ತಡವದೇಕೆ ತಾಯ ಕರೆಗೆ ಬಾಳೆ ಅವಳ ಕೊಡುಗೆ
ಅಳಿಸಬೇಕು ಅವಳ ನೋವು ತೊಡಿಸಿ ಹರುಷದುಡಿಗೆ || ಪ ||
ಜಾರದಿರಲಿ ಸಮಯವಿನಿತು ಕ್ಷಣಿಕ ನಮ್ಮ ಬದುಕು
ತಾಯಭಕ್ತಿ ಧ್ಯೇಯಜ್ಯೋತಿ ಜಗಕೆ ಪ್ರಖರ ಬೆಳಕು
ಹಣದ ಮೋಹ ಕೀರ್ತಿ ದಾಹ ತರದೆಂದಿಗೂ ಮೆರಗು
ಋಣವ ಕಳೆವ ಪರಿಯ ಸೇವೆ ಅದುವೆ ಬಾಳ ಬೆಳಕು || 1 ||
ಜನ್ಮದಾತೆ ಚರಣಸೇವೆ ತ್ಯಾಗಕಿಂತ ಮಿಗಿಲು
ಭೇದ ಬಿಟ್ಟು ಮೋದದಿಂದ ದುಡಿದಾಗಲೆ ಹಗಲು
ಧ್ಯೇಯ ಪಥದಿ ನೇರ ಪಯಣ ತೊರೆದು ಅರಿಗಳಂಜಿಕೆ
ಸತ್ಯ ನಿಷ್ಠೆ ಸ್ವಾಭಿಮಾನದಿಂದ ಸಫಲ ಗಳಿಕೆ || 2 ||
ಯತ್ನವೆಂದು ವ್ಯರ್ಥವಲ್ಲ ಯಶದ ಹಾದಿ ಗೋಚರ
ಸ್ಪೂರ್ತಿ ಚಿಲುಮೆ ಚಿಮ್ಮುತಿರಲು ಕಾರ್ಯಸಿದ್ಧಿ ಸಾಸಿರ
ನಿಂದೆ ಸ್ತುತಿಗೆ ಕಿವುಡು ಮನವು ಸ್ವಾರ್ಥ ಬರದು ಹತ್ತಿರ
ಭರತಮಾತೆ ನಗುವಿಗಾಗಿ ಬಾಳ್ವಪರಿ ಸುಂದರ || 3 ||