ಹೊಸ ದ್ವೀಪದಿ ಹೊಸ ದೀಪವ ಸೃಜಿಸುವಾ

ಹೊಸ ದ್ವೀಪದಿ ಹೊಸ ದೀಪವ ಸೃಜಿಸುವ ಜೀವನ ಜಲಧಿಯ ನಾವಿಕನೇ || ಪ || ಹೊಸ ಹೊಸ ಗ್ರಹದೊಳು ಗೃಹಗಳ ರಚಿಸುವ ಮನ ಗಗನದ ವೈಮಾನಿಕನೇ || ಅ.ಪ || ಕಾದಿವೆ ಕಡಲಾಳದಿ ಜಲಚರಗಳು ಅಲೆಗಳು ಶಿಲೆಗಳು ಜೋಪಾನ ತಾರಾಲೋಕದಿ ಮಹಲುಗಳೆನಿತೋ ಮರೆಯಾಗಿಹುದಲ ಸೋಪಾನ || 1 || ನಿಶೆ ನೀರದ ಬಿರುಗಾಳಿಯು ಕವಿಯಲು ಸಾಹಸವೊಂದೇ ಪ್ರಿಯ ಬಂಧು ಸಾಗರದೇರಿಳಿತಕೆ ತೆರೆ ಹೊಡೆತಕೆ ಯಾತ್ರೆಯ ತೊರೆಯದಿರೆಂದೆಂದೂ || 2 || ಅಗಸದಂಚಿನ ಮುಗಿಲಿನ ಮಿಂಚಿನ ಸಂಚಾರವೆ ಮಿದುಳೊಳಗಿರಲು […]

Read More

ಹೊಣೀ ಹೊತ್ನಡೀ ಜರಾ ನೀ ಮುಂದ ಮುಂದ

ಹೊಣೀ ಹೊತ್ನಡೀ ಜರಾ ನೀ ಮುಂದಾs ಮುಂದಾs ತುಸ ಮುಂದಾ ಮುಂದಾs ಮಾಡೀ ನಡೀ ನೀನು ಈಗ ಛಂದಾ || ಪ || ರಾಷ್ಟ್ರದ ಭವಿತವ್ಯ, ತಿಳ್ಕೋ ನಿ ಹ್ಯಾಂಗ ? ನುಡಿದಂತೆ ನಡಿಯಾಲು ಕಲಿ ನೀ ಈಗ ಮಾಡೋಣ್ಣಡೀ, ರತ್ ಆಗೋಣ್ಣಡೀ ಹಾಡಿ ಕೂಡಿ ಪಾಡಿ ಕಾಪಾಡೋಣ್ಣಡೀ || 1 || ಓ ದಾರಿಗನೇ ನಿನಗ್ಯಾತರ್ ಚಿಂತೀ ಕಲ್ಲ ಗುಡ್ಡಧಾಂsಗ ನೀ ಖಡೀ ನಿಂತೀ ಬೀಸ್ತದ್ ಗಾಳಿ, ಮ್ಯಾಲೆ ಹೊಡಿತದ್ ಮಳೀ ಆದ್ರೂssಭಿ ನಿಲ್ಲಪ್ಪ ಖಡೀ […]

Read More

ಹೊಂಬಣ್ಣದ ಬೆಳಕಿನಲ್ಲಿ

ಹೊಂಬಣ್ಣದ ಬೆಳಕಿನಲ್ಲಿ ಎಳೆ ಬಿಸಿಲಿನ ಕಿರಣದಲ್ಲಿ ಓಂಕಾರದ ರೂಪದಲ್ಲಿ ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || ಪ || ಹಿಮಗಿರಿಯ ಮಾಲೆಯಾಗಿ ಸಾಗರವೇ ಸೆರಗಾಗಿ ಪೈರು ಪಚ್ಚೆ ಹಸುರಾಗಿ ನಿಂತಿರುವೆ ಭವ್ಯವಾಗಿ ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 1 || ಕವಿ ಹಾಡಿನ ರಾಗದಲ್ಲಿ ಮರಿದುಂಬಿಯ ಗುಂಗಿನಲ್ಲಿ ಕೋಗಿಲೆಯ ಕಂಠದಲ್ಲಿ ಕಂದಮ್ಮನ ಅಳುವಿನಲ್ಲಿ ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 2 || ಕೇಸರಿಯ ವರ್ಣದಿಂದ ಕಂಗೊಳಿಪ […]

