ರಾಷ್ಟ್ರಸೇವಕ ಬಾರ ಹಿಂದು ವೀರನೆ ಬಾರ ನನ್ನ ಕಂದನೆ ಕೇಳ, ಎನುವಳಮ್ಮ || ಪ || ಅಂಗ ಭಂಗವದಾಗೆ ಮರಳಿ ಜೋಡಿಸಬಹುದು ವಂಗಭಂಗವದಾಗೆ ಬಾರದೇಕೆ? ಸಿಂಧು ಗಾಂಧಾರ ಬ್ರಹ್ಮಾದಿ ಮುರಿದಂಗಗಳ ಕಸಿಯ ಮಾಡಲು ಬನ್ನಿ ಎನ್ನ ಮೈಯ್ಗೆ || 1 || ಸೈನ್ಯವಾಗಿರೆ ಹಿಂದು ಮನೆಮನೆಯೆ ತಾನಿಂದು ಸ್ತನ್ಯವಾಗಿರೆ ರಾಷ್ಟ್ರಭಕ್ತಿ ನಿಮಗೆ ದೈನ್ಯ ದುಃಖ ಹತಾಶೆಯ ಕಾಲ ಹಿಂದಾಗಿ ಮಾನ್ಯತೆಯ ಪಡೆಯೆನೇ ಜಗದೆ ನಾನು? || 2 || ಆಗು ಗೆಳೆಯಗೆ ಮಿತ್ರ ಶಕ್ತಿ ಹಿಡಿದವರ ಕುತ್ತು […]
ರಾಷ್ಟ್ರದೇಕತೆ ರಾಷ್ಟ್ರದಸ್ಮಿತೆ ಪ್ರಲಯವರ್ಧಕ ರಾಷ್ಟ್ರೀಯತೆ ಕೆರಳುತೆದ್ದಿದೆ ಕ್ರುದ್ಧ ನೇತ್ರದಿ ಪ್ರಬಲತರ ತಾಯ್ನೆಲದ ಮಮತೆ || ಪ || ಹಿಮಕಿರೀಟದ ಧವಳಕಿರಣದ ವಿಭವಹರಣಕೆ ಕೈಯನಿಟ್ಟು ಮೂರ್ಖತೆಯ ಗೈಯದಿರು ವೈರಿಯೆ ಸತ್ಯದಿರವನು ಮರೆತು ಕೆಟ್ಟು ಎಚ್ಚರೆಚ್ಚರ ಸಾಲಿರುವೆಗಳ ಹಳದಿ ಸಾಮ್ರಾಜ್ಯದಳಿಕೀಟ ಎಚ್ಚರಿಕೆ ಮ್ಲೇಚ್ಛರಿಗೆ ಬರಿ ಕನವರಿಕೆಯಹುದೀ ಧವಳ ಮುಕುಟ || 1 || ಭಾರತದ ಈ ಭೂಮಿಯುದ್ದಕು ಯುದ್ಧಕಾಗಿಯೆ ಮಣ್ಣೊಳಡಗಿ ಮೈಯುರಿದು ಮೈಮುರಿವ ಯೋಧನ ಭೀಮಬಾಹುದ್ವಯವೆ ಸೆಟೆದು ಬಿಗಿದು ಕಬ್ಬಿಣವಾಗುತುಬ್ಬಿದೆ ಸ್ನಾಯುಮಂಡಲ ಪಂಕ್ತಿ ಪಂಕ್ತಿ ಹೊಸೆಹೊಸೆದು ಹುರಿಗೊಳ್ಳುತಿದೆ ಹಿರಿಹೆಗಲ ಹಿಮಗಿರಿ […]
