ಒಂದುಗೂಡಿ ಬನ್ನಿ ನಾಡಸೇವೆಗೆ ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ಪ || ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ ಕತ್ತಲನ್ನು ಕರಗಿಸಿ, ಸುತ್ತ ಬೆಳಕ ಮೂಡಿಸಿ ಮನದಿ ಮನೆಯ ಮಾಡಿದಂಥ ಮೌಢ್ಯವನ್ನು ತೊಲಗಿಸಿ || 1 || ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ || […]
ಏಳಿ ಎಚ್ಚರಗೊಳ್ಳಿ, ಭಾರತದ ನವಯುವತಿಯರೆ, ಜಡತೆಯ ತೊರೆದು ಹೊಣೆಯನು ಅರಿತು ಮುನ್ನಡೆಯೊಣ ಗೆಳತಿಯರೆ ಜೈ ಭಾರತಿ, ಜೈ ಭಾರತಿ, ಜೈ ಭಾರತಿ, ಯುವ ಭಾರತಿ || ಪ || ಹೊಸ ಹರೆಯದ ಛಲ ಉತ್ಸಾಹ ಕೃತಿ ರೂಪದಿ ಪರಿವರ್ತಿಸಲಿ ಭಾರತ ಮಾತೆಯ ಕೀರ್ತಿಧ್ವಜ ಬಾನೆತ್ತರದಿ ನರ್ತಿಸಲಿ || 1 || ಕೀಳರಿಮೆಯ ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ನಾರೀಶಕ್ತಿಯ ಸಂಘಟಿಸಿ ನಾಡಿನ ಸೇವೆಯ ಗೈಯೋಣ || 2 || ತಾಯ್ನೆಲದೇಕತೆ ಏಳಿಗೆಗೆ ವೀರಪ್ರತಿಜ್ಞೆಯ ಸ್ವೀಕರಿಸಿ ಪರಮ ವೈಭವದ […]
ಎತ್ತರಕೇರಿಸಿ ಭಗವಾದ್ವಜವ ಧರ್ಮದ ಮಹಿಮೆಯ ಮೆರೆಯಿಸುವಾ | ಉತ್ತರವೀಯುತ ಯುಗದ ಸವಾಲಿಗೆ ನವ ಇತಿಹಾಸವ ನಿರ್ಮಿಸುವಾ || ಪ || ಅಂಕೆಯ ಮೀರಿದ ದುರಹಂಕಾರದಿ ಮೆರೆದಿರಲಂದು ರಾವಣನು ಬೆಂಕಿಯ ಬಲೆಯೊಳು ಲಂಕಾ ನಗರಿಯ ಉರಿಸಿದ ಅಂಜನಿ ನಂದನನು ಪಟ್ಟವ ಕಟ್ಟಿ ವಿಭೀಷಣಗಂದು ಧರ್ಮವ ಮೆರೆಸಿದ ರಾಘವನು ತ್ಯಜಿಸುತ ಸುರವೈಭೋಗವನು || 1 || ದುಷ್ಟಕೌರವರ ಅಕ್ಷೋಹಿಣಿಬಲ ಪಡೆದಿರೆ ಸಜ್ಜನರಾಹುತಿಯ ಸೃಷ್ಟಿಯ ಭಾರವ ನೀಗಿದ ಕೃಷ್ಣನು ತೊಡೆಯುತ ದುರ್ಜನ ಸಂತತಿಯ ವಿಜಯದ ಶಂಖೋದ್ಘೋಷವು ಮೊಳಗಿತು ಸಾರುತ ಧರ್ಮದ ಉನ್ನತಿಯ […]
ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ ನಮ್ಮ ಹೊಣೆ | ಜಡತೆಯ ತೊರೆದು ಭ್ರಮೆಯನು ಹರಿದು ಬದಲಿಸಬನ್ನಿ ವಿಶ್ವವನೇ ಕದಲಿಸ ಬನ್ನಿ ಪೃಥ್ವಿಯನೇ || ಪ || ಜಗವನೆ ಜಯಿಸಿದ ಸಂಸ್ಕೃತಿ ಎಮ್ಮದು ಎಂಬುದನೆಂದಿಗು ಮರೆಯದಿರಿ ಪಶ್ಚಿಮದಿಕ್ಕಿನ ಭೋಗಜಗತ್ತಿನ ಥಳುಕಿಗೆ ನೀವ್ ಬಲಿಯಾಗದಿರಿ ಅಂಧಾನುಕರಣೆಯ ಮಾಡದಿರಿ ನಾsಡರಕ್ಷಣೆ ನಮ್ಮ ಹೊಣೆ, ಬದಲಿಸಬನ್ನಿ ವಿಶ್ವವನೇ || 1 || ಐಕ್ಯವ ಮರೆತು ಸ್ವಾರ್ಥದಿ ಮೆರೆದು ನಾಡಿದು ದಾಸ್ಯಕೆ ಒಳಗಾಯ್ತು ಅರಿಗಳ ಕುಹಕದ ಸಂಚಿಗೆ ಸಿಲುಕಿ ತಾಯ್ನೆಲವೆಮ್ಮದು ಹೋಳಾಯ್ತು ಭಾರತಮಾತೆಗೆ ಗೋಳಾಯ್ತು ನಾಡರಕ್ಷಣೆ […]
ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ ನಾಡ ಕೀರ್ತಿಯ ಉಳಿಸಿ ಬೆಳೆಸಲು ಐಕ್ಯವೊಂದೇ ಸಾಧನಾ || ಪ || ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು || 1 || ಗುರಿಯ ಅರಿಯದೆ ತಿರುಗುತಿದ್ದೆನು ಮರೆತು ತನುವಿನ ಪರಿವೆಯ ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ ದಾರಿ ದೀಪದ […]
ಉಚ್ಚಕಂಠದೊಳು ಉಚ್ಚರಿಸಿ ಸಜ್ಜನಶಕ್ತಿಯನೆಚ್ಚರಿಸಿ ದಿವ್ಯಮಂತ್ರವ ಘೋಷಿಸುವಾss ‘ಕೃಣ್ವಂತೋ ವಿಶ್ವಮಾರ್ಯಂ’ || ಪ || ಜಗದ ಆದಿ ಪ್ರಾಚೀನ ಸಮಯದಿಂ ಮಂತ್ರವೆಮಗೆ ಸಂಗಾತಿ ದೂರದೂರಕೂ ಕಂಪು ತುಂಬಿರುವ ಆರ್ಯಧರ್ಮದಾ ಖ್ಯಾತಿ ಕಾಲಚಕ್ರವದು ತಿರುಗಿರೆ ಭರದಿ ಮರೆಯಾಯಿತು ಆದರ್ಶ ನವ ಸೂರ್ಯೋದಯ ತಂದಿಹುದಿಂದು ಪ್ರಭಾತದುಜ್ವಲ ಸ್ಪರ್ಶ ಯುಗದ ಸವಾಲನು ಉತ್ತರಿಸಿ ಸಜ್ಜನಶಕ್ತಿಯನೆಚ್ಚರಿಸಿ || 1 || ವೇದಕಾವ್ಯ ಉಪನಿಷದ್‍ವಾಕ್ಯಗಳು ತೋರಿವೆ ಬಾಳಿನ ಗುರಿಯಾ ರಾಮಾಯಣ ಪಾವನ ಗೀತಾಮೃತ ಹರಿಸಿವೆ ಜ್ಞಾನದ ಝರಿಯಾ ಜಗದುದ್ದಗಲದಿ ಕಂಗೊಳಿಸುತಲಿಹ ಸಂಸ್ಕೃತಿಯಾ ಅವಶೇಷಗಳು ನವನಿರ್ಮಾಣಕೆ ಪ್ರೇರಣೆ […]
