ಗಡಿಗಳಲ್ಲಿ ಶತ್ರುಪಡೆಯು ಗುಂಡಿನಾಟ ನಡೆಸಿದೆ ಮೈಮರೆತು ಮಲಗಿದೆ ಹಿಂದುದೇಶ | ಗೆಳೆಯ ನೀನು ಎಚ್ಚರಾಗಿ ಟೊಂಕಕಟ್ಟದಿದ್ದರೆ ಕಾದಿಹುದು ನಾಡಿಗೆ ಸರ್ವನಾಶ ಮೊಳಗಿಸಿಂದು ಜಾಗೃತಿಯ ವೀರಘೋಷ ಜೈ ಭಾರತಿ ಜೈ ಜೈ ಭಾರತಿ || ಪ || ದೈನ್ಯಕಳೆದು ದಾಸ್ಯವಳಿದು ರಾಷ್ಟ್ರವಾಯಿತು ಸ್ವತಂತ್ರ ಮಾತೃಭುವಿಯ ಛಿದ್ರಗೈದ […]
ಕೇಶವನಾ ಬಲಿದಾನ ಹಿಂದು ಸಮಾಜದ ಪುನರುತ್ಥಾನಕೆ || ಪ || ಹಿಂದು ಹಿಂದುವಿನ ಹೃದಯದಲಿ ರಾಷ್ಟ್ರಪ್ರೇಮ ರಸವೆರೆಯುತಲೀ ಬಂಧು ಭಾವದ ನಿಜವನು ತೋರಿ ಹಿಂದು ಭಿನ್ನತೆಯ ದಮನವ ಗೈದಾ ಸಂಘಟನ ಸೂತ್ರಧಾರೀ || 1 || ಆರ ಅಕ್ಕರೆಯ ಬಾವುಟವೂ ಹಿಂದು ಹೃದಯದಲಿ ಮೆರೆಯುವುದೋ ಆರ ಶಬ್ದಕೇ ಯುವಕರ ಮನವೂ ಏಕ ಕಂಠದಿಂ ಓಗೊಡುತಿಹುದೋ ಹಿಂದು ಕಾಂತಿಗೆ ಮಣಿದರ್ಪಣವೋ || 2 || ಈಶ್ವರೀಯತೆಯ ಬೆಳೆಯಿಸಲೂ ರುಧಿರ ಜಲವ ತಾನೆರೆದಿಹನೂ ಅಡಿಗಡಿಗೂ ತಾ ವಿಷವ ಸ್ವಾಗತಿಸಿ ಪ್ರೇಮ […]
ಕೇಶವನ ಧ್ಯೇಯವಿದು ನಮ್ಮ ಬಾಳುಸಿರು ಆತನಾ ನೆನಪೆಮಗೆ ಮನದಲಿ ತಾ ಹಸಿರು || ಪ || ತನು ಮನವು ಜೀವನವು, ತಾಯ್ನೆಲಕೆ ಅರ್ಪಿತವು ತಾಯ್ನೆಲದಾ ವೈಭವವೇ, ಬಾಳಿದಕೆ ಹೆಗ್ಗುರಿಯು || 1 || ಹಿಂದುವಿನ ಹೃದಯದೊಳು, ಹೀನತೆಯು ತುಂಬಿಹುದು ಕುಂದಿದನು ಕಳೆದಳಿಸಿ, ಬಂಧುತನ ಬೆಳಸುವುದು || 2 || ಜಗಕೊಮ್ಮೆ ಗುರುವಾಗಿ ಮೆರೆದಿಹುದೋ ಭಗವೆ ಇದು ಮೆರೆಯಿಸಲು ಮತ್ತದನು, ಜಗದಗಲ ಒಯ್ಯುವುದು || 3 ||
ಕೇಶವನ ಕಲ್ಪನೆಯ ಅರಿತುಕೊಳ್ಳೋಣ ಆ ಧ್ಯೇಯಕಾಗಿ ಮುಡಿಪು ಈ ಬದುಕು ಎನ್ನೋಣ || ಪ || ವಿಶ್ವಗುರುವು ನೀನೆ ತಾಯಿ ಭಾರತಿ ಎಂದು ಗೌರವಿಸಿತು ಜಗವು ನಿನ್ನ ಬಳಿಗೆ ಬಂದು ಮೈಮರೆಸಿತು ವೈಭವವು ಮಕ್ಕಳನಂದು ಮರೆವಿನಿಂದ ಎರಗಿತು ದಾಸ್ಯವು ಬಂದು || 1 || ಕತ್ತಲೆಯಲ್ಲಿ ತುಂಬಿ ಮಕ್ಕಳ ಬದುಕು ಕೇಶವನ ರೂಪದಲ್ಲಿ ಹೊಮ್ಮಿತು ಬೆಳಕು ತಾಯಿಗಿಂತ ಮಿಗಿಲಲ್ಲ ಬಾಳು ಎಂದಿಗೂ ದೇಹವಲ್ಲ ದೇಶವೆ ಅಮರ ಎಂದಿಗೂ […]
