ಹಿಂದೂ ನಾವು ನೂತನ ಯುಗವನು ನಿರ್ಮಿಸಿ ನಡೆಸುವ ಸೂತ್ರಕರು ಹಿಂದೂ ವೀರರು ನಮ್ಮನು ತಡೆಯುವ ಬಂಧನವೆಲ್ಲಿದೆ, ಎದುರಾರು ? || ಪ || ಬಹು ಬಲಶಾಲಿಯು ಅಂತಃಕರಣವು ನಮ್ಮಯ ಬಲ ನಮ್ಮೊಳಗಿಹುದು ಬಹುವಿಧ ಬಾಧೆಯ ದುಃಖಕೆ ಬೆದರೆವು ಎದೆಗಾರಿಕೆ ನಮ್ಮೊಳಗಿಹುದು ಆಸುರವೃತ್ತಿಯ ರಾಗದ್ವೇಷದ ಮಾಯಾ ಮೋಹಕೆ ಹಗೆ ನಾವು ಸಾಸಿರ ಆಸೆಯ ಮುರಿಯುತ ಸುಖಸುಮ ಶಯ್ಯೆಯನೊದೆಯುತ ನಡೆಯುವೆವು || 1 || ಚಿಂತೆಯ ಕಂತೆಯ ಬೇಗೆಯು ಬಾರದು ನಿರ್ಮಲ ಕರ್ಮಠ ಮನದಲ್ಲಿ ಸಂತತ ಶಾಂತದಿ ನಡೆದಿರೆ ಒಂದರೆ […]
ಹಿಂದುಸ್ಥಾನದಿ ಹಿಂದೂ ಎನ್ನಲು ಭಯವೇತಕೆ ನಮಗೆ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆಗಳಿಗೆ || ಪ || ಬರಿಕಚ್ಚಾಟದಿ ಕರೆಸುವುದುಂಟೇ ಈ ಘಜನೀ ಘೋರೀ ಪಾವನನೆಲದಿ ಬಾಳುವುದುಂಟೇ ಅಭಿಮಾನದ ಮಾರಿ? ನೆನೆಯುವ ಹಿಂದಿನ ವೈಭವ ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ || 1 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ ಜೀವನ ತಂದಿರೆ ಹೊಸ ಉಸಿರು ಮೊಳಗಲಿ ಓಂಕಾರದ ವರನಾದವು ಗಗನವನೂ ಮೀರಿ ಭಾವೈಕ್ಯದ […]
ಹಿಂದುಸ್ಥಾನದಿ ಹಿಂದುಗಳೆಲ್ಲರೂ ಒಂದೇ ನಾವು ಎನ್ನಿರೊ ಹಿಂದು ಧರ್ಮದ ಪುಣ್ಯ ಪತಾಕೆಯ ವಿಶ್ವದಿ ಹಾರಿಸ ಬನ್ನಿ ವಂದೇ ಮಾತರಂ ವಂದೇ ಮಾತರಂ || ಪ || ಹಿಂದುಸ್ಥಾನದ ಹಿಂದು ಸಂಶಯವಿನ್ನೇತಕೆ ಬಂಧು ನಮ್ಮ ಪರಂಪರೆ ಹಿಂದು, ನಮ್ಮ ರಕ್ತದ ಕಣಕಣ ಹಿಂದು ಇತಿಹಾಸವ ಸ್ಮರಿಸೋಣ ವಂದೇ ಮಾತರಂ ನಿಜಮಾರ್ಗವ ಹಿಡಿಯೋಣ ವಂದೇ ಮಾತರಂ ಇತಿಹಾಸ ಪರಂಪರೆ ಸಂಸ್ಕೃತಿ ಸ್ಮರಿಸಿ ಭಾರತ ಕಟ್ಟೋಣಾ || 1 || ರಾಮಕೃಷ್ಣರಾ ನೀತಿ ಸಿದ್ಧಾಂತದ ಭಾರತ ನೀತಿ ಶ್ರೀ ಭಗವದ್ಗೀತೆಯ ಸ್ಫೂರ್ತಿ […]
ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ || ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 || ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು ಇಂಥ ಹೀನ ಜನರ ಹೃದಯ […]
ಹಿಂದು ಓ ಹಿಂದು ಹಿಂದು ಓ ಹಿಂದು ಹಿಂದುಸ್ಥಾನದಿ ವಾಸಿಪರೆಲ್ಲ ಬನ್ನಿರಿ ಡಂಗುರ ಹೊಡೆಯುವ ಇಂದು ಹಿಂದುಗಳೆಲ್ಲ ಎಂದಿಗೂ ಒಂದೆಂದು || ಪ || ಏಳು ಬಣ್ಣಗಳು ಒಂದಾಗುವಂತೆ ಸಪ್ತಸ್ವರಗಳಾ ಸಂಗೀತದಂತೆ ದೇವನೊಬ್ಬ ಹಲನಾಮಗಳಂತೆ ವಿವಿಧತೆಯಲ್ಲಿ ಏಕತೆಯಂತೆ || 1 || ಜಾತಿ ಬಂದಿದೆ ಹುಟ್ಟಿನ ಜೊತೆಗೆ ಎಂದಿಗೂ ಬೇಡ ಭೇದ ಭಾವನೆ ನೆಲಜಲ ಗಾಳಿ ಬೆಳಕುಗಳೆಮಗೆ ಸಮಾನ ಮಾನ್ಯತೆ ನೀಡುವ ಹಾಗೆ || 2 || ಶಂಖ ಜಾಗಟೆ ನಗಾರಿ ಮದ್ದಳೆ ಧರ್ಮದುಂದುಭಿ ಮೊಳಗಲಿ ಎಲ್ಲೆಡೆ […]
ಹಳೆಯಬೀಡಿನ ಬಳಿಯ ಹೊಯ್ಸಳೇಶನ ಗುಡಿಯ ಹೊರವಲಯದಲಿ ಹೋಳುಹೋಳಾಗಿ ಗೋಳಿಡುತ || ಪ || ಪಾಳು ಬಿದ್ದಿಹ ಕಲ್ಲುಗಳ ಕಣ್ದೆರೆದು ನೋಡು ! ಹಾಳು ಹಂಪೆಯ ಪಾಳಿನೊಳಗೊಮ್ಮೆ ಓಡಾಡಿ ಅಂದಳಿದ ಮಾತೆಯರ ಕಂಬನಿಯೆ ಕಲ್ಲಾಯ್ತೊ ಎಂದೆನಿಪ ಆ ಮೂಕ ರೋದನದುಲಿಯ ಕೇಳು – ಮನಗೊಟ್ಟು ಕಿವಿಗೊಟ್ಟು ಕೇಳು ; ಏಳು ಭಾರತೀಯ ಮೇಲೇಳು ! || 1 || ಬೇಲೂರ ಬಾಲೆಯರ ಬೆಡಗು ಬಿನ್ನಾಣಗಳ ಕೈಯಾರ ಕೆಡಿಸಲಾಶಿಸಿದ ಕೇಡಿಗಳಾರು ? ಜಗದಚ್ಚರಿಯ ಶಿಲ್ಪ ಸೌಂದರ್ಯ ಮೂರ್ತಿಗಳ ಅಂದಚಂದಗಳನಳಿಸಲೆಳೆಸಿದ ಖಳನಾರು […]
ಹರ ಮಹದೇವ್ ಹರ ಮಹದೇವ್ ಹರ ಹರ ಹರ ಹರ ಹರ ಮಹದೇವ್ || ಪ || ಶಿವರಾಯನ ಮಹದೇವನು ಒಮ್ಮೆ ಬಾರೆಂದು ಬಳಿಗೆ ಕರೆಯಿಸುತ ಶಿವ ನೀ ಧರ್ಮವ ಸಲಹಲು ಬೇಗನೆ ಭಾರತ ಭೂಮಿಗೆ ನಡೆಯೆಂದ || 1 || ಅಂಬಾ ಭವಾನಿ ಲೋಕದ ತಾಯಿ ಶಿವನನು ಅಂದು ಹರಸಿದಳು ಇಂಬಾಗಿ ವಿಜಯಲಕ್ಷ್ಮಿಯ ಸಂತತ ಬವರದಿ ನಿನ್ನಲಿ ನಿಲಲೆಂದು || 2 || ಶಿವನಂದು ನಮ್ಮ ಭೂಮಿಗೆ ಬಂದ ಹರನಾಣತಿಯನು ನಡೆಸಲಿಕೆ ಅವನಾಣತಿಯನು ನಡೆಸಿದ ಮನುಜಗೆ […]
