ದಶದಿಶೆಯೊಳು ಆವರಿಸಿದೆ ನಿಶೆಯಿದು
ಉಷೆಯುದಿಸುತಲೇ ನಶಿಸುತಿದೆ
ದೇಶದ ದೆಸೆಯನು ಬದಲಾಯಿಸುವ
ಕೇಶವನಾಸೆಯು ಫಲಿಸುತಿದೆ || ಪ ||
ಯೋಗದ ಯಾಗದ ಪ್ರಯೋಗಗಳಲಿ
ಜಗದ ಜನತೆಗೂ ಸಹ ಯೋಗ
ಯುಗಸಂಕ್ರಮಣದ ಶುಭ ಸಂಧಿಯಲಿ
ಸಂಘದ ಗಂಗೆಯ ವಿನಿಯೋಗ || 1 ||
ಪರಮಾರ್ಥದ ಪರಮಾಣುವ ಶೋಧನೆ
ಭಾರತವಿಂದು ಅಗ್ರಣಿಯು
ತತ್ವದ ಸತ್ವದ ಸತ್ಯಾನ್ವೇಷಣೆ
ಬೆಳಗಿದ ಭಾರತ ದಿನಮಣಿಯು || 2 ||
ಅಭ್ಯುದಯದ ಜತೆ ನಿಃಶ್ರೇಯಸ್ಸಿನ
ಸಾಧನೆ ಭಾರತದಾಶಯವು
ಜಗದ ಜನರ ಜತೆಗೆ ಮೃಗ ಖಗ ಸಂಕುಲ
ಸಕಲರ ಕ್ಷೇಮ ಸದಾಶಯವು || 3 ||