ದೇವಿ ಭಾರತಿಗೆ ಅನುದಿನ ನಮಿಸಿ

ದೇವಿ ಭಾರತಿಗೆ ಅನುದಿನ ನಮಿಸಿ
ಧರ್ಮ ಜಾಗೃತಿಯ ಜ್ಯೋತಿಯ ಉರಿಸಿ
ದೇಶದ ಉದ್ದಗಲದಿ ಸಂಚರಿಸಿ
ಮನ ಮನದಲಿ ನವಚೇತನ ಹರಿಸಿ
’ಹಿಂದು’ ಧಾವಿಸುವ ಮುನ್ನಡೆಗೆ || ಪ ||

ಯುವ ಜನತೆಗೆ ಸನ್ನಡತೆಯ ಕಲಿಸಿ
ಉನ್ನತ ಧ್ಯೇಯದರ್ಶವ ಬೆಳೆಸಿ
ಪ್ರಗತಿಯ ಕಡೆ ನಡೆಯಲು ಸಹಕರಿಸಿ
’ಹಿಂದು’ ಧಾವಿಸುವ ಮುನ್ನಡೆಗೆ || 1 ||

ಮತಭೇದಗಳನು ದೂರಕೆ ಸರಿಸಿ
ಸರ್ವ ಸಮನ್ವಯ ಭಾವವ ಮೆರೆಸಿ
ದೃಢ ಸಂಕಲ್ಪದಿ ಪ್ರಕೃತಿಯ ಉಳಿಸಿ
’ಹಿಂದು’ ಧಾವಿಸುವ ಮುನ್ನಡೆಗೆ || 2 ||

ಕಣಕಣದಲಿ ಕೆಚ್ಚನು ನೆಲೆಯಿರಿಸಿ
ಭಕ್ತಿ, ತ್ಯಾಗ ಸೆಲೆ ಹೃದಯದಿ ಸ್ರವಿಸಿ
ಸಂಸ್ಕೃತಿ ಪುನರುತ್ಥಾನಕೆ ಶ್ರಮಿಸಿ
ರಾಷ್ಟ್ರದ ಬಲ ಸಂವರ್ಧನೆಗೊಳಿಸಿ
’ಹಿಂದು’ ಧಾವಿಸುವ ಮುನ್ನಡೆಗೆ || 3 ||

Leave a Reply

Your email address will not be published. Required fields are marked *

*

code