ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ

ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ
ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ
ಅಜಯ ಗೀತೆ ಅಭಯ ಗೀತೆ ವಿಜಯ ಗೀತೆ ಹಾಡುವಾ || ಪ ||

ವಿಂಧ್ಯ ಸಹ್ಯ ನೀಲಗಿರಿಯು ಹಿಮಗಿರಿಗೇ ಬೆಂಬಲ,
ಬಂಜೆಯಲ್ಲ ಭಾರತಾಂಬೆ ಶೂರಸುತರದೀ ನೆಲ
ಕೆಡುಕನಳಿಸೆ, ಒಳಿತು ಗಳಿಸೆ ಸಿದ್ಧವಿಹುದು ತೋಳ್ಬಲ || 1 ||

ನಾವು ಅಮರ ಪುತ್ರರು, ನರ ನಿಮಿತ್ತ ಮಾತ್ರರು
ಗೋತ್ರಭಿದನ ಗೋತ್ರರು, ಮೃತ್ಯುಂಜಯ ಮಿತ್ರರು
ಕ್ಷಯವಿಲ್ಲದ ಕ್ಷಾತ್ರರು, ಅಲ್ಲ ಗಲಿತಗಾತ್ರರು || 2 ||

ಮಾನವನ್ನೆ ಬಲಿಯ ಕೊಟ್ಟು ಬಾಳಬಹುದೆ ಮಾನವ ?
ತಡವಿದೇಕೆ ತಡೆವುದೇಕೆ ದ್ರೋಹಿಯ ಹೊರಗಟ್ಟುವಾ
ಹಗೆಯ ಮೆಟ್ಟಿ, ಹೆಣವನೊಟ್ಟಿ, ವಿಜಯದುರ್ಗ ಕಟ್ಟುವಾ || 3 ||

ಚಾಮುಂಡಿ ಔತಣಕ್ಕೆ, ಶತ್ರು ರಕ್ತ ತರ್ಪಣ
ರಾಷ್ಟ್ರದೇಕಾತ್ಮ ಶಕ್ತಿಗೆಮ್ಮ ಹೃದಯದರ್ಪಣ
ದೇಹಗೇಹನೇಹವೆಲ್ಲ ಅನ್ನಿ ರಾಷ್ಟ್ರಾರ್ಪಣ || 4 ||

ಇಂದು ಸಾಯಲಾರದವನು ಎಂದು ಬದುಕಲರಿಯನು
ದೇಶದ ಮೊರೆ ಧರ್ಮದ ಕರೆ ಕರ್ತವ್ಯದ ಕಡು ತ್ವರೆ
ರಣಕಹಳೆಯು ಮೊಳಗುತ್ತಿರೆ ಜೀವಗಳ್ಳರುಳಿವರೆ ? || 5 ||

One thought on “ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ

  1. ಸಾಮೂಹಿಕ ಕಾರ್ಯಕ್ಕೆ ಶಕ್ತಿ ತುಂಬುವ ಉತ್ಸಾಹಭರಿತ ಹಾಡು.

    • Phone No: 09448513317

Leave a Reply

Your email address will not be published. Required fields are marked *

*

code