ಗಂಡುಗಲಿ ಎದ್ದೇಳು

ಗಂಡುಗಲಿ ಎದ್ದೇಳು ಬಂದಿಹುದು ಸಮಯ
ಪುಂಡ ರಾಜರ ಬಲವ ಸದೆದು ಧರ್ಮವ ಮೆರೆವ
ಗಂಡುಗೊಡಲಿಯ ಪರಶುರಾಮನವತಾರ                                      || ಪ ||

ಮೋಸದ ಮತಾಂತರ ದ್ರೋಹ |
ವ್ಯಾಪಿಸಿದೆ | ಪಶ್ಚಿಮದ ಪಾತಕಿಯ ಭೀತಿ ಸನ್ನಾಹ
ರಾಷ್ಟ್ರಾಂತರವ ತಡೆದು ಭೀತಿ ವಾದವ ತುಳಿದು
ಆಕ್ರಮಣಕುತ್ತರಿಸಿ ಬಿತ್ತರಿಸು ಛಲವ                                                 || 1 ||

ಭೂಪಾಲ ರಾಮ ನಿನ್ನಂಶ |
ಮರೆಯದಿರು | ಗೋಪಾಲ ಶ್ರೀಕೃಷ್ಣ ನಿನ್ನದೇ ವಂಶ
ಗೋವುಗಳ ರಕ್ಷಿಸುತ ಮಂದಿರವ ಕಟ್ಟಿಸುತ
ಆಗ್ರಹದಿ ಅನುಸರಿಸು ಜಾಗೃತಿಯ ಪಥವ                                       || 2 ||

ಜಾತಿ ಜಾತಿಗಳ ಮೇಲುಕೀಳುಗಳ ತರತಮಕೆಲ್ಲಿದೆ ಪರಿಹಾರ?
ದಲಿತರ ಧನಿಕರ ಬಡವ ಬಲ್ಲಿದರ ಅಂತರಕೆಲ್ಲಿದೆ ಪರಿಹಾರ?
ಉತ್ತರದೆತ್ತರ ಹಬ್ಬಿದ ನಾಡಿನ ರಕ್ಷಣೆಗೇನಿದೆ ಪರಿಹಾರ?
ಸತತ ಮತಾಂತರ ಪತಿತ ಮಂದಿರ ಎಲ್ಲಿದೆ ಎಲ್ಲಿದೆ ಪರಿಹಾರ?
ಹಿಂದುಗಳೇ ಉತ್ತಿಷ್ಠತ ಜಾಗೃತ – ಜಾಗೃತಿಯೊಂದೇ ಉತ್ತರಾ…
ಬಂಧುಗಳೇ ಉತ್ತಿಷ್ಠತ ಜಾಗೃತ – ಜಾಗೃತಿಯೊಂದೇ ಉತ್ತರಾ
ಹಿಂದು ಜಾಗೃತಿಯೊಂದೇ ಉತ್ತರ – ವೀರ ಭೋಗ್ಯಾ ವಸುಂಧರಾ || 3 ||

Leave a Reply

Your email address will not be published. Required fields are marked *

*

code