ಸಂಘ ವಿಚಾರವ ಮನದಲಿ ತುಂಬಿ ಗ್ರಾಮ ಗ್ರಾಮಕೆ ತೆರಳೋಣ || ಪ || ಎಂದಿಗೂ ಮರೆಯದ ಸಂಘ ಕಾರ್ಯವ ಜೀವನ ವ್ರತ ಸ್ವೀಕರಿಸೋಣ ಹೃದಯದಿ ತುಂಬಿದ ಅಹಂಕಾರವ ಮನಸ್ಸಿನಿಂದ ತೆಗೆಯೋಣ || 1 || ದೃಢ ಸಿದ್ಧಾಂತದ ಸಾಧಾರ ಸಂಘ ಬುನಾದಿಯ ಕಟ್ಟೋಣ ವಿಪತ್ತುಗಳನೆದುರಿಸಲು ನಾವು ನಿರ್ಭಯರಾಗಿ ಶ್ರಮಿಸೋಣ || 2 || ಹೃದಯ ಸಾಗರದಂಚನು ದಾಟಿ ಸ್ವರ್ಗಿಯ ಇತಿಹಾಸವ ರಚಿಸೋಣ ತತ್ವ ಸುಧಾರಸ ಕುಂಭವ ಕುಡಿದು ಅಮೃತ ಪುಂಗವರಾಗೋಣ || 3 ||
ಸಂಘ ಜನಿಸಿತು ಕೇಶವನ ದಿವ್ಯದೃಷ್ಟಿಯಿಂದ ನಾಡಿನೆಲ್ಲೆಡೆ ಹರಡಿತು ಭರದಿ ತಪಸಿನ ಛಲದಿಂದ ತಪಸಿನ ಫಲದಿಂದ ಅವನ ತ್ಯಾಗದ ಬಲದಿಂದ || ಪ || ಸಾವಿರ ವರುಷದ ದಾಸ್ಯಕೆ ಕಾರಣ ಐಕ್ಯತೆ ಇಲ್ಲದ ದೇಶ ರಾಷ್ಟ್ರದೆಲ್ಲೆಡೆ ಮೊಳಗಿದೆ ಇಂದು ಹಿಂದು ಎಂಬ ಘೋಷ ನಾವು ಹಿಂದು ಎಂಬ ಘೋಷ || 1 || ವೀರಪುರುಷರ ಬಾಳ ಕಥೆಗಳು ನೀಡಿವೆ ನಮಗೆ ಆಹ್ವಾನ ತಾಯ ಗೌರವವ ಎತ್ತಿ ಹಿಡಿಯಲು ಮರಣವೆ ಸನ್ಮಾನ ನಮಗೆ ಮರಣವೆ ಸನ್ಮಾನ || 2 || […]
ಸೊಂಟ ಕಟ್ಟಿ ಹೊಂಟೆವಿದೋ ಮುಂದಕೆ ತಂಟೆಯಳಿಸಿ ತಾಯ ಆನಂದಕೆ ಎಂಟುದಿಕ್ಕಿನಿಂದ ಬರುವ ಕಂಟಕಗಳ ಕಳೆದು ಎಂಟೆದೆಯ ಬಂಟರೆಲ್ಲ ಚಂದಕೆ || ಪ || ನಮ್ಮ ಮಾತೆ ನಮ್ಮ ಭರತಮಾತೆ ಸರ್ವಲೋಕವಂದಿತೆ ಜಗದ ಮನವ ಜಗದ ಜನರ ಮನವ ಸೆಳೆದ ಗೌರವಾನ್ವಿತೆ ಆದಿ ಅಂತ್ಯ ವಿರಹಿತೆ, ಸಾಧುರೂಪ ಸಂಹಿತೆ ಅವಳ ಹರಕೆ ಸ್ಫೂರ್ತಿ ನಮಗೆ ಕಾರ್ಯಕೇ || 2 || ತಡೆಯಬೇಡ ತಡೆದು ಹಿಡಿಯಬೇಡ ನಮ್ಮ ಎದೆ ಹಿಮಾಲಯ ಜಗ್ಗಲರಿಯ ತಾನು ಬಗ್ಗಲರಿಯ ನಮ್ಮ ಶಕ್ತಿ ಅಕ್ಷಯ ನಿನ್ನ […]