ಸ್ವಾರ್ಥರಹಿತ ಕ್ರಾಂತಿ ಎನುವ ವಿಜಯಗಾನ ಮೊಳಗುವಾ ದೇಶಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸುವಾ || ಪ || ನೊಂದಮನದ ತಾಯಕರೆಗೆ ಧಿಗ್ಗನೆದ್ದು ನಿಲ್ಲುವಾ ಬೆಂದ ಒಡಲ ಉರಿಯ ಬೇಗೆಯನ್ನು ಶಮನಗೊಳಿಸುವಾ ತಾಯ ಶಿರವ ತರಿಯ ಬಂದ ಅರಿಯ ಅಂತ್ಯಗೊಳಿಸುವಾ ಆಕೆ ಘನತೆಗೆಂದು ಕುಂದು ಬಾರದಂತೆ ಸೆಣಸುವಾ || 1 || ಶೌರ್ಯ ಮೆರೆದ ನಾಡಿನಲ್ಲಿ ಹೇಡಿತನವು ಸಲ್ಲದು ಕಾರ್ಯಕ್ಷೇತ್ರ ಕೂಗಿಕರೆಯೆ ಕಿವುಡುತನವು ಕೂಡದು ಕ್ರೌರ್ಯ ಕಪಟ ಕುಟಿಲನೀತಿ ಜನತೆಯಿನ್ನು ಸಹಿಸದು ಧೈರ್ಯದಿಂದ ಎದ್ದುನಿಲಲು ದುರುಳರಾಟ ನಡೆಯದು || 2 […]
ಸ್ವಾತಂತ್ರ್ಯದ ಅರುಣೋದಯ ಸಾರುತ ಹಾರುತ ಧ್ವಜ ಭಗವಾ ದಾಸ್ಯದ ಇರುಳಿಗೆ ಪಂಜಾಗುರಿಯುತ ಬೆಳಬೆಳಗಿತು ನಭವ || ಪ || ಸ್ವತಂತ್ರ ಗಡಗಳ ಗುಡಿಗೋಪುರಗಳ ತಲೆತಲೆಗಳ ಮೇಲೆ ಕೃಪಾಛಾಯೆಯದೋ ಸಿಂಧು ಸಮುದ್ರದ ಅಲೆ ಅಲೆಗಳ ಮೇಲೆ ಅರಮನೆ ಗುರುಮನೆ ಜನತಾ ಕೋಟಿಯ ಮನೆ ಮನೆಗಳ ಮೇಲೆ ಗಡಿನಾಡಿನ ತುದಿಕೋಡಿನ ಪಹರೆಯ ನೆಲೆ ನೆಲೆಗಳ ಮೇಲೆ || 1 || ಪ್ರಾಣ ಪುಷ್ಪಗಳ ಕಾಣಿಕೆಯೊಯ್ಯುವ ಶೂರರ ಹೆಗಲಿನಲಿ ಮಹಾ ಪರಾಕ್ರಮಿ ಮಾವಳಿಯೋಧರ ಭೀಮ ಬಾಹುಗಳಲಿ ಆನಂದದ ಶುಭ ಸಂವತ್ಸರದಲಿ ಸಿಂಹಾಸನವೇರಿ […]
ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ ಸ್ವಾಗತವು || ಪ || ಆಗಸದ ವೈಶಾಲ್ಯ ಸಾಗರದ ಗಾಂಭೀರ್ಯ ಹಿಮಗಿರಿಯ ವರಸ್ಥೈರ್ಯ ಮೂರ್ತಿಮಂತನೆ ನಿನಗೆ || 1 || ಹೃದಯದ ಔದಾರ್ಯ ಮಮತೆಯ ಮಾಧುರ್ಯ ಸಂಘಟನ ಚಾತುರ್ಯ ಮಾರ್ಗದರ್ಶಕ ನಿನಗೆ || 2 || ಕೇಶವನ ಪ್ರತಿಬಿಂಬ ರಾಷ್ಟ್ರದೀಪದ ಸ್ತಂಭ ದೇಶಭಕ್ತಿಯ ಕುಂಭ ಶಕ್ತಿದಾತನೆ ನಿನಗೆ || 3 || ಸಂಸ್ಕೃತಿಯ ಸುವಿಚಾರ ಋಷಿವರ್ಯರಾಚಾರ ಭವಿತವ್ಯದುಚ್ಚಾರ ಯೋಗಿವರ್ಯನೆ ನಿನಗೆ || 4 || ಜಯಜಯವು ಭಾರತಿಗೆ ಜಯಜಯವು ಕೇಶವಗೆ […]