ಕಿವಿಮಾತು ನುಡಿಯುತ್ತೇನೆ ಕೊಂಚ ಲಾಲಿಸೋ ತಮ್ಮಾ ಸಂಘಟನೆ ಗುಟ್ಟಿದು ತಿಳಿಯಬಾರೋ || ಪ || ಗುಂಡಿಗೆ ಆರದ ಬೆಂಕಿಯಿರಲಿ ಭುಗಿಲೆದ್ದು ಉರಿಯುವ ನಿತ್ಯಜ್ವಾಲೆ ನಂದದ ಧ್ಯೇಯದ ಅಗ್ನಿಯುಜ್ವಲ ಕಾರ್ಯಕ್ಕೆ ಮಾಡುವ ಇಂಧನವು || 1 || ಮನವೆಂದು ತಣಿಸುವ ತಂಪಿರಲಿ ಶೀತಲದಿರುಳಿನ ಬೆಳದಿಂಗಳು ಸಾಂತ್ವನ ಸ್ನೇಹದ ನುಡಿ ಇಂಪು ಬೆಸುಗೆಯ ತೋಪಿನಲಿ ಪೆಂಪು ಪೆಂಪು || 2 || ಪಾದದಿ ಉರುಳಲಿ ತಿರುಗು ಚಕ್ರ ಸಂಪರ್ಕ ದೊರೆಯಲಿ ದೆಸೆ ಶುಕ್ರ ಹೂವಿನ ಪರಿಮಳ ಹರಡುವಂತೆ ನಡೆವ ಹಾದಿಯೆಲ್ಲಾ […]
ಕಬಡ್ಡಿ ಕಬಡ್ಡಿ ಉಸಿರಾಡಿ ಶಕ್ತಿಯ ಆಟವ ಆಡೋಣ ಸಂಘಸ್ಥಾನದಿ ಹೊರಳಾಡಿ ಮಾತೆಯ ನಿತ್ಯ ಸ್ಮರಿಸೋಣ || ಪ || ದಂಡವ ಕೈಯಲಿ ತಿರುಗಿಸುತ ಸಾಹಸದನುಭವ ಸವಿಯೋಣ ಹೆಜ್ಜೆಗೆ ಹೆಜ್ಜೆಯ ಕೂಡಿಸುತ ಸಂಘದ ಮಂತ್ರವ ಜಪಿಸೋಣ || 1 || ಚೀರಾಟ ಕೂಗಾಟ ಹಾರಾಟಗಳಲಿ, ಸ್ನೇಹದ ಸುಧೆಯನು ಹರಿಸೋಣ ಅನುಶಾಸನದ ಬಂಧನದಿ ಶಿಸ್ತಿನ ಸೈನಿಕರಾಗೋಣ || 2 || ಭಗವಾಧ್ವಜದ ಅಡಿಯಲ್ಲಿ ಮೈಮನ ಮರೆತು ಕಲೆಯೋಣ ಕಥೆ ಕವನಗಳ ಸ್ಪೂರ್ತಿಯಲಿ ಬಾಳಲಿ ಹರ್ಷವ ತುಂಬೋಣ || 3 || […]
ಓಗೊಡಿರಿಂದು ಕಾಲದ ಕರೆಗೆ ಸ್ಪಂದಿಸ ಬನ್ನಿ ಮಾತೆಯ ಮೊರೆಗೆ || ಪ || ಗತ ಇತಿಹಾಸದ ಗರ್ಭದೊಳಡಗಿದ ಬಡಬಾಗ್ನಿಯ ಬಡಿದೆಬ್ಬಿಸಬನ್ನಿ ಶತಶತಮಾನದ ಕಡು ಅಪಮಾನದ ಅಧ್ಯಾಯವ ಕೊನೆಗಾಣಿಸ ಬನ್ನಿ || 1 || ಈ ನಾಡಿನ ಗಡಿಗುಡಿಗಳ ರಕ್ಷಣೆ ಗೈಯಲು ಪ್ರಾಣಾರ್ಪಣೆ ಮಾಡಿರುವ ಅಗಣಿತ ವೀರರ ಸ್ಮರಣೆಯ ಮಾಡುತ ಕರ್ತವ್ಯದ ಪಥದಲಿ ಮುನ್ನಡೆವಾ || 2 || ಸತ್ತಾರೂಢರ ಭ್ರಷ್ಟಾಚಾರವು ಹೆಮ್ಮರವಾಗಿ ಬೆಳೆದಿಹುದಿಂದು ಸ್ವಾರ್ಥ ದುರಾಸೆಯ ಮೇರೆಯ ಮೀರಿ ರಾಷ್ಟ್ರ ಹಿತವು ಮರೆಯಾಗಿಹುದಿಂದು || 3 || […]