ಈ ಆತ್ಮ ಅವಿನಾಶಿ ಪರಮಾತ್ಮನಂಶ ತವಕಾಯ ಕೈಲಾಸ ನೀನೇ ಮಹೇಶ ಈ ತತ್ವ ಚಿರಸತ್ಯ ಓ ಸಾಧಕಾ ಮನುಜತ್ವದಮರತ್ವದಾರಾಧಕಾ || ಪ || ಅಂಗಾಂಗಗಳ ದಾಸ ನೀನಾಗಬೇಡ ಬಂಗಾರ ಶೃಂಗಾರಗಳ ಮೋಹ ಬೇಡ ಪಂಚೇಂದ್ರಿಯದ ಸಂಚಿಗೊಳಗಾಗಬೇಡ ವಿಷಯಾದಿ ವಿಷವ್ಯಾಧಿಗೀಡಾಗಬೇಡ || 1 || ಕಡಿವಾಣ ಹಾಕಯ್ಯ ನಿನ್ನಾಸೆಗಳಿಗೆ ಬಿಡುಬಾಣ ನಿನ್ನಾರು ಅರಿವರ್ಗಗಳಿಗೆ ಹಿರಿದಾದ ಆದರ್ಶ ಕಣ್ಮುಂದೆ ಇರಲಿ ಸರಿದಾರಿಯಲಿ ಸಾಗು ಬಂದದ್ದು ಬರಲಿ || 2 || ಆರೋಗ್ಯವೇ ಭಾಗ್ಯ ಬೇರೆಲ್ಲ ಮಿಥ್ಯ ಆನಂದದಧಿಕಾರಿ ನೀನಾಗು ನಿತ್ಯ […]
ಅರ್ಪಿಸುತಿಹೆವೀ ಸೌಧವನಿಂದು ಸಾಧಕ ನಿನ್ನಯ ಪಾವನ ಸ್ಮೃತಿಗೆ ತನುಮನಧನ ಜೀವನವ ಸಮರ್ಪಿಸಿ ಅಭಿನವ ಭಾರತ ಕಟ್ಟುವ ಕೃತಿಗೆ ಸೇವೆಯ ಸುಮಧುರ ಸಂಸ್ಕೃತಿಗೆ || ಪ || ದೃಢಸಂಕಲ್ಪದ ಇಟ್ಟಿಗೆಯಿಂದ ಕಟ್ಟಿದ ಸುದೃಢ ಭವನವಿದು ಸಾಸಿರ ಹೃದಯದ ಸಾಗರ ಮಥನದಿ ಹೊಮ್ಮಿದ ಅಮೃತಕಲಶವಿದು ಸೇವೆಯ ಸುಧೆಯನು ಉಣಿಸುವೆವಿಂದು ಬಾಯಾರಿದ ಹತಭಾಗ್ಯ ಜನತೆಗೆ ತನು ಮನ ಧನ … || 1 || ನಿನ್ನಯ ಘನ ಆದರ್ಶದ ಬದುಕಿನ ಸಾಹಸಗಾಥೆಯ ಪುಟಪುಟವೂ ಜಡತೆಯ ನೀಗಿಸಿ ಸ್ಫೂರ್ತಿಯ ನೀಡಿದೆ ಧ್ಯೇಯಮಾರ್ಗದಲಿ ಕ್ಷಣಕ್ಷಣವೂ […]
ಅರುಣನು ನಿನ್ನಲಿ ಪಡಿಮೂಡಿಹನೋ ನೀನೇ ಅರುಣನ ಆವರಿಸಿಹೆಯೋ ತರುಣಜನಾಂಗಕೆ ಸ್ಫೂರ್ತಿಯ ತುಂಬಲು ನೀ ಭಾರತ ಭುವಿಗವತರಿಸಿದೆಯೋ ಓ ಕೇಸರಿ ಜಗವಂದ್ಯನೆ … ಗುರು ಕೇಸರಿ ಶತವಂದನೆ || ಪ || ಬಾನ್‍ಧರೆ ಬೆಸೆಯುವ ಬಾಂಧವನಾಗಿ ಕಂಗೊಳಿಸಿಹೆ ಬಾನಂಗಳದಿ ಹಿಂದುತ್ವದ ಸಂಚಾಲಕನಾಗಿ ಮೆರೆಯುತಿಹೆ ಹಿಂದೂ ನೆಲದಿ ನಿನ್ನ ವಿಹಂಗಮ ರೂಪವ ಬಿಂಬಿಸಿ ಪಾವನವಾಗಿವೆ ಸಾಗರ ಜಲಧಿ || 1 || ಗುರಿಯನು ಅರಿಯದೆ ತಿರುಗುವ ಜನಕೆ ಬಾಳಿನ ರೀತಿಯ ತೋರಿರುವೆ ದೈನ್ಯ ನಿರಾಶೆಯ ಪೊರೆಯನು ಹರಿದು ನಾಡಿನ ಭೀತಿಯ […]
ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]