ಜನನೀ ಜನ್ಮಭೂಮಿ

ಜನನೀ ಜನ್ಮಭೂಮಿ…
ಭಾರತಿ ನಿನ್ನಯ ಅಡಿಗಳಿಗೆ
ಪೊಡಮಡುವೆ ನಾ ಅಡಿಗಡಿಗೆ
ಜನನೀ ಓ ಜನನೀ, ಜನನೀ ಜನ್ಮಭೂಮಿ || ಪ ||

ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು
ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 ||

ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದೆ ಒಡಲು
ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ || 2 ||

ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ ಕಲಿಗಳ ಸಾಹಸ ಬೀಡು
ಶಂಕರ ಬಸವ ವಿವೇಕರ ನೆಲವು ಪಾವನವು ಸೌಭಾಗ್ಯದ ಫಲವು || 3 ||

ಸಾವಿರ ಜನ್ಮವು ಬಂದರೆ ಬರಲಿ ತಾಯೆ ನಿನ್ನಯ ಮಡಿಲೆನಗಿರಲಿ
ನಿನ್ನಲೆ ಜನನ ನಿನ್ನಲೆ ಮರಣ ಎನ್ನಯ ಜೀವನ ನಿನಗೇ ಶರಣ || 4 ||

Leave a Reply

Your email address will not be published. Required fields are marked *

*

code