ಭಾರತದ ಯುವಜನತೆ ಸಿಡಿದೆದ್ದು

ಭಾರತದ ಯುವಜನತೆ ಸಿಡಿದೆದ್ದು ನಿಂತಿಹುದು
ದೇವದುರ್ಲಭವೆನಿಪ ಸಂಘಶಕ್ತಿ || ಪ ||

ಧ್ಯೇಯ ಜಲಸಿಂಚನಕೆ ಕನಸೊಡೆದು ಮೇಲೆದ್ದು
ಮೈ ಮರೆವಿನ ಪದರ ಕಿತ್ತುಬಿಸುಟು
ಮುದುರಿರುವ ಗರಿಬಿಚ್ಚಿ ಗಗನಾಂಗಣಕೆ
ಜಗದಗಲ ಸಂಚರಿಪ ಗರುಡನಂದದಲಿ || 1 ||

ತರತಮದ ಭೇದಗಳು ಅಳಿಸುತಲಿ ಜಸನದಲಿ
ಬೆಸಯುತಲಿ ಮನಮನಕೆ ಭಾವಸಂಪರ್ಕ
ಭಿನ್ನತೆಯ ಭಾರದಲಿ ಬಸವಳಿದ ಭಾರತಿಗೆ
ಏಕರಸ ಧಾರೆಯಲಿ ಕಾಯಕಲ್ಪ || 2 ||

ಅಕ್ಷಯದ ಬತ್ತಳಿಕೆ ಶಿಶು ಬಾಲ ತರುಣ ಗಣ
ಹೆದೆಯೇರ್ದ ಗಾಂಢಿವ ಪ್ರಾಢಗಢಣ
ಗೋವು ಗ್ರಾಮದ ರಕ್ಷೆ ವಿಜಯನಗರದ ದೀಕ್ಷೆ
ಅಜರಾಮರವೆನಿಪ ವಿಜಯ ಸಂಕಲ್ಪ || 3 ||

Leave a Reply

Your email address will not be published. Required fields are marked *

*

code