ಜನತಾ ರೂಪಿ ಜನಾರ್ದನ

ಜನತಾ ರೂಪಿ ಜನಾರ್ದನ ನಿನ್ನ ಸೇವೆಯಗೈವೆನು ಅನುದಿನ
ನಿನ್ನಯ ಶ್ರೀಪಾದಂಗಳಿಗರ್ಪಿತ ತನುಮನಧನ ವಿಜ್ಜೀವನ || ಪ ||

ಕೋಟಿ ಶರೀರದ ಕೋಟಿ ಮುಖಗಳಿಂ
ಕೋಟಿ ಕೋಟಿ ಕರಚರಣಗಳಿಂದ
ಕಂಗೊಳಿಸುವ ತವ ಭದ್ರ ಸ್ವರೂಪಕೆ
ಶಿರ ಬಾಗುವೆನು ಆದರದಿಂದ || 1 ||

ವಿಭಜಿತ ಭಾವದ ವಿವಿಧ ಸ್ವಭಾವದ ನಿನ್ನ
ಪ್ರಭಾವಕೆ ಒಳಗಾಗಿಹೆವು
ವಿವಿಧತೆಯಲ್ಲಿಹ ಐಕ್ಯದ ಶಕ್ತಿಗೆ
ಭಕ್ತಿಯಿಂದಲಿ ಶರಣಾಗಿಹೆವು || 2 ||

ಕ್ಷಣಿಕರು ನಾವು ಶಾಶ್ವತ ನೀನು
ಸೃಷ್ಟಿಪ್ರಲಯ ಪರ್ಯಂತ ಅಮರನು
ನಿನ್ನಯ ಸೇವೆಗೆ ಬದ್ಧರು ನಾವು
ಕಾಯಕಕೆ ಸನ್ನದ್ಧರು ನಾವು || 3 ||

ವಿಶ್ವ ಕುಟುಂಬದ ಪರಿಕಲ್ಪನೆಯ
ಆದರ್ಶದ ಆರಾಧನೆಗಾಗಿ
ಮೇದಿನಿಯೊಡಲಿನ ವೇದನೆ ನೀಗುತ
ಧನ್ಯತೆ ಹೊಂದುವ ಸಾಧನೆಗಾಗಿ || 4 ||

Leave a Reply

Your email address will not be published. Required fields are marked *

*

code