Read More

ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ

ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ ಜಯ ಮಾಲೆಯ ನಾ ತರುವೆ ನಿನ್ನಾ ಮುಡಿಗೆ ನಿನ್ನಾ ಹಾಡುವವರಿಗೆ ನಾ ನಮಿಸುತಿಹೆನು ಯಶಗೊಳಲಿ ನಾ ಎಂದು ಹರಸು ನೀನು || ಪ || ಈ ನಾಡ ಗಡಿಯಲ್ಲಿ ಆ ದುಷ್ಟ ಸಂಚು ಅವಗೆ ನಾ ಮಾಡುವೆನು ಸರಿಯಾದ ಹೊಂಚು ವೀರ ರಕ್ತವ ಪಡೆದ ಮಾತೆಯುsss ನೀನು ನಿನ್ನೆದೆಯ ಹಾಲಿನಲಿ ಬೆಳೆದೆss ನಾನು || 1 || ಹಿಂದೊಮ್ಮೆ ಬಂದಿತ್ತು ಸ್ವಾತಂತ್ರ್ಯ ಕರೆಯು ಹಿರಿಮೆಯಲಿ ಬೆಳೆದಿತ್ತು ಈ ನಾಡ […]

Read More

ಹೆಮ್ಮೆಯ ನಮ್ಮ ಇದು ದೇಶವು

ಹೆಮ್ಮೆಯ ನಮ್ಮ ಇದು ದೇಶವು ಹಿಂದು ದೇಶವು ಒಂದಾಗಿ ಕೂಡಿದಲ್ಲಿ ಬೆಳೆವೆವು ನಾವು ಬೆಳೆವೆವು || ಪ || ಜಾತಿ ಮತ ಪಂಥ ಭೇದ ಚಿತ್ರವು ಜೀವರಸ ಒಂದೇ ವಿಚಿತ್ರವು ಅರಿವಲ್ಲಿ ಅರಿತಲ್ಲಿ ಆನಂದವು ಎಮಗೆ ಆನಂದವು || 1 || ಕೇಶವನ ಸಂಘಟನೆ ಮಂತ್ರವು ಮಾಧವನ ನಂಟುತನ ತಂತ್ರವು ತರುವಲ್ಲಿ ತಂದಲ್ಲಿ ಆನಂದವು ಎಮಗೆ ಆನಂದವು || 2 || ರಾಷ್ಟ್ರೀಯ ಐಕ್ಯಜರ ಮಿತ್ರವು ರಾಷ್ಟ್ರವಿರೋಧಿಗಳ ಶತ್ರುವು ತಿಳಿವಲ್ಲಿ ತಿಳಿದಲ್ಲಿ ಆನಂದವು ಎಮಗೆ ಆನಂದವು || […]

Read More

ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ

ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ ಅಜಯ ಗೀತೆ ಅಭಯ ಗೀತೆ ವಿಜಯ ಗೀತೆ ಹಾಡುವಾ || ಪ || ವಿಂಧ್ಯ ಸಹ್ಯ ನೀಲಗಿರಿಯು ಹಿಮಗಿರಿಗೇ ಬೆಂಬಲ, ಬಂಜೆಯಲ್ಲ ಭಾರತಾಂಬೆ ಶೂರಸುತರದೀ ನೆಲ ಕೆಡುಕನಳಿಸೆ, ಒಳಿತು ಗಳಿಸೆ ಸಿದ್ಧವಿಹುದು ತೋಳ್ಬಲ || 1 || ನಾವು ಅಮರ ಪುತ್ರರು, ನರ ನಿಮಿತ್ತ ಮಾತ್ರರು ಗೋತ್ರಭಿದನ ಗೋತ್ರರು, ಮೃತ್ಯುಂಜಯ ಮಿತ್ರರು ಕ್ಷಯವಿಲ್ಲದ ಕ್ಷಾತ್ರರು, ಅಲ್ಲ ಗಲಿತಗಾತ್ರರು || 2 […]

