ಯ ಜಯ ಜಯ ರಘುವೀರಹರ ಹರ ಹರ ಮಹದೇವ || ಪ || ಪಡುಗಡಲಿನ ತೆರೆ ದಡಗಳ ಬಡಿದುಕರೆಯುದ್ದಕು ಜಯಭೇರಿಯ ಹೊಡೆದುಹಾಡುತಲಿರುವುದ ನಾವಾಲಿಸುವಾಎಲ್ಲರ ಕಂಠವ ಜತೆಗೂಡಿಸುವಾ || 1 || ಗಡಗಳ ನಡುವಿನ ಹೆಗ್ಗಾಡಿನಲಿಮೊರೆಯುವ ಬಿರುಗಾಳಿಯ ಹುಯ್ಲಿನಲಿಕಗ್ಗಲ್ಲಿನ ನೀರವ ಸುಯ್ಲಿನಲಿಏನದು ಕೇಳ್ವದು ವನದನಿಗಳಲಿ || 2 || ಶಿವನಶ್ವದ ರಣ ಕುಣಿತದ ಗೀತಸ್ವಾಮಿ ಸಮರ್ಥರ ಸುರ ಸಂಗೀತರಣವಾಸಿಯದೀ ವೀರೋದ್ಘೋಷಸನ್ಯಾಸಿಯ ಒಲವಿನ ಹೃದ್ಘೋಷ || 3 || ಹಿಂದೂ ಸ್ವಾತಂತ್ರ್ಯದ ಕ್ರಾಂತಿಪದಪರಿಚಯ ನುಡಿ ಜಾಗೃತ ಭಾರತದಭೋರಿಡಲಿ ನಿರಾಶೆಯ ಅಡಗಿಸುತವೈರಿಯ […]
ಜನನೀ ಜನ್ಮಭೂಮಿ… ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನೀ ಓ ಜನನೀ, ಜನನೀ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದೆ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ || 2 || ಉಜ್ವಲ ಕಲೆ ಸಂಸ್ಕೃತಿಗಳ […]
ಜನತಾ ರೂಪಿ ಜನಾರ್ದನ ನಿನ್ನ ಸೇವೆಯಗೈವೆನು ಅನುದಿನ ನಿನ್ನಯ ಶ್ರೀಪಾದಂಗಳಿಗರ್ಪಿತ ತನುಮನಧನ ವಿಜ್ಜೀವನ || ಪ || ಕೋಟಿ ಶರೀರದ ಕೋಟಿ ಮುಖಗಳಿಂ ಕೋಟಿ ಕೋಟಿ ಕರಚರಣಗಳಿಂದ ಕಂಗೊಳಿಸುವ ತವ ಭದ್ರ ಸ್ವರೂಪಕೆ ಶಿರ ಬಾಗುವೆನು ಆದರದಿಂದ || 1 || ವಿಭಜಿತ ಭಾವದ ವಿವಿಧ ಸ್ವಭಾವದ ನಿನ್ನ ಪ್ರಭಾವಕೆ ಒಳಗಾಗಿಹೆವು ವಿವಿಧತೆಯಲ್ಲಿಹ ಐಕ್ಯದ ಶಕ್ತಿಗೆ ಭಕ್ತಿಯಿಂದಲಿ ಶರಣಾಗಿಹೆವು || 2 || ಕ್ಷಣಿಕರು ನಾವು ಶಾಶ್ವತ ನೀನು ಸೃಷ್ಟಿಪ್ರಲಯ ಪರ್ಯಂತ ಅಮರನು ನಿನ್ನಯ ಸೇವೆಗೆ ಬದ್ಧರು […]
ಜ್ವಾಲಾಮುಖಿಯ ಗರ್ಭದಲಿ | ನಿದ್ರಿಸುತಿಹ ಸುಕುಮಾರ | ನೀದಾವಾನಲ ರೂಪವ ಧರಿಸಿ | ಪ್ರಕಟಗೊಳ್ಳು ಬಾರಾ || ಧೀರಾ ಪ್ರಕಟಗೊಳ್ಳು ಬಾರಾ || ಪ […]
ಗಂಡುಗಲಿ ಎದ್ದೇಳು ಬಂದಿಹುದು ಸಮಯ ಪುಂಡ ರಾಜರ ಬಲವ ಸದೆದು ಧರ್ಮವ ಮೆರೆವ ಗಂಡುಗೊಡಲಿಯ ಪರಶುರಾಮನವತಾರ || ಪ || ಮೋಸದ ಮತಾಂತರ ದ್ರೋಹ | ವ್ಯಾಪಿಸಿದೆ | ಪಶ್ಚಿಮದ ಪಾತಕಿಯ ಭೀತಿ ಸನ್ನಾಹ ರಾಷ್ಟ್ರಾಂತರವ ತಡೆದು ಭೀತಿ ವಾದವ ತುಳಿದು ಆಕ್ರಮಣಕುತ್ತರಿಸಿ ಬಿತ್ತರಿಸು ಛಲವ […]
