ಕೇಶವನಾ ಬಲಿದಾನ

ಕೇಶವನಾ ಬಲಿದಾನ
ಹಿಂದು ಸಮಾಜದ ಪುನರುತ್ಥಾನಕೆ || ಪ ||

ಹಿಂದು ಹಿಂದುವಿನ ಹೃದಯದಲಿ
ರಾಷ್ಟ್ರಪ್ರೇಮ ರಸವೆರೆಯುತಲೀ
ಬಂಧು ಭಾವದ ನಿಜವನು ತೋರಿ
ಹಿಂದು ಭಿನ್ನತೆಯ ದಮನವ ಗೈದಾ
ಸಂಘಟನ ಸೂತ್ರಧಾರೀ || 1 ||

ಆರ ಅಕ್ಕರೆಯ ಬಾವುಟವೂ
ಹಿಂದು ಹೃದಯದಲಿ ಮೆರೆಯುವುದೋ
ಆರ ಶಬ್ದಕೇ ಯುವಕರ ಮನವೂ
ಏಕ ಕಂಠದಿಂ ಓಗೊಡುತಿಹುದೋ
ಹಿಂದು ಕಾಂತಿಗೆ ಮಣಿದರ್ಪಣವೋ || 2 ||

ಈಶ್ವರೀಯತೆಯ ಬೆಳೆಯಿಸಲೂ
ರುಧಿರ ಜಲವ ತಾನೆರೆದಿಹನೂ
ಅಡಿಗಡಿಗೂ ತಾ ವಿಷವ ಸ್ವಾಗತಿಸಿ
ಪ್ರೇಮ ಶರಧಿಯಿಂ ಅಮೃತವನೆಸಗೀ
ಹಿಂದು ಸಂಸ್ಕೃತಿಗೆ ಅಮರತೆ ನೀಡಿದಾ || 3 ||

ವಿಶ್ವ ಗುರುವಿನವತಾರವದೂ
ಹಿಂದು ಮಾತೆಗೆ ಬಲು ಚೆಲುವೂ
ಮಂಗಲ ಮಾತೆಯ ಮರುಗಿದ ಮನಕೇ
ಸುಮಧುರ ಶಾಂತಿಯ ಬಯಸಿದ ಮನವಾ
ರಾಷ್ಟ್ರದೇವನಲಿ ಸಮರಸವಾಂತಾ || 4 ||

Leave a Reply

Your email address will not be published. Required fields are marked *

*

code