ಸೇವೆಯೆ ಜೀವನದ ಪರಮಧರ್ಮ ಜೀವಲೋಕದ ಹಿತದ ಆಧಾರಮರ್ಮ || ಪ || ಅದ್ವೈತ ಸಂಬಂಧ ದ್ವೈತದರಿವಿನೊಳಿಂದ ಅದ್ವಿತೀಯಾನಂದ ಸೇವೆಯಿಂದ ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 || ಸಾಮಾಜಿಕರ ನಡುವೆ ಸಮರಸವನು ಎರೆದು ಸಾಂಮನಸ್ಯದ ಚಿಗುರು ಹೂವು ಪಡೆದು ಈ ಮಹಾ ಹಿಂದು ಜೀವನ ತರುವು ನಳನಳಿಸೆ ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 1 || ನೀಗುವೆವು ಲೋಕಗಳ ಶೋಕಗಳ ಸಂಕುಲವ ನೀಡುವೆವು ಜನಮನಕೆ ಚೈತನ್ಯವ […]
ಸುರನದಿಯನು ಧರೆಗಿಳಿಸಿದ ಧೀರನ ವಾರಸುದಾರರು ನಾವು ಸೋಲನೆ ಗೆಲುವಿನ ಸಾಧನಗೊಳಿಸುವ ಸಾಹಸಗಾರರು ನಾವು ಭಾರತವೀರರು ನಾವು… ನವಭಾರತ ವೀರರು ನಾವು || ಪ || ಅಡಿಗಡಿಗೆದುರಾಗಿಹ ಅಡೆತಡೆಗಳ ಅಡಿಯಿಂದಲೆ ಕಿತ್ತೆಸೆಯುವೆವು ನಾಡಿನ ಗಡಿಗೌರವ ರಕ್ಷಣೆಗೆ ಪ್ರಾಣವನೇ ಮುಡಿಪಿರಿಸುವೆವು || 1 || ಸ್ವಂತದ ಚಿಂತನೆಗಳನು ಬದಿಗಿರಿಸಿ ರಾಷ್ಟ್ರದ ಚಿಂತನೆ ಮಾಡುವೆವು ಕಠಿಣ ಸವಾಲುಗಳನು ಸ್ವೀಕರಿಸಿ ದೇಶದ ಹಿತ ಕಾಪಾಡುವೆವು || 2 || ನಮ್ಮಯ ಜನರೇ ಸುಮ್ಮನೆ ನಿಂದಿಸಿ ಹುಸಿ ಅಪವಾದವ ಹೊರಿಸಿರಲು ಅಗ್ನಿಪರೀಕ್ಷೆಗೆ ಒಳಗಾಗಿಹೆವು ಮಿಥ್ಯೆಗಳಿಂದಲಿ […]
ಸುತರೆದೆಯಾಳದಿ ಸ್ಪಂದನವೇಳಲಿ ಏಳಲಿ ಪ್ರತಿ ಭಾರತಪ್ರೇಮಿ ಸೀಮಾ ವಲಯದಿ ರಕ್ಷಿತವಾಗಲಿ ಅಂಗುಲ ಅಂಗುಲವೀ ಭೂಮಿ || ಪ || ಸಹ್ಯಾದ್ರಿಯ ಗಿರಿ ಕಂದರ ಕಾನನ, ಹಿಮವತ್ಪರ್ವತದುನ್ನತ ಸ್ಥಾನ ಗಂಗಾಭಗಿನಿಯ ಸಿಂಧೂ ಜಲಧಿಯ, ಸಂಗಮ ಹಿಂದು ಮಹೋದಧಿಗಾನ ಹಾರೈಸಲಿ ಹರಸಲಿ ದಿಗ್ವಿಜಯಕೆ, ಜನಮನವಿಂದಾಗಲಿ ರಣಗಾಮಿ || 1 || ಬಾಹುದ್ವಯಕೇರಲಿ […]
ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ ಹಾಲ್ಗಲ್ಲ ಹಸುಳೆ ಇವ ನಮ್ಮ ಭರತ ಬಲ್ಲೆಯಾ ಕಿರಾತ ಅವನ ಛಲಬಲಭರಿತ ಒಂದೊಂದು ಜೀವವೂ ಭರತ ಸಹಜಾತ || ಪ || ಹೊಯ್ ಎನಲು ಹುಲಿ ಹೊಯ್ದ ಸಳ ನಮ್ಮ ನಾಯಕ ಅರಿಯೆಯಾ ಮಂದಮತಿ ಖಳನಾಯಕ ತಾತ್ವಿಕರ ಸಾತ್ವಿಕರ ದಳ ನಮ್ಮದಾಗಿರಲು ಸಲ್ಲದಿರು ಸ್ನೇಹದಲಿ ತುಡುಕಾಯಕ || 1 || ಹೂ ಹಸಿರು ಎಲೆ ಚಿಗುರು ಹೊದರು ಹೊಮ್ಮುವ ವನದಿ ಒಂದು ವಿಷ ಜಂತುವಿಗೆ ಹೆಸರೇನನಿಡಲಿ? ಯಾವ ಶಾಪದ ರೂಪವಿಂದು ಕುಣಿದೆದ್ದಿಹುದು ನಮ್ಮದೊಂದೊಂದುಗುರು ಪರಶುರಾಮನ […]
