ಕಬಡ್ಡಿ ಕಬಡ್ಡಿ ಉಸಿರಾಡಿ ಶಕ್ತಿಯ ಆಟವ ಆಡೋಣ
ಸಂಘಸ್ಥಾನದಿ ಹೊರಳಾಡಿ ಮಾತೆಯ ನಿತ್ಯ ಸ್ಮರಿಸೋಣ || ಪ ||
ದಂಡವ ಕೈಯಲಿ ತಿರುಗಿಸುತ ಸಾಹಸದನುಭವ ಸವಿಯೋಣ
ಹೆಜ್ಜೆಗೆ ಹೆಜ್ಜೆಯ ಕೂಡಿಸುತ ಸಂಘದ ಮಂತ್ರವ ಜಪಿಸೋಣ || 1 ||
ಚೀರಾಟ ಕೂಗಾಟ ಹಾರಾಟಗಳಲಿ, ಸ್ನೇಹದ ಸುಧೆಯನು ಹರಿಸೋಣ
ಅನುಶಾಸನದ ಬಂಧನದಿ ಶಿಸ್ತಿನ ಸೈನಿಕರಾಗೋಣ || 2 ||
ಭಗವಾಧ್ವಜದ ಅಡಿಯಲ್ಲಿ ಮೈಮನ ಮರೆತು ಕಲೆಯೋಣ
ಕಥೆ ಕವನಗಳ ಸ್ಪೂರ್ತಿಯಲಿ ಬಾಳಲಿ ಹರ್ಷವ ತುಂಬೋಣ || 3 ||
ಸಂಘಸ್ಥಾನದ ಪ್ರತಿಕಣದಲ್ಲಿಯೂ ಪಾವಿತ್ರ್ಯದ ಹೊಳೆ ಹರಿದಿಹುದು
ಪ್ರತಿಯೊಂದಾಟದಿ ಪ್ರತಿ ನಿಮಿಷದಲಿ ಧ್ಯೇಯದ ಚೇತನ ಹೊಮ್ಮಿಹುದು || 4 ||
ಒಂದೇ ಕಡೆ ಎಲ್ಲಾ ಸಿಕ್ಕಿತು ಧನ್ಯವಾದ