ಹಿಂದೂ ರಾಷ್ಟ್ರದ ಪರಮವೈಭವದ

ಹಿಂದೂರಾಷ್ಟ್ರದ ಪರಮ ವೈಭವದ ಸಾಧನಮಾರ್ಗದಲೀss
ನವಚೈತನ್ಯದ ನವತೇಜಸ್ಸಿನ ಶಕ್ತಿಯು ಇಹುದಿಲ್ಲೀss || ಪ ||

ನವೋತ್ಸಾಹ ನವಿರೇಳುತಿದೆ ಹಿಂದು ಭೂಮಿಯಾ ಕಣಕಣದಲ್ಲಿ
ಸಹಸ್ರವರ್ಷದ ದೌಭಾಗ್ಯದ ಕಲೆ ಅಳಿಯುವುದು ಜನಮನದಲ್ಲಿ
ಹಿಂದು ಸಮಾಜವು ವಿರಾಟಶಕ್ತಿಯ ಶೀಘ್ರದಿ ಮೆರೆವುದು ಜಗದಲ್ಲಿ
ಚೇತನರೂಪಿ ಭಗವಾಧ್ವಜವು ಹಾರುವುದು ಪ್ರತಿ ಊರಲ್ಲಿ || 1 ||

ಸಾಧು ಸಂತರು ಹೊರಟಿಹರಿಂದು ಹಿಂದು ಚೇತನವ ಬಡಿದೆಬ್ಬಿಸಲು
ತರುಣ ಕೋಟಿಯು ಕಂಕಣಬದ್ಧರು ಪರಮವೈಭವದ ರಾಷ್ಟ್ರಕಟ್ಟಲು
ಜನಸಾಗರವು ಉಕ್ಕಿ ಹರಿವುದು ಸಮಾಜದೇಕತೆ ನಭಕೆ ಸಾರಲು
ಬಡವ ಬಲ್ಲಿದ ಪಂಡಿತ ಪಾಮರರೆನ್ನುವ ಕಂದಕ ತೊಡೆದು ಹಾಕಲು || 2 ||

ಸಹಿಸಲಾರೆವು ಅಪಮಾನವನು, ದೂರಿಸುವೆವು ದುಮ್ಮಾನವನು
ವೈರಿಯ ಸಂಚನು ಪುಡಿಗಟ್ಟುವ ಛಲದೊಂದಿಗೆ ವೃದ್ಧಿಸಿ ಬಲವನ್ನು
ಸಾಗುವೆವೆತ್ತರ ಮನುಕುಲದೇಳಿಗೆ, ಹಿರಿಯರು ತೋರಿದ ದಾರಿಯನು
ಬಂಧು ಸ್ನೇಹದಿ ಶಾಂತಿ ಸಮೃದ್ಧಿಯ ಕಟ್ಟುವೆವು ನವರಾಷ್ಟ್ರವನು || 3 ||

Leave a Reply

Your email address will not be published. Required fields are marked *

*

code