ಸಿಡಿಲೆರಗಿದರೂ ಬಂದೊದಗಿದರೂ ಕಡು ಭೀಕರ ಅಗ್ನಿ ಪರೀಕ್ಷೆ ಸಾಸಿರ ವಿಜಯದ ಭುಜಕೀರ್ತಿಯ ಜೊತೆ ಮನತೊಡುವುದೇ ಸೈ ಮರುದೀಕ್ಷೆ || ಪ || ನೆಲೆದೆದೆಯಾಳದ ಪ್ರಬಲ ಪ್ರವಾಹದ ಬುಗ್ಗೆಯಿದೋ ರಮ್ಯ ಅದಮ್ಯ ದೌಷ್ಟ್ಯಕೆ ದಮನಕೆ ಕುಗ್ಗದು ಚೇತನ, ಮನದೆಲ್ಲೆಯು ಕೋವಿಗಗಮ್ಯ || 1 || ಹನಿನೆತ್ತರು ಬಿದ್ದೆಡೆ ಹತ್ತಾಗುತ ಸತ್ತೆಡೆಸಾವಿರವಾಗುತಲಿ ತನುವೆತ್ತುವೆವೊ ತಲೆಯೆತ್ತುವೆವೊ ಮಣ್ಣಿನೊಳೆ ಹೊನ್ನಾಗುತಲಿ || 2 || ತಕ್ಷಕ ದಂಶಕೆ ಮಡಿದಶ್ವತ್ಥದ ಹಿಡಿಬೂದಿಯನಭಿಮಂತ್ರಿಸುತ ತಕ್ಷಣ ವೃಕ್ಷವ ಚಿಗುರಿಸುವುದೆ ಸೈ, ಅಶ್ವಿನಿಯರನಾಮಂತ್ರಿಸುತ || 3 ||
ಸಾಹಸದಿತಿಹಾಸವ ಬರೆಯೋಣ ಹೊಸಬಾಳಿನ ಹಾಳೆಯ ತೆರೆಯೋಣ || ಪ || ಭಾರತಮಾತೆಯ ಕುವರ ಕಿಶೋರರು ಬಂದು ಸೇರಿಹೆವು ಒಂದಾಗಿ ದೇಶ ಧರ್ಮಗಳ ಘನತೆಯ ಸಾರಲು ದುಡಿವೆವು ನುಡಿವೆವು ಒಂದಾಗಿ ಓ ಹಗಲುಗಳೇ, ಬಿಳಿ ಮುಗಿಲುಗಳೇ, ಸುಳಿಗಾಳಿಯ ಅಲೆಗಳೇ ಹರಸಿ ಬಂಧುತ್ವದ ಧ್ಯೇಯಾದರ್ಶಗಳೇ ಅಂತರಂಗವನು ಆವರಿಸಿ || 1 || ಧೈರ್ಯದ ಸ್ಥೈರ್ಯದ ಓ ಮೇರುಗಳೇ ಬೆಳೆಯಿರಿ ಭೀರುತೆಯನ್ನಳಿಸಿ ಸ್ನೇಹ ಸಲಿಲಗಳೇ ಜ್ಞಾನ ಸ್ರೋತಗಳೇ, ನಾಡಿ ನಾಡಿಯಲಿ ಸಂಚರಿಸಿ ನಾಳೆ ನಾಳೆಗಳು ಕಳೆದರು […]
ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ || ಪ || ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ || 1 || ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ ಸಕಲ ಜೀವಕುಲ ಸುಖವ ಕಾಣಲಿದೆ ಪ್ರಕೃತಿಗೆ ಮರು ವಿಶ್ವಾಸ || […]