ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ

ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ
ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ ||

ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ
ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ
ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ
ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 ||

ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು
ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು
ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು
ಇಂಥ ಹೀನ ಜನರ ಹೃದಯ ಸೀಳುವಂತೆ ನುಗ್ಗಿಬಾ || 2 ||

ಕೇಶವ ಮಾಧವರಂತೆ ಹಲವರು ಯುಗ ಪುರುಷರು
ಹಿಂದು ರಾಷ್ಟ್ರದೇಳಿಗೆಗೆ ಪ್ರಾಣತೆತ್ತ ವೀರರು
ಅವರ ಆದರ್ಶ ಮಾರ್ಗವಿಂದು ಅಮರ ಜ್ಯೋತಿಯು
ಅದರ ಅಡಿಯಲಿಂದೆ ನಡೆದು ದೇಶ ಕಾರ್ಯ ಮಾಡು || 3 ||

Leave a Reply

Your email address will not be published. Required fields are marked *

*

code