ಗಂಗೆ ತುಂಗೆ ಹರಿವ ನಾಡು ನಮ್ಮ ಭಾರತ ಸ್ವರ್ಗಕ್ಕಿಂತ ಮಿಗಿಲು ನಮ್ಮ ಭವ್ಯಭಾರತ || ಪ || ಬೆಳ್ಳಿಬೆಟ್ಟ ತಾಯ ಶಿರಕೆ ಹೊಳೆವ ಮುಕುಟವು ಹಚ್ಚಹಸಿರ ಸಸ್ಯರಾಶಿ ದಿವ್ಯ ವಸ್ತ್ರವು ಮೂರು ಜಲಧಿ ಒಂದುಗೂಡಿ ಪಾದತೊಳೆವವು ಕೋಟಿ ಅಲೆಗಳಿಂದ ನಿತ್ಯ ಸ್ತುತಿಯ ಗೈವವು || 1 || ಉಷೆಯ ಉದಯರಾಗದೊಡನೆ ಬರುವ ನೇಸರ ಹೊಸತು ಹುರುಪು ತುಂಬಿ ಅಳಿಸಿ ಮನದ ಬೇಸರ ನಾಡಮೂಲೆ ಮೂಲೆಗಳಿಗೂ ಬೆಳಕ ಬೀರುತಾ ಅಂಧಕಾರ ನೀಗಿ ನಿಶೆಗೆ ಅಂತ್ಯ ಸಾರುತಾ || 2 […]
ಗೆಲುವಿಗೊಂದೆ ದಾರಿ ನಮಗೆ ಸಂಘ ಸಂಘ ಸಂಘ ಸಂಘೇ ಶಕ್ತಿಃ ಕಲೌಯುಗೇ ಸಂಘೇ ಶಕ್ತಿಃ ಹಿಂದು ಜನರ ಸಂಘಟನೆಯೆ ನಮ್ಮ ಕಾರ್ಯರಂಗ || ಪ || ತುಳಿದ ಜನರ ಬಾಳು ಬದುಕು ಕಳೆದು ಹೋಯ್ತು ದೂರ ಉಳಿದ ದೇಶ ಮೂರು ಚೂರು ಆದುದೊಂದು ಘೋರ ಉತ್ತರಿಸುವುದೆಂತು ಇಂಥ ನೋವಿನಾ ಪ್ರಸಂಗ || 1 || ದೇಶದಗಲ ವ್ಯಾಪಿಸುತಿದೆ ಭೀತಿವಾದದಾಟ ಗ್ರಾಮ ನಗರ ವನಗಳಲ್ಲು ಮತಾಂತರದ ಮಾಟ ಗೋವಿಗೆಲ್ಲಿ ರಕ್ಷೆ ಪ್ರಶ್ನಿಸುತಿದೆ ಅಂತರಂಗ || 2 || ಕೇಶವ […]
ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ ಶತಕವಿದನಳೆದು ಮರುಶತಕಕಿದೊ ಹಿಂದುತ್ವ ವೀರರಸ ಹೊನಲುದಿಸಿದೆ […]
ಗಡಿಗಳಲ್ಲಿ ಶತ್ರುಪಡೆಯು ಗುಂಡಿನಾಟ ನಡೆಸಿದೆ ಮೈಮರೆತು ಮಲಗಿದೆ ಹಿಂದುದೇಶ | ಗೆಳೆಯ ನೀನು ಎಚ್ಚರಾಗಿ ಟೊಂಕಕಟ್ಟದಿದ್ದರೆ ಕಾದಿಹುದು ನಾಡಿಗೆ ಸರ್ವನಾಶ ಮೊಳಗಿಸಿಂದು ಜಾಗೃತಿಯ ವೀರಘೋಷ ಜೈ ಭಾರತಿ ಜೈ ಜೈ ಭಾರತಿ || ಪ || ದೈನ್ಯಕಳೆದು ದಾಸ್ಯವಳಿದು ರಾಷ್ಟ್ರವಾಯಿತು ಸ್ವತಂತ್ರ ಮಾತೃಭುವಿಯ ಛಿದ್ರಗೈದ […]
ಕೇಶವನಾ ಬಲಿದಾನ ಹಿಂದು ಸಮಾಜದ ಪುನರುತ್ಥಾನಕೆ || ಪ || ಹಿಂದು ಹಿಂದುವಿನ ಹೃದಯದಲಿ ರಾಷ್ಟ್ರಪ್ರೇಮ ರಸವೆರೆಯುತಲೀ ಬಂಧು ಭಾವದ ನಿಜವನು ತೋರಿ ಹಿಂದು ಭಿನ್ನತೆಯ ದಮನವ ಗೈದಾ ಸಂಘಟನ ಸೂತ್ರಧಾರೀ || 1 || ಆರ ಅಕ್ಕರೆಯ ಬಾವುಟವೂ ಹಿಂದು ಹೃದಯದಲಿ ಮೆರೆಯುವುದೋ ಆರ ಶಬ್ದಕೇ ಯುವಕರ ಮನವೂ ಏಕ ಕಂಠದಿಂ ಓಗೊಡುತಿಹುದೋ ಹಿಂದು ಕಾಂತಿಗೆ ಮಣಿದರ್ಪಣವೋ || 2 || ಈಶ್ವರೀಯತೆಯ ಬೆಳೆಯಿಸಲೂ ರುಧಿರ ಜಲವ ತಾನೆರೆದಿಹನೂ ಅಡಿಗಡಿಗೂ ತಾ ವಿಷವ ಸ್ವಾಗತಿಸಿ ಪ್ರೇಮ […]