ಗೆಲುದನಿಯು ಗುಡುಗುಡುಗಿ

ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ
ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ
ಶತಕವಿದನಳೆದು ಮರುಶತಕಕಿದೊ ಹಿಂದುತ್ವ
ವೀರರಸ ಹೊನಲುದಿಸಿದೆ                                                                                            || ಪ ||

ಕತ್ತಲೆಯ ಕೌರವರು ಸುತ್ತನೂರೆದ್ದಿರಲು
ಕ್ಷುದ್ರ ದೌರ್ಬಲ್ಯಗಳಿಗಿನ್ನೆಲ್ಲಿಯ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಧರ್ಮಸಂರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ                              || 1 ||

ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ
ಅವಳು ಸಲಹಿದ ಸುತರು ನಾವೆಂಬ ನೆನಪು
ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು
ಅರ್ಪಣೆಯೊಳಗಾನಂದ ನೇರ್ಪುಗೊಂಡಿಹುದಿಲ್ಲಿ ರಾಷ್ಟ್ರೀಯತೆಯು ಮೆರೆದಿದೆ || 2 ||

ಕಪಟ ಮತಾಂತರ ಆಮಿಷ ಅಂಜಿಕೆ ನಾಡಿನ ನಾಡಿಯ ವ್ಯಾಪಿಸಿರೆ
ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ
ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ                                                  || 3 ||

Leave a Reply

Your email address will not be published. Required fields are marked *

*

code