ಹಿಂದೂ ನಾವು ನೂತನಯುಗವನು

ಹಿಂದೂ ನಾವು ನೂತನ ಯುಗವನು
ನಿರ್ಮಿಸಿ ನಡೆಸುವ ಸೂತ್ರಕರು
ಹಿಂದೂ ವೀರರು ನಮ್ಮನು ತಡೆಯುವ
ಬಂಧನವೆಲ್ಲಿದೆ, ಎದುರಾರು ? || ಪ ||

ಬಹು ಬಲಶಾಲಿಯು ಅಂತಃಕರಣವು
ನಮ್ಮಯ ಬಲ ನಮ್ಮೊಳಗಿಹುದು
ಬಹುವಿಧ ಬಾಧೆಯ ದುಃಖಕೆ ಬೆದರೆವು
ಎದೆಗಾರಿಕೆ ನಮ್ಮೊಳಗಿಹುದು
ಆಸುರವೃತ್ತಿಯ ರಾಗದ್ವೇಷದ
ಮಾಯಾ ಮೋಹಕೆ ಹಗೆ ನಾವು
ಸಾಸಿರ ಆಸೆಯ ಮುರಿಯುತ ಸುಖಸುಮ
ಶಯ್ಯೆಯನೊದೆಯುತ ನಡೆಯುವೆವು || 1 ||

ಚಿಂತೆಯ ಕಂತೆಯ ಬೇಗೆಯು ಬಾರದು
ನಿರ್ಮಲ ಕರ್ಮಠ ಮನದಲ್ಲಿ
ಸಂತತ ಶಾಂತದಿ ನಡೆದಿರೆ ಒಂದರೆ
ಚಣವೆಥೆ ತಡೆಯದು ಪಥದಲ್ಲಿ
ಮನದಲಿ ಆಸೆಯು ಕುಗ್ಗದು ದಾರಿಯ
ದಣುವಿಕೆ ತಡೆಯದು ಮಾರ್ಗವನು
ಕೊರಗದ ಹೃದಯದ ದೀಪವು ಹರಡಿದೆ
ಪ್ರತಿಕ್ಷಣ ನೂತನ ಕಿರಣವನು || 2 ||

ಪ್ರಗತಿಯ ಪಥದಲಿ ಅಡಿಗಳ ಕೆಡದಲೆ
ಬಾಗದೆ ಬಳುಕದೆ ನಡೆಯುವೆವು
ಅಗಣಿತ ಯುಗ ಯುಗ ಕಂಟಕವೆದುರಿಸಿ
ಗೆಲ್ಲುತ ಧಾವಿಸಿ ನಡೆಯುವೆವು
ದೃಢ ವಿಶ್ವಾಸದ ಶಸ್ತ್ರವ ತ್ಯಾಗದ
ಕವಚವ ತೊಟ್ಟೆವು ರಣಕಾಗಿ
ಸುಡಿಸುತ ನಡೆವೆವು ತನು ಜೀವನಗಳ
ನಿಜ ವೈಭವ ಚಿರ ಸುಖಕಾಗಿ || 3 ||

Leave a Reply

Your email address will not be published. Required fields are marked *

*

code