Read More

ಹೃದಯ ಸಿಂಹಾಸನದ ಮೇಲೇರು ಬಾ ದೇವಿ

ಹೃದಯ ಸಿಂಹಾಸನದ ಮೇಲೇರು ಬಾ ದೇವಿ – ಓ ಭಾರತದ ಸ್ವಾತಂತ್ರ್ಯದಧಿ ದೇವಿ ! ದಾಸ್ಯ ಶೃಂಖಲೆಯೆಲ್ಲ ನಿನ್ನಂಘ್ರಿ ಸ್ಪರ್ಶಕ್ಕೆ ಸಿಡಿದೊಡೆದು ಬೀಳುವುದು ಸೀಳು ಹೋಳಾಗಿ || ಪ || ಅಡಿಯಿಡಲು ಎಡೆದೊರೆಯದೆಂದು ಬೆದರುವೆಯೇಕೆ ಎಡೆಗೊಡರು ದ್ರೋಹಿಗಳು ಎಂಬ ಭಯವೇನು ? ಅಡಿಗೊಂದು ತಲೆ ಬುರುಡೆ ಬಲಿನೀಡಿ ನಡೆಸುವೆವು ಭಯವೇಕೆ ಬಾರಮ್ಮ ಬೆದರೆದೆಯೆ ನೀನು || 1 || ಪಟ್ಟಿಹೆವು ಕಡು ಕಷ್ಟ ಪಟ್ಟ ಕಟ್ಟಲು ನಿನಗೆ ಬೇಗನೀ ಬಲಿಪೀಠದಾ ಮೆಟ್ಟಿಲೇರಿ ಬಿಡು ದಿಟ್ಟತನದಿಂದಡಿಯ ಮುಂದಿಟ್ಟು ದುಷ್ಟರನು […]

Read More

ಹಿಂದು ರಾಷ್ಟ್ರಕೆ ಬಂದೆರಗುತಲಿವೆ

ಹಿಂದುರಾಷ್ಟ್ರಕೆ ಬಂದೆರಗುತಲಿವೆ ತೊಂದರೆಗಳ ಮಹಾಪೂರಾ ಅಂತಿಹ ಹಿಂದು ನುಡಿಯುವನಿಂದು ಸಂಘಟನೆಯೇ ಪರಿಹಾರ || ಪ || ಅತಿಜಾತೀಯತೆ ಆರ್ಥಿಕ ಅಸಮತೆ ಸಾಮಾಜಿಕ ವಿಷಮತೆಯ ವ್ಯಥೆ ಪ್ರಾಂತವನೊಡೆಯುವ ಪಂಥವನೆಸೆಯುವ ಭಾಷಾ ದ್ವೇಷದ ನಿತ್ಯ ಕಥೆ ಸ್ವಾರ್ಥವ ಮೆರೆಸುವ ರಾಷ್ಟ್ರವ ಮರೆಸುವ ಬದುಕಿನ ಕಾಳಗ ಘನಘೋರ || 1 || ಅಸಾಮಿನಲಿ ಬುಸುಗುಡತಲಿದೆ ಅರಾಜಕತೆಯ ವ್ಯವಹಾರ ಕಾಶ್ಮೀರದ ಆ ಕಣಿವೆಗಳೆಡೆಯಲಿ ದುಷ್ಟ ವೈರಿಯ ಫೂತ್ಕಾರ ನಾಡಿನ ಉದ್ದಗಲದಿ ಪಿಡುಗಾಗಿದೆ ನೀತಿರಹಿತ ಭ್ರಷ್ಟಾಚಾರ || 2 || ಐಕ್ಯತೆಯುಳಿಸಲು ಕೇಶವ ಕಲಿಸಿದ […]

