ಗಡಿಗಳಲ್ಲಿ ಶತ್ರುಪಡೆಯು

ಗಡಿಗಳಲ್ಲಿ ಶತ್ರುಪಡೆಯು ಗುಂಡಿನಾಟ ನಡೆಸಿದೆ
ಮೈಮರೆತು ಮಲಗಿದೆ ಹಿಂದುದೇಶ |
ಗೆಳೆಯ ನೀನು ಎಚ್ಚರಾಗಿ ಟೊಂಕಕಟ್ಟದಿದ್ದರೆ
ಕಾದಿಹುದು ನಾಡಿಗೆ ಸರ್ವನಾಶ
ಮೊಳಗಿಸಿಂದು ಜಾಗೃತಿಯ ವೀರಘೋಷ
ಜೈ ಭಾರತಿ ಜೈ ಜೈ ಭಾರತಿ                                                || ಪ ||

ದೈನ್ಯಕಳೆದು ದಾಸ್ಯವಳಿದು ರಾಷ್ಟ್ರವಾಯಿತು ಸ್ವತಂತ್ರ
ಮಾತೃಭುವಿಯ ಛಿದ್ರಗೈದ ಧೂರ್ತ ಅರಿಗಳಾ ಕುತಂತ್ರ
ಅರಿಯಲಾರೆಯಾ ಕಣ್ ತೆರೆಯಲಾರೆಯಾ?
ವಿಪತ್ತಿನಿಂದ ನಾಡ ಪಾರು ಮಾಡಲಾರೆಯಾ?
ಮೈಮರೆತು ಮಲಗಿದೆ ಹಿಂದು ದೇಶ
ಮೊಳಗಿಸಿಂದು ಜಾಗೃತಿಯ ವೀರಘೋಷ                       || 1 ||

ಪಂಚನದಿಯ ಪುಣ್ಯನೆಲವು ಪಂಜಾಗಿ ಉರಿಯುತಿಹುದು
ಕಾಶ್ಮೀರದೊಡಲಿನಿಂದ ರಕ್ತಧಾರೆ ಹರಿಯುತಿಹುದು
ನೀಡಲಾರೆಯಾ ಕೈ ನೀಡಲಾರೆಯಾ?
ನೋವಿನಿಂದ ನಾಡ ಕಾಪಾಡಲಾರೆಯಾ?
ಮೈಮರೆತು ಮಲಗಿದೆ ಹಿಂದು ದೇಶ
ಮೊಳಗಿಸಿಂದು ಜಾಗೃತಿಯ ವೀರಘೋಷ                      || 2 ||

ಎಲ್ಲ ಭೇದವನ್ನು ಮರೆತು ಐಕ್ಯಶಕ್ತಿಯಿಂದ ಬೆರೆತು
ದ್ರೋಹಿ ಜನರ ಶಿರವ ಮೆಟ್ಟಿ ಅರಿಯ ಯಮನ ಸದನಕಟ್ಟಿ
ಕಟ್ಟಲಾರೆಯಾ ನಾಡ ಕಟ್ಟಲಾರೆಯಾ?
ಭರತಭುವಿಯ ಪರಮಗುರಿಯ ಮುಟ್ಟಲಾರೆಯಾ?
ಮೈಮರೆತು ಮಲಗಿದೆ ಹಿಂದು ದೇಶ
ಮೊಳಗಿಸಿಂದು ಜಾಗೃತಿಯ ವೀರಘೋಷ                       || 3 ||

Leave a Reply

Your email address will not be published. Required fields are marked *

*

code