ಮೊಗವೆತ್ತಿ ದನಿಯೆತ್ತಿ ಕೈಯೆತ್ತಿ ಹಾಡುವೆವು ಭಾರತಿಯ ಜಯದ ಉದ್ಘೋಷ ತುಂಬಲಿ ಭೂಮಿ ಆಕಾಶ || ಪ || ತನು ತುಂಬಿ ಮನ ತುಂಬಿ ಬರಲಿ ಆವೇಶ ನೆನಪಿರಲಿ ಗಮ್ಯ ಉದ್ದೇಶ ಮುಗಿಲ ಕಡೆ ಮುಖರಿಸಲಿ ವಿಜಯ ಸಂಘೋಷ ಕಾದಿಹುದು ಮಂಗಲ ವಿಶೇಷ || 1 || ಒಂದೇ ಸ್ವರ ಒಂದೇ ವರ ಒಂದೇ ಸಂದೇಶ ತಾಯ ಮಕ್ಕಳಿಗಿಲ್ಲಿ ವಾಸ ವಂದನೆಗೆ ಗೌರವವು ನಿಂದನೆಗೆ ನಾಶ ಸಂದೇಹವಿಲ್ಲ ಲವಲೇಶ || 2 || ಅವಳೆ ತಾಯವಳೆಮಗೆ ದೇವತಾ ಸದೃಶ […]
ಮರುಧರೆಯ ಮಣ್ಣಿನೊಳೆ ನಮ್ಮದಿದೆ ನವ ಸೃಷ್ಟಿ ಕೃತಕೃತ್ಯಗೊಳಿಸೆಮ್ಮ ಓ ಸೃಷ್ಟಿಕರ್ತ ; ಉರಿದುರಿವ ಕಣ್ಣಿನೊಳೆ ನಮ್ಮದಿದೆ ನವದೃಷ್ಟಿ ಹರಸು ಹರಸೆಮ್ಮ ಓ ದೃಷ್ಟಿದಾತ ! || ಪ || ಪೂರ್ವಜರ ಹೂಂಕಾರ ಚೀತ್ಕಾರ ನರಳಿಕೆಯೆ ಒಳಗೊಳಗೆ ಮೊಳೆಸಿರುವ ಕುದಿಕುದಿದು ಬೆಳೆಸಿರುವ ಕಾಲಗರ್ಭದ ವ್ಯಥೆಗೆ ಧ್ವನಿಯವರ್ಧಕವಿಟ್ಟು – ಹಂಪೆ ಹಳೆಬೀಡಿನಲಿ ಅಡಿಗಡಿಗು ಹರಡಿರುವ || 1 || ಕಲ್ಲು ಕಲ್ಲಿನ ಕಥೆಗೆ ಹೊಸ ಬಾನುಲಿಯನಿಟ್ಟು- ಇತಿಹಾಸದುದ್ದಕ್ಕೂ ಕೊಲೆ ಸುಲಿಗೆಗೊಳಗಾದ ತಲೆ ತೆತ್ತು ಬಲಿಯಾದ ದೈತ್ಯರತ್ಯಾಚಾರಕಾಹಾರವಾದ ಬಂಧು ಭಗಿನಿಯರೊಡಲ ಸಂಕಟದ […]
ಭೇದ ಭಾವ ಬಿಟ್ಟು ಬನ್ನಿ ಮೆಟ್ಟಿ ಬನ್ನಿ ದೀನತೆ ಪ್ರಾಂತ ಜಾತಿ ಪಂಥ ಪಕ್ಷಕಿಂತ ಮುಖ್ಯ ಏಕತೆ || ಪ || ಹಿಂದು ರಾಷ್ಟ್ರ ಸತ್ಯವು, ರಾಷ್ಟ್ರಶಕ್ತಿ ನಿತ್ಯವು ಮಾಡಿ ಸಫಲಗೊಳಿಸಿ ಸತ್ ಸಂಕಲ್ಪವಾ, ನಮೋ ನಮೋಸ್ತುತೇ ನಮೋ ಪ್ರಚಂಡ ರಾಷ್ಟ್ರರೂಪಿ ದೇವನೇ, ಭಲರೇ, ಓ ಹಿಂದು ಬಂಧೂ ಸಹೋದರಾ, ಪರಾಕ್ರಮೀ, ಅದಮ್ಯ ನೀ, ಹೋ ಹೋ ಜನರೆ ಬನ್ನಿ ಬನ್ನಿ ತನ್ನಿ ತನ್ನಿ ಸ್ನೇಹ ಹಸ್ತವ || 1 ||