ಓ ಬೆಳಗಲಿಹುದದೋ ಭಾರತದ ಬಾನಂಚು ಸತ್ತುರುಳುತಿದೆ ನಿಶಾಸುರನ ಸಂಚು ಮೊಳಗುತಿದೆ ಸ್ಪೂರ್ತಿಯಲಿ ನೆಲದೊಕ್ಕೊರಲ ಕಂಚು ಅರಳುತಿದೆ ಪ್ರೇರಣೆಯ ಲತೆಯ ಮಿಂಚು || ಪ || ಭುವಿಯಾಳಕಿಳಿದಿಳಿದು ಬೇರುಗಳ ಬಾಯಿಂದ ನೆಲದೆದೆಯ ಪೀಯೂಷ ಪಡೆದು ಕುಡಿದು ಹೆಬ್ಬಂಡೆಗಳನೆಬ್ಬಿಸುವ ಹೆಮ್ಮರದ ಹಾಗೆ ಇಲ್ಲಿದೋ ಏಳುತಿದೆ ತರುಣಶಕ್ತಿ […]
ಓ ದಾರಿಗನೇ ಪ್ರಿಯ ನೇಹಿಗನೇ ಗೈಯುವ ಬಾ ನವಯುಗ ನಿರ್ಮಾಣ ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ || ಪ || ಹಿಡಿಕೂಳಿನ ಬರಿಗೋಳಿನ ಬಾಳಿಗೆ ಮಾರುವೆಯಾ ತನುಮನವನು ಗೆಳೆಯಾ ಪಶುಬಲದಿದಿರಿಗೆ ಅಡಿಯಾಳಾಗುತ ಮರೆಯುವೆಯಾ ಮಾನವ್ಯದ ಗುರಿಯಾ? || 1 || ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ ಮಾನವ ಜೀವನದನಂತ ಮಹಿಮೆ ಬಿಸಿಯಾರುವ ಮೊದಲೇ ಜಗವರಿಯಲಿ ನಿನ್ನಯ ಪವಿತ್ರ ರಕ್ತದ ಹಿರಿಮೆ || 2 || […]
ಒಂದಾಗಿ ಹೇಳುವೆವು ನಾವೆಲ್ಲ ಹಿಂದು ನಮ್ದೇಶ ಹಿಂದು, ನಾವೆಲ್ಲ ಹಿಂದು ಹಿಂದೂ ಇಂದೂ ಮುಂದೂ, ನಾವೆಲ್ಲ ಹಿಂದು || ಪ || ಹಿಂದುಗಳು ನಾವೆಂದು ಹೇಳೋಕೆ ಭಯವೇ ಹಿಂದುಗಳೆ ನಾವಿರಲು ಹೇಳಿದರೆ ನೋವೇ ಯಾರಣ್ಣ ಹೇಳೋರು ಹೇಳದಿರೆ ನಾವೇ ಮತ್ತೇನು ಬೇಕಣ್ಣ ಹೇಳದೆಯೆ ಸಾವೆ || 1 || ದಕ್ಷಿಣದ ಸಾಗರದ ಘೋಷಣೆಯು ಹಿಂದು ಹೈಮಾದ್ರಿ ಮಾರ್ದನಿಯ ನೀಡುತಿದೆ ಹಿಂದು ಬಂಗಾಳ ಹುಚ್ಚೆದ್ದು ಸಾರುತಿದೆ ಹಿಂದು ನವ ಜೀವ ಮಂತ್ರವಿದು ನಾವೆಲ್ಲ ಹಿಂದು || 2 || […]