ದಾಹ ದಾಹ ದಿಗ್ವಿಜಯಕೆ

ದಾಹ ದಾಹ ದಿಗ್ವಿಜಯಕೆ, ಸ್ವಾಭಿಮಾನ ಭರಿತ ಹೃದಯಕೆ ಸ್ವತಂತ್ರ ಜನತೆಯೆದೆಯ ಬೆಂಕಿ ಆರದೆಂದು ಆರದು ಮಾತೃಭೂಮಿಗಳಿವು ದಾಸ್ಯ ಬಾರದೆಂದು ಬಾರದು        || ಪ || ಹಸಿರು ಘಟ್ಟ ಹಿಮದ ಬೆಟ್ಟ ಜಲಧಿ ಗಗನ ನಮ್ಮದು ದುಷ್ಟತನವ ಮೆಟ್ಟಿ ನಿಲುವ ನ್ಯಾಯ ನಿಷ್ಠೆ ನಮ್ಮದು ಪ್ರಿಯ ಸ್ವದೇಶ ರಕ್ಷಣಾರ್ಥ ಹೊರಟೆವಿದೋ ಹೊರಟೆವು ಕಡೆಯ ತನಕ ಗೆಲ್ಲುವನಕ ನಿಲ್ಲೆವೆಲ್ಲು ನಿಲ್ಲೆವು                  || 1 || […]

Read More

ತಡವದೇಕೆ ತಾಯ ಕರೆಗೆ

ತಡವದೇಕೆ ತಾಯ ಕರೆಗೆ ಬಾಳೆ ಅವಳ ಕೊಡುಗೆ ಅಳಿಸಬೇಕು ಅವಳ ನೋವು ತೊಡಿಸಿ ಹರುಷದುಡಿಗೆ || ಪ || ಜಾರದಿರಲಿ ಸಮಯವಿನಿತು ಕ್ಷಣಿಕ ನಮ್ಮ ಬದುಕು ತಾಯಭಕ್ತಿ ಧ್ಯೇಯಜ್ಯೋತಿ ಜಗಕೆ ಪ್ರಖರ ಬೆಳಕು ಹಣದ ಮೋಹ ಕೀರ್ತಿ ದಾಹ ತರದೆಂದಿಗೂ ಮೆರಗು ಋಣವ ಕಳೆವ ಪರಿಯ ಸೇವೆ ಅದುವೆ ಬಾಳ ಬೆಳಕು || 1 || ಜನ್ಮದಾತೆ ಚರಣಸೇವೆ ತ್ಯಾಗಕಿಂತ ಮಿಗಿಲು ಭೇದ ಬಿಟ್ಟು ಮೋದದಿಂದ ದುಡಿದಾಗಲೆ ಹಗಲು ಧ್ಯೇಯ ಪಥದಿ ನೇರ ಪಯಣ ತೊರೆದು ಅರಿಗಳಂಜಿಕೆ […]

Read More

ಜಯ ಜಯ ಜಯ ರಘುವೀರ

ಜಯ ಜಯ ಜಯ ರಘುವೀರ ಹರ ಹರ ಹರ ಮಹದೇವ || ಪ || ಪಡುಗಡಲಿನ ತೆರೆ ದಡಗಳ ಬಡಿದು ಕರೆಯುದ್ದಕು ಜಯಭೇರಿಯ ಹೊಡೆದು ಹಾಡುತಲಿರುವುದ ನಾವಾಲಿಸುವಾ ಎಲ್ಲರ ಕಂಠವ ಜತೆಗೂಡಿಸುವಾ || 1 || ಗಡಗಳ ನಡುವಿನ ಹೆಗ್ಗಾಡಿನಲಿ ಮೊರೆಯುವ ಬಿರುಗಾಳಿಯ ಹುಯ್ಲಿನಲಿ ಕಗ್ಗಲ್ಲಿನ ನೀರವ ಸುಯ್ಲಿನಲಿ ಏನದು ಕೇಳ್ವದು ವನದನಿಗಳಲಿ || 2 || ಶಿವನಶ್ವದ ರಣ ಕುಣಿತದ ಗೀತ ಸ್ವಾಮಿ ಸಮರ್ಥರ ಸುರ ಸಂಗೀತ ರಣವಾಸಿಯದೀ ವೀರೋದ್ಘೋಷ ಸನ್ಯಾಸಿಯ ಒಲವಿನ ಹೃದ್ಘೋಷ || […]

Read More

ಜನನೀ ಜನ್ಮಭೂಮಿ

ಜನನೀ ಜನ್ಮಭೂಮಿ… ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನೀ ಓ ಜನನೀ, ಜನನೀ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದೆ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ || 2 || ಉಜ್ವಲ ಕಲೆ ಸಂಸ್ಕೃತಿಗಳ […]

Read More

ಜನತಾ ರೂಪಿ ಜನಾರ್ದನ

ಜನತಾ ರೂಪಿ ಜನಾರ್ದನ ನಿನ್ನ ಸೇವೆಯಗೈವೆನು ಅನುದಿನ ನಿನ್ನಯ ಶ್ರೀಪಾದಂಗಳಿಗರ್ಪಿತ ತನುಮನಧನ ವಿಜ್ಜೀವನ || ಪ || ಕೋಟಿ ಶರೀರದ ಕೋಟಿ ಮುಖಗಳಿಂ ಕೋಟಿ ಕೋಟಿ ಕರಚರಣಗಳಿಂದ ಕಂಗೊಳಿಸುವ ತವ ಭದ್ರ ಸ್ವರೂಪಕೆ ಶಿರ ಬಾಗುವೆನು ಆದರದಿಂದ || 1 || ವಿಭಜಿತ ಭಾವದ ವಿವಿಧ ಸ್ವಭಾವದ ನಿನ್ನ ಪ್ರಭಾವಕೆ ಒಳಗಾಗಿಹೆವು ವಿವಿಧತೆಯಲ್ಲಿಹ ಐಕ್ಯದ ಶಕ್ತಿಗೆ ಭಕ್ತಿಯಿಂದಲಿ ಶರಣಾಗಿಹೆವು || 2 || ಕ್ಷಣಿಕರು ನಾವು ಶಾಶ್ವತ ನೀನು ಸೃಷ್ಟಿಪ್ರಲಯ ಪರ್ಯಂತ ಅಮರನು ನಿನ್ನಯ ಸೇವೆಗೆ ಬದ್ಧರು […]