ಭಾರತೀಯ ಕಂದರೆಮ್ಮ ಭಾರತಾಂಬೆ ಜಯ ಜಯಾss ವೀರಭೂಮಿ ಸತ್ಯಧರ್ಮ ಧೀರಮಾರ್ಗ ನಿರ್ಭಯ || ಪ || ಸರ್ವ ಸಿರಿಗಳುಂಟು ಹಿಂದು ಜನರೊಳಿಲ್ಲ ಏಕತಾ ಗುರಿಯೆ ಸಂಘ ಜನತೆ ಐಕ್ಯ ಬನ್ನಿ ಜಯತು ಭಾರತ || 1 || ಸ್ವಾರ್ಥ ಸೌಖ್ಯ ಸ್ಥಾನಮಾನ ಕೀರ್ತಿಯಾಸೆ ಮುರಿದೆವು ಪೂರ್ತಿ ದೇಶದೇಳ್ಗೆಗಾಗಿ ಸ್ಫೂರ್ತಿಗೊಂಡು ಸಲುವೆವು || 2 || ವೀರ ಶಿವ ಪ್ರತಾಪರಂತೆ ದೇಶಧರ್ಮ ರಕ್ಷಣಾ ಸೇರಿ ಬನ್ನಿ ಹಿಂದು-ಬಂಧು ತಡವು ಏಕೆ ಈ ಕ್ಷಣ ? || 3 || […]
ಭಾರತಿ ಜಯ ಭಾರತಿ || ಪ || ಸಾಗರವೇಷ್ಠಿತೆ ಹಿಮಗಿರಿ ಶೋಭಿತೆ, ಸುಂದರ ತರುವನ ಪುಷ್ಪ ಸದಾರ್ಚಿತೆ ವಿಶ್ವವಿನುತೆ ವೇದಾಂತ ವಿಭೂಷಿತೆ, ವೃಂದಾರಕ ಗಣ ಪೂಜಿತೆ ಮಾತೆ || 1 || ವೀರ ಪ್ರಸವಿನಿ ಅಸುರ ಮರ್ದಿನಿ, ವಿಜಯದಾಯಿನೀ ಹೇ ಕಲ್ಯಾಣಿ ವೀತ ರಾಗ ಮುನಿ ವೃಂದ ಪೋಷಿಣಿ, ಶಾಶ್ವತ ಧರ್ಮ ಸನಾತನ ಜನನಿ || 2 || ಮಣ್ಣು ಮರಳಿನಲು ಚಿನ್ಮಯ ಶಕ್ತಿ, ಕಣ್ಣರಳಿಸಿ ಕಾಣಾ ಅಭಿವ್ಯಕ್ತಿ ತೋರಿಸು ನಿ ನಿಷ್ಕಲ್ಮಷ ಭಕ್ತಿ, ಮುಕ್ತಿಪಥಕೆ ನಿನಗಾಕೆಯೆ […]
ಭಾರತಾಂಬೆ ನಿತ್ಯೆ ನಿನ್ನ ಪುಣ್ಯಸೇವೆಗಾಗಿ ವೀರಮಾತೆ ಸಿದ್ಧರಿಹೆವು ನಿನ್ನ ರಕ್ಷೆಗಾಗಿ || ಪ || ಅನ್ಯದಾಸ್ಯವನ್ನು ಬಿಟ್ಟು ನಿನ್ನ ಧ್ಯಾನದಲ್ಲೆ ನೆಟ್ಟು ಪುಣ್ಯಗೀತೆ ಹಾಡಿ ಕೂಡಿ ಉನ್ನತಾತ್ಮರಾಗಿ || 1 || ದಿವ್ಯರೂಪೆ ವಿಗತ ಪಾಪೆ ನಿತ್ಯ ವತ್ಸಲಾನುಕೂಲೆ ಭವ್ಯ ವಿಮಲ ತತ್ವರೂಪೆ ಚಾರು ಬುದ್ಧಿಶೀಲೆ || 2 || ಸುಸ್ವತಂತ್ರ ಧರ್ಮಮಾತೆ ದಾನವಾರಿವೃಂದ ಪ್ರೀತೆ ವಿಶ್ವಮಾತೆ ವಿಶ್ವನಾಥೆ ವಿಶ್ವಸೌಖ್ಯದಾತೇ || 3 ||
ಭಾರತ ವರಸಂತಾನ ನಾವು, ಭಾರತ ವರಸಂತಾನ || ಪ || ಕೆಚ್ಚೆದೆ ಕಲಿಗಳ ಕೂರಸಿ ಕಡಿತಕೆ ಸಾಸಿರ ಅರಿಶಿರ ಬಿದ್ದವು ನೆಲಕೆ ಜಿತ ಭಗವಾಧ್ವಜ ಏರಿತು ನಭಕೆ, ದುಷ್ಟರ ರಿಪು ಬಲವಾನ ನಾವು || 1 || ರಕ್ಷಿತವಾದವು ದೇಶಗಳೆಲ್ಲ ಸ್ಥಿರಚರ ಹಿರಿಕಿರಿ ಜೀವಿಗಳೆಲ್ಲ ಭಯಕಂಪಿತ ಶತ ಪಾಪಿಗಳೆಲ್ಲ, ಸಭ್ಯ ಪ್ರಭಾವಿ ಮಹಾನ ನಾವು || 2 || ವೇದದ ಗಾನವು ಹರಡಿತು ಭರದಿ, ಮೋಹ ಭ್ರಮೆಗಳು ಅಳಿದವು ಜಗದಿ ಮನುಜತ್ವದ ಸಸಿ ಮೊಳೆಯಿತು ಮನದಿ, ವಿಶ್ವಕೆ […]
ಭಾರತಭೂಮಿಯ ವೀರಸುಪುತ್ರರೆ ಚಾಮುಂಡಾಂಬೆಯ ಪೂಜಕರೆ ಶಕ್ತಿ ಪರಾಕ್ರಮ ಆವಾಹನೆಗೆ ಕಂಕಣಧರಿಸಿ ಸಾಧಕರೆ ಹಿಂದುತ್ವದ ಆರಾಧಕರೆ ಜೈಭರತಾಂಬೆ – ಜೈದುರ್ಗಾಂಬೆ || ಪ || ಚಂದಮುಂಡರಾ ದಂಡನು ದಂಡಿಸಿ ರುಂಡವ ಖಂಡಿಸಿ ಚೆಂಡಾಡಿ ದುಷ್ಟರ ದಮನಿಸಿ ಕಷ್ಟಕೆ ಸಿಲುಕಿಹ ಶಿಷ್ಟಶಕ್ತಿಯನು ಕಾಪಾಡಿ || 1 || ಕಂಟಕವಳಿಸಿ ಸಂಕಟ ನೀಗಲು ಟೊಂಕವ ಕಟ್ಟುವ ಸಮಯವಿದು ಜಡತೆಯ ಜಯಿಸಿ ಸ್ವಾರ್ಥವದಹಿಸಿ ಮುನ್ನಡೆಯುವ ಸುಮುಹೂರ್ತವಿದು || 2 || ಬಹುರಾಷ್ಟ್ರೀಯರ ಸಂಚಿನ ಸುಳಿಯಲಿ ನಾಡೆಮದು ಮುಳುಗದೆ ಇರಲಿ ಸ್ವತ್ವ ಸ್ವದೇಶೀ ಸ್ವಾವಲಂಬನೆಯ […]