪಯಣ ರಾಷ್ಟ್ರವೇ ಶ್ರುತಿಲಯವು ಜೀವನವೆ ಸಂಗೀತ ತ್ಯಾಗಮಯ ಸಂಸ್ಕೃತಿಯ ಭೃಂಗಗಾನ || 1 || ಪೂರ್ವಸೂರಿಗಳೆಲ್ಲ ಸಾರಿ ತೋರಿದ ದಾರಿ ಕೃತಿರೂಪವನು ಪಡೆದ ಸಂಘಕಾರ್ಯ ಸ್ಪರ್ಷಮಣಿ ಗುಣಪಡೆದ ಚುಂಬಕದ ಸೆಳೆತದಲಿ ಪ್ರತಿಮನದಿ ಟಿಸಿಲೊಡೆದ ಧ್ಯೇಯವಾದ || 2 || ಭಾಸ್ಕರನ ಬಿಸುಪಿನಲಿ ಚಂದ್ರಮನ ಶೀತಲತೆ […]
ರಣದುಂದುಭಿಯ ಕರೆ ಕೇಳುತಿದೆ ಏಳಿ ಎದ್ದೇಳಿ ನವಭಾರತವು ಮೈತಾಳುತಿದೆ ಜಡತೆಯ ಪೊರೆ ಸೀಳಿ ಏಳಿ ಎದ್ದೇಳಿ || ಪ || ಮಾತೃಭಕ್ತಿಯ ಸಂಘಶಕ್ತಿಯ ಕಾರ್ಯದಿ ತೊಡಗಿಸುವ ಶತ್ರುಕೂಟಗಳ ಉಗ್ರಗಾಮಿಗಳ ಅಬ್ಬರ ಅಡಗಿಸುವ || 1 || ಶೌರ್ಯಧೈರ್ಯಗಳ ಶಸ್ತ್ರವ ಪಿಡಿದು ಸಮರಕೆ ಸಜ್ಜಾಗಿ ಮಾತೃಭೂಮಿಯ ಅದ್ವಿತೀಯತೆಯ ರಕ್ಷಿಸಲೊಂದಾಗಿ || 2 || ಛತ್ರಪತಿಯ ಆದರ್ಶವೆಮಗಿರೆ ಇನ್ನೇತರ ಅಳುಕು? ರಾಷ್ಟ್ರ ರಕ್ಷಣೆಯ ಧ್ಯೇಯಸಿದ್ಧಿಗೆ ಅದುವೇ ಮುಂಬೆಳಕು || 3 || ಚರಿತೆ ಸಾರಿದೆ ಸ್ವಾಭಿಮಾನದ ಸ್ಫೂರ್ತಿಯ ಇತಿಹಾಸ ಮೊಳಗಲೆಲ್ಲೆಡೆ […]
ಬನ್ನಿ ತೊರೆಗಳೆ ಬನ್ನಿ ನದಿಗಳೆ ಸಾಮರಸ್ಯದ ಜಲಧಿಯೆಡೆಗೆ | ನಿಮ್ಮ ಏಕಾಂತವನು ತೊರೆದು ಕರವ ಜೋಡಿಸಿ ಕಡಲ ತೆರೆಗೆ…..ಸ್ವರವ ಕೂಡಿಸಿ ಒಡಲ ಕರೆಗೆ || ಪ || ಸೂರ್ಯನಾ ಧಗೆ ಬಿಸಿ ಬಿಸಿಲ ಹಗೆ ನಿಮ್ಮ ಒಡಲನು ಸುಡುತಿರೆ ನಲಿವ ಅಲೆಗಳ ಮಧುರ ಮಂಜುಳ ಸ್ವರವು ಸಂಕಟ ಪಡುತಿರೆ ಕಾವು ಸಾವನು ತರುವ ಮುನ್ನ ನಿಮ್ಮ ಘನ ಅಸ್ತಿತ್ವಕೆ ಬನ್ನಿ ಧಾವಿಸಿ ಪೂರ್ಣ ವೇಗದಿ ಹಾತೊರೆದು ಅಮರತ್ವಕೆ || 1 || ನಿಮ್ಮ ಹಮ್ಮನು ತ್ಯಜಿಸಿ ಸುಮ್ಮನೆ […]