Read More

ಜ್ವಾಲಾಮುಖಿಯ ಗರ್ಭದಲಿ

ಜ್ವಾಲಾಮುಖಿಯ ಗರ್ಭದಲಿ | ನಿದ್ರಿಸುತಿಹ ಸುಕುಮಾರ | ನೀದಾವಾನಲ ರೂಪವ ಧರಿಸಿ | ಪ್ರಕಟಗೊಳ್ಳು ಬಾರಾ || ಧೀರಾ ಪ್ರಕಟಗೊಳ್ಳು ಬಾರಾ                                                                             || ಪ […]

Read More

ಗಂಡುಗಲಿ ಎದ್ದೇಳು

ಗಂಡುಗಲಿ ಎದ್ದೇಳು ಬಂದಿಹುದು ಸಮಯ ಪುಂಡ ರಾಜರ ಬಲವ ಸದೆದು ಧರ್ಮವ ಮೆರೆವ ಗಂಡುಗೊಡಲಿಯ ಪರಶುರಾಮನವತಾರ                                      || ಪ || ಮೋಸದ ಮತಾಂತರ ದ್ರೋಹ | ವ್ಯಾಪಿಸಿದೆ | ಪಶ್ಚಿಮದ ಪಾತಕಿಯ ಭೀತಿ ಸನ್ನಾಹ ರಾಷ್ಟ್ರಾಂತರವ ತಡೆದು ಭೀತಿ ವಾದವ ತುಳಿದು ಆಕ್ರಮಣಕುತ್ತರಿಸಿ ಬಿತ್ತರಿಸು ಛಲವ          […]

Read More

ಗಂಗೆ ತುಂಗೆ ಹರಿವ ನಾಡು

ಗಂಗೆ ತುಂಗೆ ಹರಿವ ನಾಡು ನಮ್ಮ ಭಾರತ ಸ್ವರ್ಗಕ್ಕಿಂತ ಮಿಗಿಲು ನಮ್ಮ ಭವ್ಯಭಾರತ || ಪ || ಬೆಳ್ಳಿಬೆಟ್ಟ ತಾಯ ಶಿರಕೆ ಹೊಳೆವ ಮುಕುಟವು ಹಚ್ಚಹಸಿರ ಸಸ್ಯರಾಶಿ ದಿವ್ಯ ವಸ್ತ್ರವು ಮೂರು ಜಲಧಿ ಒಂದುಗೂಡಿ ಪಾದತೊಳೆವವು ಕೋಟಿ ಅಲೆಗಳಿಂದ ನಿತ್ಯ ಸ್ತುತಿಯ ಗೈವವು || 1 || ಉಷೆಯ ಉದಯರಾಗದೊಡನೆ ಬರುವ ನೇಸರ ಹೊಸತು ಹುರುಪು ತುಂಬಿ ಅಳಿಸಿ ಮನದ ಬೇಸರ ನಾಡಮೂಲೆ ಮೂಲೆಗಳಿಗೂ ಬೆಳಕ ಬೀರುತಾ ಅಂಧಕಾರ ನೀಗಿ ನಿಶೆಗೆ ಅಂತ್ಯ ಸಾರುತಾ || 2 […]

Read More

ಗೆಲುವಿಗೊಂದೆ ದಾರಿ ನಮಗೆ

ಗೆಲುವಿಗೊಂದೆ ದಾರಿ ನಮಗೆ ಸಂಘ ಸಂಘ ಸಂಘ ಸಂಘೇ ಶಕ್ತಿಃ ಕಲೌಯುಗೇ ಸಂಘೇ ಶಕ್ತಿಃ ಹಿಂದು ಜನರ ಸಂಘಟನೆಯೆ ನಮ್ಮ ಕಾರ್ಯರಂಗ || ಪ || ತುಳಿದ ಜನರ ಬಾಳು ಬದುಕು ಕಳೆದು ಹೋಯ್ತು ದೂರ ಉಳಿದ ದೇಶ ಮೂರು ಚೂರು ಆದುದೊಂದು ಘೋರ ಉತ್ತರಿಸುವುದೆಂತು ಇಂಥ ನೋವಿನಾ ಪ್ರಸಂಗ || 1 || ದೇಶದಗಲ ವ್ಯಾಪಿಸುತಿದೆ ಭೀತಿವಾದದಾಟ ಗ್ರಾಮ ನಗರ ವನಗಳಲ್ಲು ಮತಾಂತರದ ಮಾಟ ಗೋವಿಗೆಲ್ಲಿ ರಕ್ಷೆ ಪ್ರಶ್ನಿಸುತಿದೆ ಅಂತರಂಗ || 2 || ಕೇಶವ […]

Read More

ಗೆಲುದನಿಯು ಗುಡುಗುಡುಗಿ

ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ ಶತಕವಿದನಳೆದು ಮರುಶತಕಕಿದೊ ಹಿಂದುತ್ವ ವೀರರಸ ಹೊನಲುದಿಸಿದೆ                                                                                    […]

Read More