Read More

ಹಿಂದೂ ರಾಷ್ಟ್ರದ ಪರಮವೈಭವದ

ಹಿಂದೂರಾಷ್ಟ್ರದ ಪರಮ ವೈಭವದ ಸಾಧನಮಾರ್ಗದಲೀss ನವಚೈತನ್ಯದ ನವತೇಜಸ್ಸಿನ ಶಕ್ತಿಯು ಇಹುದಿಲ್ಲೀss || ಪ || ನವೋತ್ಸಾಹ ನವಿರೇಳುತಿದೆ ಹಿಂದು ಭೂಮಿಯಾ ಕಣಕಣದಲ್ಲಿ ಸಹಸ್ರವರ್ಷದ ದೌಭಾಗ್ಯದ ಕಲೆ ಅಳಿಯುವುದು ಜನಮನದಲ್ಲಿ ಹಿಂದು ಸಮಾಜವು ವಿರಾಟಶಕ್ತಿಯ ಶೀಘ್ರದಿ ಮೆರೆವುದು ಜಗದಲ್ಲಿ ಚೇತನರೂಪಿ ಭಗವಾಧ್ವಜವು ಹಾರುವುದು ಪ್ರತಿ ಊರಲ್ಲಿ || 1 || ಸಾಧು ಸಂತರು ಹೊರಟಿಹರಿಂದು ಹಿಂದು ಚೇತನವ ಬಡಿದೆಬ್ಬಿಸಲು ತರುಣ ಕೋಟಿಯು ಕಂಕಣಬದ್ಧರು ಪರಮವೈಭವದ ರಾಷ್ಟ್ರಕಟ್ಟಲು ಜನಸಾಗರವು ಉಕ್ಕಿ ಹರಿವುದು ಸಮಾಜದೇಕತೆ ನಭಕೆ ಸಾರಲು ಬಡವ ಬಲ್ಲಿದ ಪಂಡಿತ […]

Read More

ಹಿಂದೂ ನಾವು ಭೀತಿಯದಾರದು

ಹಿಂದೂ ನಾವು ಭೀತಿಯದಾರದು ಜಗದೀ ನಮಗಿಂದು ಭಗವಾಧ್ವಜವೇ ಪ್ರಾಣ ನಮ್ಮದು ಜೀವನ ಪುಷ್ಪದೊಳರ್ಚಿಪೆವಿಂದು || ಪ || ಹುಕ್ಕ ಬುಕ್ಕರು ವೀರ ಶಿವಾಜಿ ಪ್ರತಾಪ ಪುಲಿಕೇಶಿ, ಹೋ ಪ್ರತಾಪ ಪುಲಿಕೇಶೀ ಪ್ರಾಣಗಳರ್ಪಿಸಿ ಹಿಂದೂ ಧರ್ಮದ ಕೀರ್ತಿಯ ಜಗದೊಳು ಬೀರಿದರಂದು || 1 || ತಳೆದೆವು ಜನ್ಮವ ಭಾಗ್ಯವಿದೆಮ್ಮಯ ಹಿಂದೂಸ್ಥಾನದಲಿ, ಹೋ…. ಹಿಂದೂ ಹಿಂದೂ ಘೋಷವ ಗೈಯುತ ಜಗವನು ಪಾವನ ಮಾಡುವೆವಿಂದು || 2 || ಹಿಂದೂ ಬಂಧುಗಳೆಲ್ಲರು ಕಲೆಯುತ ಶಕ್ತಿಯ ಗಳಿಸುತಲಿ, ಹೋ….. ಹಿಂದುತ್ವದ ಶ್ರೀ ವಿಜಯ […]

Read More